ಬಾಗಲಕೋಟೆ

ಬಳ್ಳಾರಿ ಜಾಲಿ ಈಗ ಮದ್ದು!

‘ಈಗ ದುಂಡಾಣು ರೋಗಕ್ಕೆ ಸ್ಟ್ರೆಪ್ಟೊಸೈಕ್ಲಿನ್ ಎಂಬ ದ್ರಾವಣವನ್ನು ಬೆಳೆಗಾರರು ಸಿಂಪಡಿಸುತ್ತಾರೆ. ಅದರ ಬದಲಿಗೆ ಇಲ್ಲವೇ ಅದರೊಂದಿಗೆ ಕಷಾಯ ಬೆರೆಸಿದಲ್ಲಿ ಪರಿಣಾಮಕಾರಿ ನಿಯಂತ್ರಣ ಸಾಧ್ಯ.

ದಾಳಿಂಬೆ ದುಂಡಾಣು ಮಾರಿ ನಿವಾರಣೆಗೆ ರಾಮಬಾಣ ಬಳ್ಳಾರಿ ಜಾಲಿ ಸೊಪ್ಪಿನ ಕಷಾಯ

ಬಾಗಲಕೋಟೆ: ಮುಳ್ಳು ಬೇಲಿಯಾಗಿ, ಗಟ್ಟಿ ಉರುವಲಾಗಿ ಬಳಕೆಯಾಗುತ್ತಿದ್ದ ಬಳ್ಳಾರಿ ಜಾಲಿ ಇನ್ನು ಮುಂದೆ ದಾಳಿಂಬೆಯ ದುಂಡಾಣು ರೋಗದ ನಿಯಂತ್ರಕ ಮದ್ದಾಗಿ ಬಳಕೆಯಾಗಲಿದೆ.

ಬಳ್ಳಾರಿ ಜಾಲಿಯ ಸೊಪ್ಪಿನಿಂದ ಕಷಾಯ ತಯಾರಿಸಿ ಅದನ್ನು ನೀರಲ್ಲಿ ಬೆರೆಸಿ ದಾಳಿಂಬೆ ಗಿಡಕ್ಕೆ ಸಿಂಪಡಿಸುವ ಕೆಲಸವನ್ನು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನಿಗಳು ಮಾಡಿದ್ದಾರೆ. ಆ ಮೂಲಕ ದುಂಡಾಣು ರೋಗ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾದಾಮಿ ತಾಲ್ಲೂಕು ಗೋವನಕೊಪ್ಪದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಕಷಾಯ ಬಳಕೆ ಮಾಡಿ ರೋಗ ನಿಯಂತ್ರಣಕ್ಕೆ ತರಲಾಗಿದೆ. ಈಗ ತೋಟಗಾರಿಕೆ ಮೇಳದಲ್ಲಿ ಅದನ್ನು ದಾಳಿಂಬೆ ಬೆಳೆಗಾರರಿಗೆ ಪರಿಚಯಿಸಲಾಗುತ್ತಿದೆ ಎಂದು ಸಸ್ಯರೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎ.ಪಿ.ಕಿರಣ್‌ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 70ರಷ್ಟು ನಿಯಂತ್ರಣ: ‘ಬಳ್ಳಾರಿ ಜಾಲಿ ಸೊಪ್ಪನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನೇ ಕಷಾಯವಾಗಿ ಬಳಕೆ ಮಾಡಲಾಗುತ್ತದೆ. 50 ಗ್ರಾಂ ಸೊಪ್ಪಿನಿಂದ ತಯಾರಿಸಿದ ರಸವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಅದನ್ನು ಗಿಡಗಳಿಗೆ ಸಿಂಪಡಿಸಬೇಕಿದೆ. ಇದರಿಂದ ಶೇ 70ರಷ್ಟು ರೋಗ ನಿಯಂತ್ರಣ ಸಾಧ್ಯ’ ಎನ್ನುತ್ತಾರೆ ಕಿರಣ್‌ಕುಮಾರ.

‘ಈಗ ದುಂಡಾಣು ರೋಗಕ್ಕೆ ಸ್ಟ್ರೆಪ್ಟೊಸೈಕ್ಲಿನ್ ಎಂಬ ದ್ರಾವಣವನ್ನು ಬೆಳೆಗಾರರು ಸಿಂಪಡಿಸುತ್ತಾರೆ. ಅದರ ಬದಲಿಗೆ ಇಲ್ಲವೇ ಅದರೊಂದಿಗೆ ಕಷಾಯ ಬೆರೆಸಿದಲ್ಲಿ ಪರಿಣಾಮಕಾರಿ ನಿಯಂತ್ರಣ ಸಾಧ್ಯ.

