ನಾಪೋಕ್ಲು

ಅನುಪಯುಕ್ತ ವಸ್ತುಗಳಲ್ಲಿ ಅರಳಿದ ಕಲಿಕೋಪಕರಣ

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿಸಲಾಗಿರುವ ಭಾಷಾ ಸಂಘ ಮೂವರು ಶಿಕ್ಷಕರ ಕನಸಿನ ಪ್ರಯತ್ನದಿಂದ ಮೂಡಿಬಂದಿದ್ದು, ಗಮನ ಸೆಳೆಯುತ್ತಿದೆ.

ಪ್ರೌಢಶಾಲೆಯ ಭಾಷಾ ಸಂಘದ ಉಸ್ತುವಾರಿ ಹೊತ್ತ ಶಿಕ್ಷಕಿಯರು

ನಾಪೋಕ್ಲು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನದಂತಹ ವಿಷಯಗಳು ಕ್ಲಿಷ್ಟಕರ ಎಂಬುದು ಸಾಮಾನ್ಯರ ಭಾವನೆ. ಆದರೆ, ‘ಭಾಷಾ ಸಂಘ’ ಇದನ್ನು ದೂರ ಮಾಡಿದೆ.

ಇದರೊಂದಿಗೆ ಭಾಷೆಗಳ ಕಲಿಕೆಯೂ ಸುಲಭವೇನಲ್ಲ. ದಿನನಿತ್ಯದ ಜೀವನದಲ್ಲಿ ಭಾಷೆ ನಿರಂತರವಾಗಿ ಬಳಸಲ್ಪಡುತ್ತಿದ್ದರೂ ಪಠ್ಯದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟವೇ ಸರಿ. ಭಾಷೆಯ ಮೇಲೆ ವಿದ್ಯಾರ್ಥಿಗಳು ಹಿಡಿತ ಸಾಧಿಸಿದರೆ ಅದು ಇತರ ವಿಷಯಗಳ ಕಲಿಕೆಗೆ ಸಹ ಪೂರಕವಾಗಿರುತ್ತದೆ. ಈ ಕಲ್ಪನೆ ಹಾಗೂ ಉದ್ದೇಶ ಇಟ್ಟುಕೊಂಡು ಇಲ್ಲೊಂದು ಶಾಲೆಯಲ್ಲಿ ಭಾಷಾ ಸಂಘ ಸ್ಥಾಪಿಸಲಾಗಿದೆ.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿಸಲಾಗಿರುವ ಭಾಷಾ ಸಂಘ ಮೂವರು ಶಿಕ್ಷಕರ ಕನಸಿನ ಪ್ರಯತ್ನದಿಂದ ಮೂಡಿಬಂದಿದ್ದು, ಗಮನ ಸೆಳೆಯುತ್ತಿದೆ.

ಈ ಸಂಘದ ಮೂಲಕ ವಿದ್ಯಾರ್ಥಿ ಗಳು ಭಾಷಾ ಕಲಿಕೆಯನ್ನು ವಿಭಿನ್ನವಾಗಿ ಕಲಿಯಲು ಆಸಕ್ತರಾಗಿದ್ದಾರೆ. ಕನ್ನಡ ಭಾಷಾ ಶಿಕ್ಷಕಿ ಉಷಾರಾಣಿ, ಆಂಗ್ಲ ಭಾಷಾ ಶಿಕ್ಷಕ ಮಹಾಂತೇಶ್‌ ಕೋಠಿ ಹಾಗೂ ಹಿಂದಿ ಶಿಕ್ಷಕಿ ಅಶ್ವಿನಿ ಅವರ ಪ್ರಯತ್ನದಿಂದ ಹೊರಬಂದ ಭಾಷಾ ಸಂಘದ ಕೊಠಡಿ ಗಮನ ಸೆಳೆಯುತ್ತಿದೆ.

ಭಾಷಾ ಸಂಘದ ಕೊಠಡಿಯ ತುಂಬಾ ಕಲಿಕೋಪಕರಣಗಳು ತುಂಬಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ, ಅನುಪಯುಕ್ತ ವಸ್ತುಗಳಿಂದ ಮೂರೂ ವಿಷಯಗಳಿಗೆ ಸಂಬಂಧಿಸಿದ ಭಾಷಾ ಕಲಿಕೆಗೆ ಪ್ರೇರಣೆ ನೀಡುವ ಹತ್ತು ಹಲವು ಚಟುವಟಿಕೆಗಳಿವೆ. ಬಾಷಾ ಸಂಘದ ಮೂಲಕ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ.

ಅಂತೆಯೇ ಇಲ್ಲಿ ಶಿಕ್ಷಕರ ಕ್ರಿಯಾಶೀಲತೆಯಿಂದ ತಯಾರಿಸಲಾದ ಹಲವಾರು ಚಟುವಟಿಕೆಗಳಿವೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕವಿಗಳ ಪರಿಚಯ, ಜ್ಞಾನಪೀಠ ಪ್ರಶಸ್ತಿ ವಿಜೇತರ ವಿವರ, ಪ್ರಾಚೀನ ಕವಿಗಳ ವಿವರ, ವ್ಯಾಕರಣ ಸಂಬಂಧಿ ವಿಷಯಗಳು. ಸ್ವರಚಿತ ಕತೆ– ಕವನ, ಪಾಠಕ್ಕೆ ಸಂಬಂಧಿಸಿದ ಭಿತ್ತಿಚಿತ್ರ, ಭಿತ್ತಿಬರಹಗಳು ಇವೆ.

