ಮೊದಲ ಓದು

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ಟಾಲ್‌ಸ್ಟಾಯ್‌ ತಮ್ಮ ಬದುಕಿನ ಅನುಭವದ ಮೂಸೆಯಲ್ಲಿ ಕಂಡುಕೊಂಡ ಸತ್ಯಗಳು ಮತ್ತು ಜಗತ್ತಿನ ಶ್ರೇಷ್ಠ ದಾರ್ಶನಿಕರ ಮಾತುಗಳನ್ನು ಸೇರಿಸಿ ಈ ಪುಸ್ತಕವನ್ನು ರೂಪಿಸಿದ್ದಾರೆ. ವೈಯಕ್ತಿಕವಾಗಿಯೂ ಇದು ಅವರಿಗೆ ತುಂಬ ಸಂತೃಪ್ತಿ ನೀಡಿದ ಕೃತಿ. ಇದನ್ನು ಅವರೇ ಬರೆದುಕೊಂಡಿದ್ದಾರೆ. ಮುನ್ನೂರ ಅರವತ್ತೈದು ಸರಳ, ಅಷ್ಟೇ ಮಹತ್ವದ ಸಂಗತಿಗಳನ್ನು ಪುಟ್ಟಪುಟ್ಟದಾಗಿ ಇಲ್ಲಿ ನೀಡಲಾಗಿದೆ

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ಜಗತ್ತು ಕಂಡ ಕೆಲವೇ ಕೆಲವು ಶ್ರೇಷ್ಠ ಲೇಖಕರಲ್ಲಿ ರಷ್ಯಾದ ಲಿಯೋ ಟಾಲ್‌ಸ್ಟಾಯ್‌ ಕೂಡ ಒಬ್ಬರು. ‘ಅನ್ನಾ ಕರೆನಿನಾ’, ‘ವಾರ್‌ ಆ್ಯಂಡ್‌ ಪೀಸ್‌’ನಂಥ ಕಾದಂಬರಿಗಳು, ಹಲವಾರು ಸಣ್ಣ ಕಥೆಗಳ ಮೂಲಕ ಅವರು ಅವರು ನಡೆಸಿದ ಸೃಜನಶೀಲ ಶೋಧ ಅಪೂರ್ವವಾದದ್ದು. ಲೇಖಕನಾಗಿಯಷ್ಟೇ ಅಲ್ಲ, ಅವರ ಬದುಕಿಗೆ ಇರುವ ದಾರ್ಶನಿಕ ಆಯಾಮವೂ ಅಷ್ಟೇ ಮಹತ್ವದ್ದು. ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ, ವೈಭೋಗದಲ್ಲಿಯೇ ಬೆಳೆದು ಇಹದ ಎಲ್ಲವನ್ನೂ ತೊರೆದು ಪರಕ್ಕಾಗಿ ಹಾತೊರೆಯುವ ಸಂತನ ಬದುಕಿಗಾಗಿ ಹಂಬಲಿಸಿದ ವ್ಯಕ್ತಿ ಅವರು.

ಕನ್ನಡಕ್ಕೆ ಟಾಲ್‌ಸ್ಟಾಯ್‌ ಹೊಸಬರೇನಲ್ಲ, ಅವರ ಕಥೆಗಳು, ಕಾದಂಬರಿಗಳನ್ನು ಹಲವರು ಅನುವಾದ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೆ ಒಬ್ಬ ದಾರ್ಶನಿಕನಾಗಿ, ಸಂತನಾಗಿ ಅವರು ನಮ್ಮಲ್ಲಿ ಅಷ್ಟಾಗಿ ಪರಿಚಿತರಲ್ಲ. ಟಾಲ್‌ಸ್ಟಾಯ್‌ ಅವರ ಈ ದಾರ್ಶನಿಕ ಮುಖವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿ.ಎಸ್‌. ಜಯಪ್ರಕಾಶ ನಾರಾಯಣ ಅನುವಾದಿಸಿರುವ ‘ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ ಎಂಬ ಕೃತಿ ಮಹತ್ವದ್ದಾಗಿದೆ. ಇದು ಟಾಲ್‌ಸ್ಟಾಯ್‌ ಅವರ ‘ವೈಸ್‌ ಥಾಟ್ಸ್‌ ಫಾರ್‌ ಎವೆರಿಡೇ’ ಎಂಬ ಪುಸ್ತಕದ ಕನ್ನಡ ಅವತರಣಿಕೆ. ಇದಕ್ಕೆ ಹೊಂದಿಕೆಯಾಗುವಂತೆ ‘ದಿನಕ್ಕೊಂದು ದರ್ಶನ’ ಎಂಬ ಅಡಿಶೀರ್ಷಿಕೆಯನ್ನೂ ನೀಡಲಾಗಿದೆ.

