ಶಿಗ್ಗಾವಿ

ಪರಿವರ್ತನಾ ಯಾತ್ರೆಗೆ ಭರ್ಜರಿ ಸಿದ್ಧತೆ

‘ಸಂತೆ ಮೈದಾನದಲ್ಲಿ ಬೃಹತ್ ವೇದಿಕೆ, ಸಾರ್ವಜನಿಕರಿಗೆ ಸುಮಾರು 50ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ

ಶಿಗ್ಗಾವಿ: ಪಟ್ಟಣದ ಸಂತೆ ಮೈದಾನದಲ್ಲಿ ಡಿ.23 (ಶನಿವಾರ) ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆ ಬಹಿರಂಗ ಸಭೆ ನಿಮಿತ್ತ ಬೃಹತ್‌ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಪಟ್ಟಣದ ಪಿಎಲ್‌ಡಿ ಬ್ಯಾಕ್‌ ವೃತ್ತ, ಮುಖ್ಯ ಪೇಟೆ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸ್ವಾಗತ ಕೋರಲು ಬ್ಯಾನರ್‌ಗಳನ್ನು ಹಾಕಲಾಗಿದೆ.

ಇಲ್ಲಿನ ಪ್ರವಾಸಿ ಮಂದಿರ ರಸ್ತೆ, ಗಂಗೀಬಾವಿ ಮುಖ್ಯ ರಸ್ತೆ, ಸವಣೂರ ರಸ್ತೆ, ಪುರಸಭೆ ವೃತ್ತದ ಬಳಿ ಸ್ವಾಗತ ಕೋರಲು ಕಮಾನ್‌ಗಳನ್ನು ಹಾಕಲಾಗಿದೆ. ವಾಹನಗಳ ಮೇಲೆ ಬ್ಯಾನರ್‌ ಹೊತ್ತುಕೊಂಡು ಧ್ವನಿವರ್ಧಕಗಳ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದ್ದರು.

‘ಸಂತೆ ಮೈದಾನದಲ್ಲಿ ಬೃಹತ್ ವೇದಿಕೆ, ಸಾರ್ವಜನಿಕರಿಗೆ ಸುಮಾರು 50ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, ಉಪಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

‘ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ಮುಖಂಡರು, ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಬರುವ ಯಾತ್ರೆಗೆ ತಡಸ ಕ್ರಾಸ್‌ದಿಂದ ಬೃಹತ್‌ ಬೈಕ್‌ ರ‍್ಯಾಲಿ ನಡೆಯಲಿದೆ. ನಂತರ ಪಟ್ಟಣದ ಪ್ರಮುಖ ರಸ್ತೆಯಾದ ಗಂಗೀಬಾವಿ ಕ್ರಾಸ್‌ದಲ್ಲಿ ಅದ್ದೂರಿ ಸ್ವಾಗತಿಸಲಾಗುವುದು’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಬ್ಯಾಡಗಿ
ಬ್ಯಾಡಗಿ ಬಂದ್‌ ಜ.25ಕ್ಕೆ

‘ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವಂತೆ ಒತ್ತಾಯಿಸಿ, ಜ.25ರಂದು ‘ಬ್ಯಾಡಗಿ ಬಂದ್‌‘ಗೆ ಕರೆ ನೀಡಲಾಗಿದೆ’ ...

17 Jan, 2018

ಶಿಗ್ಗಾವಿ
ಜ್ಞಾನ, ಕಾಯಕದಿಂದ ಸಮಾಜದ ಏಳಿಗೆ ಸಾಧ್ಯ

‘ಸಿದ್ಧರಾಮೇಶ್ವರರು ಧರ್ಮ, ಜ್ಞಾನ ಹಾಗೂ ಕಾಯಕದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಶ್ರಮಿಸುವ ಜೊತೆಗೆ ಅಪಾರ ಕೊಡುಗೆ ನೀಡಿದ್ದಾರೆ’

17 Jan, 2018
ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

ಹಾವೇರಿ/ಗುತ್ತಲ
ಜಾತ್ರೆ, ಸಂಕ್ರಾಂತಿಗೂ ನೀರಿನ ಸಂಕಷ್ಟ

16 Jan, 2018

ಬ್ಯಾಡಗಿ
ಕಾಗಿನಲೆ ಕನಕ ಉದ್ಯಾನದಲ್ಲಿ ಸಂಕ್ರಾಂತಿ ಸಂಭ್ರಮ

ವಿಶೇಷ ಸಂದರ್ಭದಲ್ಲಿ ಬ್ಯಾಡಗಿ, ಹಾವೇರಿಯಿಂದ ಕಾಗಿನೆಲೆ ಉದ್ಯಾನವನಕ್ಕೆ ಅಗತ್ಯ ಬಸ್‌ ಸೌಕರ್ಯ ಕಲ್ಪಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದರು.

16 Jan, 2018
ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ

ಹಾವೇರಿ
ಬೇಸಿಗೆ ಮೊದಲೇ ನೀರಿಗೆ ಹಾಹಾಕಾರ

15 Jan, 2018