ಅಕ್ಷರ ಜಾರುಪಟ್ಟಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಅದೇ ರೀತಿ ಆಂಗ್ಲಭಾಷೆಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ಚಟುವಟಿಕೆಗಳಲ್ಲಿ ವ್ಯಕ್ತಪಡಿಸಲಾಗಿದೆ. ವಿದ್ಯಾರ್ಥಿಗಳು ಹೊಸ ಪರಿಕಲ್ಪನೆಗಳ ಹುಡುಕುವಿಕೆಗೆ ಪ್ರೋತ್ಸಾಹ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹಿಂದಿ ಭಾಷೆಯ ಚಟುವಟಿಕೆಗಳು ಹಲವಿದ್ದು ಎಲ್ಲವನ್ನೂ ಅನುಪಯುಕ್ತ ವಸ್ತುಗಳಿಂದ ಸಿದ್ದಪಡಿಸಲಾಗಿದೆ. ಕಾಳು, ಹತ್ತಿ, ಪೆನ್ಸಿಲಿನ ಕಸ, ಕಡಲೆಕಾಯಿ ಸಿಪ್ಪೆ ಮತ್ತಿತರ ವಸ್ತುಗಳನ್ನು ಬಳಸಿ ಕಲಿಕೋಪಕರಣಗಳನ್ನು ತಯಾರಿಸುವುದು ವಿಶೇಷ. ‘ಮಕ್ಕಳು ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದು ಮಕ್ಕಳ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಹಿಂದಿ ಶಿಕ್ಷಕಿ ಅಶ್ವಿನಿ.

* * 

ವಿದ್ಯಾರ್ಥಿಗಳಿಗೆ ಭಾಷೆಯಲ್ಲಿ ಆಸಕ್ತಿ, ಪ್ರೀತಿ ಮೂಡುವಂತೆ ಮಾಡುವುದು ಹಾಗೂ ತನ್ನಲ್ಲಿ ಅಡಗಿರುವ ಯೋಚನೆಗಳನ್ನು ಅರಳುವಂತೆ ಮಾಡುವುದು ಭಾಷಾ ಸಂಘದ ಉದ್ದೇಶವಾಗಿದೆ.
ಉಷಾರಾಣಿ, ಶಿಕ್ಷಕಿ

 

Comments
ಈ ವಿಭಾಗದಿಂದ ಇನ್ನಷ್ಟು
ಹೊಸಬರ ಹಟ: ಹಾಲಿ ಶಾಸಕರಿಗೆ ಸಂಕಟ

ಮಡಿಕೇರಿ
ಹೊಸಬರ ಹಟ: ಹಾಲಿ ಶಾಸಕರಿಗೆ ಸಂಕಟ

17 Jan, 2018

ಕುಶಾಲನಗರ
ಬಜೆಟ್‌ನಲ್ಲಿ ಘೋಷಣೆಗೆ ಒತ್ತಾಯಿಸಿ ನಿಯೋಗ

‘25 ದಿನಗಳಿಂದ ವಿವಿಧ ಹಂತಗಳಲ್ಲಿ ನಡೆಸಿದ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಮುಖ್ಯಮಂತ್ರಿಯಿಂದ ಕಾವೇರಿ ತಾಲ್ಲೂಕು ರಚನೆಗೆ ಸಕಾರತ್ಮಾಕ ಸ್ಪಂದನೆ ದೊರೆತಿದೆ. ...

17 Jan, 2018

ಶನಿವಾರಸಂತೆ
ಬೆಂಬಳೂರು: ಬಾಣಂತಮ್ಮ ಜಾತ್ರೆ ಸಡಗರ

ಸಮೀಪದ ಬೆಂಬಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಬಾಣಂತಮ್ಮ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲ ಗ್ರಾಮಸ್ಥರು ಮಹೋತ್ಸವಕ್ಕೆ ಸಾಕ್ಷಿಯಾದರು.

17 Jan, 2018
‘ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ’

ಸೋಮವಾರಪೇಟೆ
‘ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ’

16 Jan, 2018

ಕುಶಾಲನಗರ
ಕಾಮಗಾರಿ ಕಳಪೆ; ಗ್ರಾಮಸ್ಥರ ಆರೋಪ

ಕಾವೇರಿ ನೀರಾವರಿ ನಿಗಮ ₹ 70 ಲಕ್ಷ ವೆಚ್ಚದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಗುಮ್ಮನಕೊಲ್ಲಿಯಿಂದ ಗೋಪಾಲ್ ಸರ್ಕಲ್ ವರೆಗೆ 2 ಕಿ.ಮೀ ರಸ್ತೆ ಅಭಿವೃದ್ಧಿ...

16 Jan, 2018