ಕವಿತೆ

ಬಾಳೆಂಬ ವ್ರತ

ತಣಿಯದ ಹಸಿವುಗಳಲ್ಲಿ ಬಾರದ ಸುಗ್ಗಿ ಸಾಲುಗಳಲ್ಲಿ ಗಳೆಹೊಡೆದಿಳೆಗೆ ಸಸಿನೆಟ್ಟು ಹಂಬಲದ ರಾಶಿ ಒಕ್ಕಿದ್ದೆಷ್ಟೋ!

ಚಿತ್ರ: ಭಾವು ಪತ್ತಾರ್‌

1
ಕಟ್ಟುವುದು, ಕಾಪಾಡುವುದನ್ನು
ವ್ರತವಾಗಿಸಿಕೊಂಡ ದಾರಿ
ಏಗುತ್ತ ಅದೆಷ್ಟು ಸವಿಸಿದ್ದೇನೋ!
ಕಾವು ಕೊಟ್ಟು, ಸಾವನಟ್ಟಿ
ಗೂಡ ಕಾಯ್ವ ಹಕ್ಕಿಯಂತೆ
ಬಾಳ ಸಾವರಿಸಿದ್ದೆಷ್ಟೋ ಈತನಕ!

2
ಗೊಂಬೆಯಾಟ, ಪಾಠದಲ್ಲಿ
ನೋವಿನುರಿಯ ಶಾಲೆಯಲ್ಲಿ
ಗರಿಬಿಚ್ಚಿ ಕುಣಿವ ನವಿಲಂತೆ
ಕಲ್ಪನೆಯ ಬಣ್ಣ ತುಂಬಿದ್ದೆಷ್ಟೋ!

  3
ಪ್ರಣಯದಭಿಸಾರದಲ್ಲಿ
ಕಿಂಕಿಣಿಸುವ ಬಳೆ ತೊಟ್ಟು ಮೆಲ್ಲ,
ಪಾಳು ಕೋಟೆ ಗೋಡೆಯಲ್ಲಿ
ಪ್ರೀತಿ ಹಸಿರ ಬರೆದದ್ದೆಷ್ಟೋ!

4
ತಣಿಯದ ಹಸಿವುಗಳಲ್ಲಿ
ಬಾರದ ಸುಗ್ಗಿ ಸಾಲುಗಳಲ್ಲಿ
ಗಳೆಹೊಡೆದಿಳೆಗೆ ಸಸಿನೆಟ್ಟು
ಹಂಬಲದ ರಾಶಿ ಒಕ್ಕಿದ್ದೆಷ್ಟೋ!

5
ಬರಡಲ್ಲೇ ಮೇಯ್ದು, ಬಾಯಾಡಿಸುತ್ತ
ಮನೆಗೆ ಬರುವ ಹಸುಗಳಂತೆ
ನೆನಪು ಬಂದವು ಸಾಲು ಸಾಲಾಗಿ,
ಮೆಲುಕು ಹಾಕುತ್ತ ಕುಳಿತುಕೊಂಡೆ!

6
ಗೊಂಬೆ ಮೂಲೆಗೆಸೆದವರು,
ರೆಕ್ಕೆ ಕಿತ್ತಿ ನಕ್ಕವರು,
ಬೆಳೆಯ ಸುಟ್ಟು ಬೀಗಿದವರು,
ಕೆಡವುತ್ತ  ನಡೆದವರೀಗ
ಹೆಡೆ ಚೆಲ್ಲಿ ನಿಂತಿದ್ದಾರೆ!

7
ಕೆಡವುವ ಶಕ್ತಿ ಪಾರಮ್ಯಗಳೇ,
ಬಲ್ಲೆ ನಿಮ್ಮ ಬಲಾಬಲಗಳನ್ನು,
ನೀವು ಕೆಡವುತ್ತ ಹೋಗಿರಿ,
ಕಟ್ಟುತ್ತ ನಾ ಬರುವೆ,
ಸಮುದ್ರ ಮಂಥನದಲ್ಲಿ ದಣಿದವರು,
ಗೆದ್ದುಕೊಂಡಿದ್ದರು ಸೃಷ್ಟಿಯ ರಹಸ್ಯ!!

8
ಒಡಲಲ್ಲಿ ಮಿಸುಕುತ್ತಿವೆ ಈಗಲೂ
ಹುಟ್ಟುವಾಸೆಯ ನೂರು ಹಸುಳೆಗೆ
ಕಟ್ಟಬೇಕು ತೊಟ್ಟಿಲು, ಮುತ್ತಿಟ್ಟು, ನೆತ್ತಿ ಮೂಸಿ
ಜೋ ಎಂದು ಹಾಡಬೇಕು!!

Comments
ಈ ವಿಭಾಗದಿಂದ ಇನ್ನಷ್ಟು
ಸೋಲಿಗಿಂತ ಮಾನವೀಯತೆ ಮುಖ್ಯ

ಮಕ್ಕಳ ಕತೆ
ಸೋಲಿಗಿಂತ ಮಾನವೀಯತೆ ಮುಖ್ಯ

18 Mar, 2018
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

ವಿಜ್ಞಾನ ವಿಶೇಷ
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

18 Mar, 2018
ತೆಳ್ಳಗಿನ ಬಂಗಲೆ

ಕಥೆ
ತೆಳ್ಳಗಿನ ಬಂಗಲೆ

18 Mar, 2018
ಪಾದಕ್ಕೂ ಕಣ್ಣುಂಟು

ಕಾವ್ಯ
ಪಾದಕ್ಕೂ ಕಣ್ಣುಂಟು

18 Mar, 2018
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

ನೆನಪು
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

18 Mar, 2018