ಈಗ ಪ್ರತಿ ಲೀಟರ್ ನೀರಿಗೆ 0.5 ಮಿಲಿ ಲೀಟರ್ ಸ್ಟ್ರೆಪ್ಟೊಸೈಕ್ಲಿನ್ ದ್ರಾವಣ ಬಳಕೆ ಮಾಡಲಾಗುತ್ತಿದೆ. ಕಷಾಯ ಬಳಸಿದಲ್ಲಿ ಆ ಪ್ರಮಾಣವನ್ನು 0.25 ಮಿಲಿ ಲೀಟರ್‌ಗೆ ಕಡಿಮೆ ಮಾಡಬಹುದು. ಹಿತ್ತಲ ಗಿಡದ ಈ ಮದ್ದನ್ನು ಬೆಳೆಗಾರರು ಸುಲಭವಾಗಿ ಹಾಗೂ ಯಾವುದೇ ಖರ್ಚಿಲ್ಲದೇ ಬಳಸಬಹುದು’ ಎಂದು ಅವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ: 94486–40881 ಇಲ್ಲಿಗೆ ಸಂಪರ್ಕಿಸಬಹುದು.

Comments
ಈ ವಿಭಾಗದಿಂದ ಇನ್ನಷ್ಟು

ಬಾಗಲಕೋಟೆ
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

ದೇಶದಲ್ಲಿ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡುತ್ತಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಬಾಗಲಕೋಟೆ ಮುಸ್ಲಿಂ...

21 Apr, 2018

ಬಾಗಲಕೋಟೆ
ಅಬಕಾರಿ ನಿಯಮ ಉಲ್ಲಂಘನೆ; ಚುನಾವಣೆ ಮುಗಿಯುವವರೆಗೂ ಅಂಗಡಿಗಳು ಬಂದ್

‘ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಜಿಲ್ಲೆಯ 17 ಮದ್ಯದ ಅಂಗಡಿಗಳ ಲೈಸೆನ್ಸ್‌ ಅಮಾನತು ಮಾಡಿ...

21 Apr, 2018

ಇಳಕಲ್
ಪಿಬಿಎಸ್‌ 5ನೇ ಸ್ವರ ಸ್ಮರಣೆ ಇಂದು

ಗಾಯಕ, ಮಾಧುರ್ಯ ಸಾರ್ವಭೌಮ ದಿ.ಡಾ.ಪಿ.ಬಿ.ಶ್ರೀನಿವಾಸ ಅವರ ‘5ನೇ ಸ್ವರ ಸ್ಮರಣೆ’ ಕಾರ್ಯಕ್ರಮ ಉದ್ಯಮಿ ರವೀಂದ್ರ ದೇವಗಿರಿಕರ್ ಹಾಗೂ ಸ್ನೇಹರಂಗ ಸಹಯೋಗದಲ್ಲಿ ಇಲ್ಲಿಯ ಅನುಭವ ಮಂಟಪದ...

21 Apr, 2018

ಇಳಕಲ್‍
ಅಪೂರ್ಣ ಕಾಮಗಾರಿ ಉದ್ಘಾಟನೆ: ಟೀಕೆ

ಹನಿ ನೀರಾವರಿ ಯೋಜನೆ ನಾನು ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅಪೂರ್ಣ ಕಾಮಗಾರಿಯನ್ನು ಮುಖ್ಯಮಂತ್ರಿ ಅವರನ್ನು ಕರೆಸಿ ಉದ್ಘಾಟಿಸುವ ಮೂಲಕ ಕಲ್ಲಿನಲ್ಲಿ...

21 Apr, 2018

ಹುನಗುಂದ
ಜನರ ಒತ್ತಾಯಕ್ಕೆ ಪಕ್ಷೇತರನಾಗಿ ಕಣಕ್ಕೆ: ಎಸ್‌.ಆರ್. ನವಲಿ ಹಿರೇಮಠ

‘ಚುನಾವಣೆಯ ಗೆಲುವನ್ನು ಪಕ್ಷ ಕೊಡುವುದಿಲ್ಲ; ಜನರ ಕೊಡುತ್ತಾರೆ. ಅವರ ಮನಸ್ಸನಲ್ಲಿ ನಾನು ಇದ್ದೇನೆ, ಜನರ ಅಭಿಪ್ರಾಯ, ಒತ್ತಾಯಕ್ಕಾಗಿ ಬಡವರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ...

21 Apr, 2018