ಉಡುಪಿ

ಉಡುಪಿ ಪರ್ಬ: ‘ಹೆಲಿ ಟೂರಿಸಂ’ಗೆ ಚಾಲನೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಇದಕ್ಕಿಂತ ಉತ್ತಮ ಅವಕಾಶ ಬೇರೆಲ್ಲೂ ಸಿಗುವುದಿಲ್ಲ. ಆದ್ದರಿಂದ ಗರಿಷ್ಠ ಮಟ್ಟದಲ್ಲಿ ಇವುಗಳನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು

ಸಚಿವ ಪ್ರಮೋದ್ ಮಧ್ವರಾಜ್ ಅವರು ಹೆಲಿಕಾಪ್ಟರ್ ಹಾರಾಟ ನಡೆಸುವ ಮೂಲಕ ಹೆಲಿ ಟೂರಿಸಂಗೆ ಚಾಲನೆ ನೀಡಿದರು.

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ 29ರಿಂದ 31ರ ನಡೆಯಲಿರುವ ‘ಉಡುಪಿ ಪರ್ಬ’ದ ಅಂಗವಾಗಿ ನಗರದ ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ‘ಹೆಲಿ ಟೂರಿಸಂ’ಗೆ ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಚಾಲನೆ ನೀಡಿದರು.

ಆ ನಂತರ ಮಾತನಾಡಿದ ಅವರು, ಉಡುಪಿಯಲ್ಲಿ ಕಾಡು, ಹಿನ್ನೀರು, ಸಮುದ್ರ ಹಾಗೂ ಪ್ರಸಿದ್ಧ ದೇವಾಲಯಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದಕ್ಕಿಂತ ಉತ್ತಮ ಅವಕಾಶ ಬೇರೆಲ್ಲೂ ಸಿಗುವುದಿಲ್ಲ. ಆದ್ದರಿಂದ ಗರಿಷ್ಠ ಮಟ್ಟದಲ್ಲಿ ಇವುಗಳನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿಯೇ ಹೆಲಿ ಟೂರಿಸಂಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಹೆಲಿಕಾಪ್ಟರ್ ಪ್ರಯಾಣ ಮಾಡಬೇಕು ಎಂಬುದು ಎಲ್ಲ ಜನರ ಆಸೆ ಆಗಿರುತ್ತದೆ. ಅಲ್ಲದೆ ವೈಮಾನಿಕ ನೋಟದಲ್ಲಿ ಊರು ಹೇಗೆ ಕಾಣುತ್ತದೆ ಎಂಬ ಕುತೂಹಲ ಸಹ ಇರುತ್ತದೆ. ಹೆಲಿ ಟೂರಿಸಂ ಮೂಲಕ ಬಯಕೆ ಈಡೇರಿಸಿಕೊಳ್ಳಬಹುದು. ಇದೇ 27ರ ವರೆಗೆ ಅವಕಾಶ ಇದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನವಾಗಿ ಹೆಲಿ ಟೂರಿಸಂ ಆರಂಭಿಸಲಾಗಿದೆ. ಇಲ್ಲಿರುವ ಸುಮಾರು 6 ಎಕರೆ ಜಾಗವನ್ನು ಸಹ ಪ್ರವಾಸೋದ್ಯಮ ಇಲಾಖೆ ಹೆಸರಿಗೆ ನೀಡಲಾಗಿದೆ. ಶಾಶ್ವತ ಹೆಲಿ ಟೂರಿಸಂ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಎಂಟು ನಿಮಿಷಗಳ ಪ್ರಯಾಣಕ್ಕೆ ₹2,500 ನಿಗದಿಪಡಿಸಲಾಗಿದೆ. ಸಾಹಸ ಯಾನಕ್ಕೆ ₹3,500 ಇದೆ. ವೈಮಾನಿಕ ಸ್ಟಂಟ್‌ಗಳನ್ನು ಮಾಡಲಾಗುತ್ತದೆ. 28ರಿಂದ ಕುಂದಾಪುರದಲ್ಲಿ ಹೆಲಿ ಟೂರಿಸಂ ಆರಂಭವಾಗಲಿದೆ.

ಸುಂದರ ಉಡುಪಿ ದರ್ಶನ

ಮುಖ್ಯಮಂತ್ರಿ ಅವರೊಂದಿಗೆ ಹಲವು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದೇನೆ. ವಿದೇಶಗಳಲ್ಲಿ ಸಹ ಹೆಲಿಕಾಪ್ಟರ್ ಮೂಲಕ ಪ್ರವಾಸಿ ತಾಣ ವೀಕ್ಷಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಹೆಲಿಕಾಪ್ಟರ್ ಮೂಲಕ ನೋಡುವ ಅವಕಾಶ ಸಿಕ್ಕಿತ್ತು. ಉಡುಪಿ, ಮಲ್ಪೆ ಮತ್ತು ಮಣಿಪಾಲ ತುಂಬಾ ಸುಂದರವಾಗಿ ಕಾಣಿಸಿತು. ಇದೊಂದು ಹೊಸ ಅನುಭವ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

ಉಡುಪಿ
ಪ್ರಶ್ನೆ ಕೇಳುವವರ ಮೇಲೆ ಐಟಿ, ಇಡಿ ದಾಳಿ

16 Jan, 2018

ಉಡುಪಿ
ಹರಿದು ಬಂತು ಹೊರೆ ಕಾಣಿಕೆ

ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅವರ ದ್ವಿತೀಯ ಪರ್ಯಾ ಯದ ಅಂಗವಾಗಿ ವಿವಿಧ ಸಂಘಟನೆ, ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗ ಳಿಂದ ಭಾರಿ ಪ್ರಮಾಣದ ಹೊರೆಕಾಣಿಕೆ ಸಂದಾಯವಾಗಿದೆ. ...

16 Jan, 2018
’ರೈತರ ಸ್ವಾಭಿಮಾನದ ಕ್ರೀಡೆ ಕಂಬಳ’

ಪಡುಬಿದ್ರಿ
’ರೈತರ ಸ್ವಾಭಿಮಾನದ ಕ್ರೀಡೆ ಕಂಬಳ’

15 Jan, 2018

ಹೆಬ್ರಿ
‘ಮಧುಮೇಹ ಜಗತ್ತನ್ನು ಕಾಡುತ್ತಿದೆ’

ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರಬಾಬು ಕಾರ್ಯಕ್ರಮ ಉದ್ಘಾಟಿಸಿ, ಸೀತಾನದಿ ವಿಠ್ಠಲ ಶೆಟ್ಟಿ ನೇತೃತ್ವದ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ...

15 Jan, 2018
ಮಲ್ಪೆ ಕಡಲ ಕಿನಾರೆಯಲ್ಲಿ ಮೊಳಗಿದ ವಿಶ್ವ ದಾಖಲೆಯ ‘ವಂದೇ ಮಾತರಂ’

ಉಡುಪಿ
ಮಲ್ಪೆ ಕಡಲ ಕಿನಾರೆಯಲ್ಲಿ ಮೊಳಗಿದ ವಿಶ್ವ ದಾಖಲೆಯ ‘ವಂದೇ ಮಾತರಂ’

14 Jan, 2018