ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಡಂಬಿ ಕೃಷಿಗೆ ರೈತರು ಒಲವು ತೋರಲಿ’

Last Updated 23 ಡಿಸೆಂಬರ್ 2017, 6:44 IST
ಅಕ್ಷರ ಗಾತ್ರ

ಯಾದಗಿರಿ:ಗೋಡಂಬಿ ಕೃಷಿ ವ್ಯವಸಾಯಕ್ಕೆ ರೈತರು ಹೆಚ್ಚಿನ ಒಲವು ತೋರಬೇಕು ಎಂದು ತೋಟಗಾರಿಕೆ ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ.ರೇವಣಪ್ಪ ಹೇಳಿದರು. ಸಮೀಪದ ಗೌಡಗೇರಾ ಗ್ರಾಮದಲ್ಲಿ ಈಚೆಗೆ ಗೇರು ಅಭಿವೃದ್ಧಿ ಯೋಜನೆಯಡಿ ನಡೆದ ಗೋಡಂಬಿ ಬೇಸಾಯಕ್ರಮಗಳ ಕುರಿತು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗೋಡಂಬಿಯ ಬೇಡಿಕೆಯೂ ಜಾಸ್ತಿ ಇದ್ದು, ಅಧಿಕ ಲಾಭದಾಯಕ ಕೃಷಿಯಾಗಿದೆ. ಹಲವು ತಿಂಡಿತಿನಿಸುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಗೋಡಂಬಿಯಲ್ಲಿ ಪೌಷ್ಟಿಕಾಂಶ ಇರುವುದರಿಂದ ಮನುಷ್ಯನಲ್ಲಿ ಶಕ್ತಿ ವೃದ್ಧಿಸಲು ಸಹಕಾರಿ ಎಂದರು.

ಗೋಡಂಬಿ ಬೆಳೆಗೆ ಟೀ ಸೊಳ್ಳೆ ಕೀಟದಿಂದ ರೋಗ ಹರಡುತ್ತದೆ. ಸಮಗ್ರ ಪದ್ಧತಿ ಅನುರಿಸಿಕೊಂಡು ರೋಗ ನಿಯಂತ್ರಿಸಲು ಅಥವಾ ಹತೋಟಿಗೆ ತರಲು ಸಾಧ್ಯವಿದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ಶಶಿಕಾಂತ್ ಗುತ್ತೇದಾರ ಅವರು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಅಧಿಕಾರಿ ಬೀರಲಿಂಗಪ್ಪ ಪೂಜಾರಿ, ಗ್ರಾಮದ ಮುಖಂಡಜಯರಾಮ, ಮಲ್ಲಣ್ಣ, ಅನಂದ, ಬನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT