ದೇವರ ಹಿಪ್ಪರಗಿ

ರಜತ ಮಹೋತ್ಸವ; ಸ್ವಚ್ಛತಾ ಅಭಿಯಾನ

ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಅಸಮರ್ಪಕ ವಿತರಣೆ ಹಾಗೂ ಅವ್ಯವಹಾರ ವಿರೋಧಿಸಿ ಮುಳಸಾವಳಗಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

ದೇವರ ಹಿಪ್ಪರಗಿ: ಪಡಿತರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಅಸಮರ್ಪಕ ವಿತರಣೆ ಹಾಗೂ ಅವ್ಯವಹಾರ ವಿರೋಧಿಸಿ ಮುಳಸಾವಳಗಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಕಾರ್ಯಕರ್ತರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಕೆಲ ತಿಂಗಳುಗಳಿಂದ ಸೀಮೆಎಣ್ಣೆ ಸೇರಿದಂತೆ ಪ್ರತಿ ತಿಂಗಳು ವಿತರಿಸುವ ಪಡಿತರವನ್ನು ಸರಿಯಾದ ಸಮಯಕ್ಕೆ ನೀಡದ ಕಾರಣ ಜನರಿಗೆ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಪ್ರಶ್ನಿಸಿದರೆ ‘ಅವಾಚ್ಯ ಶಬ್ದದಿಂದ ಅವಮಾನಿಸುತ್ತಾರೆ. ಇದರಿಂದ ಬೇಸತ್ತ ಜನ ವಿತರಣೆ ಮಾಡುವವರ ಹತ್ತಿರ ಮಾತನಾಡಲು ಆಗದಂತಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸಬೇಕಾಯಿತು’ ಎಂದು ವೇದಿಕೆಯ ಅಧ್ಯಕ್ಷ ಶಾಂತು ನಾಗರಳ್ಳಿ ಹೇಳಿದರು.

ರೈತ ಘಟಕದ ಅಧ್ಯಕ್ಷ ಉಮೇಶ ಬಿರಾದಾರ‘ಈಗಿರುವ ಪಡಿತರ ವಿತರಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಣೆ ಮಾಡುವುದಿಲ್ಲ’ ಎಂದರು. ಪದಾಧಿಕಾರಿಗಳಾದ ಯಲ್ಲಾಲಿಂಗ ನಾಗಠಾಣ, ದಾವುದ್ ಇನಾಮದಾರ, ವಿಠ್ಠಲ ಬಿರಾದಾರ, ಮಾಂತೇಶ ಬಮನಳ್ಳಿ, ಗೌಡಪ್ಪ ಬಸರಕೋಡ, ಗುರುಸಂಗ ನಾಗರಳ್ಳಿ, ಶ್ರೀಶೈಲ ಮೆಳ್ಳಿಗೇರಿ, ಅಬ್ಬಾಸಲಿ ಪಠಾಣ, ಬಸು ನಾಟೀ ಕಾರ, ರಾಜು ಬೂದಿಹಾಳ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

ಮುದ್ದೇಬಿಹಾಳ
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

19 Jan, 2018

ವಿಜಯಪುರ
ನಾಲತವಾಡದ ಹೋರಿ ಚಾಂಪಿಯನ್..!

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ರಾಯನಗೌಡ ಮಲ್ಲನಗೌಡ ಚಿತ್ತಾಪುರ ಅವರ ಹಾಲು ಹಲ್ಲಿನ ಹೋರಿ ವಿಜಯಪುರ ಹೊರ ವಲಯದ ತೊರವಿಯಲ್ಲಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆದ...

19 Jan, 2018