ಟಾಲ್‌ಸ್ಟಾಯ್‌ ತಮ್ಮ ಬದುಕಿನ ಅನುಭವದ ಮೂಸೆಯಲ್ಲಿ ಕಂಡುಕೊಂಡ ಸತ್ಯಗಳು ಮತ್ತು ಜಗತ್ತಿನ ಶ್ರೇಷ್ಠ ದಾರ್ಶನಿಕರ ಮಾತುಗಳನ್ನು ಸೇರಿಸಿ ಈ ಪುಸ್ತಕವನ್ನು ರೂಪಿಸಿದ್ದಾರೆ. ವೈಯಕ್ತಿಕವಾಗಿಯೂ ಇದು ಅವರಿಗೆ ತುಂಬ ಸಂತೃಪ್ತಿ ನೀಡಿದ ಕೃತಿ. ಇದನ್ನು ಅವರೇ ಬರೆದುಕೊಂಡಿದ್ದಾರೆ. ಮುನ್ನೂರ ಅರವತ್ತೈದು ಸರಳ, ಅಷ್ಟೇ ಮಹತ್ವದ ಸಂಗತಿಗಳನ್ನು ಪುಟ್ಟಪುಟ್ಟದಾಗಿ ಇಲ್ಲಿ ನೀಡಲಾಗಿದೆ. ಪ್ರತಿದಿನವೂ ಒಂದೊಂದು ಅಧ್ಯಾಯವನ್ನು ಓದಿಕೊಳ್ಳಲು ಅನುಕೂಲವಾಗುವಂತೆ ದಿನಾಂಕದ ಪ್ರಕಾರವೇ ಸಂಕಲಿಸಲಾಗಿದೆ.

ಡಾ. ಟಿ.ಎನ್‌. ವಾಸುದೇವಮೂರ್ತಿ ಅವರು ಬರೆದಿರುವ ಮುನ್ನುಡಿ ಟಾಲ್‌ಸ್ಟಾಯ್‌ ಬದುಕಿನ ಕುರಿತು ಸ್ಪಷ್ಟವಾದ ಚಿತ್ರಣ ನೀಡುವಷ್ಟು ಸಶಕ್ತವಾಗಿದೆ. ಆದ್ದರಿಂದಲೇ ಮುಂದಿನ ಓದಿಗೆ ಇದು ಗಟ್ಟಿಯಾದ ಅಡಿಪಾಯವನ್ನೂ ಹಾಕುತ್ತದೆ. ಒಂದೇ ಗುಕ್ಕಿಗೆ ಓದಿ ಮುಗಿಸುವಂಥ ಪುಸ್ತಕ ಇದಲ್ಲ, ಬದಲಿಗೆ ದಿನಕ್ಕೊಂದು ಗುಟುಕು ಗುಟುಕರಿಸಿ ಅದರಲ್ಲಿನ ಸಂಗತಿಗಳನ್ನು ಮನನ ಮಾಡಿಕೊಳ್ಳುವಂಥ ಕೃತಿ ಇದು. ಹೊಸ ವರ್ಷದ ಮೊದಲ ದಿನದಿಂದ ಆರಂಭಿಸಿ ಕೊನೆಯ ದಿನದವರೆಗೂ ಪ್ರತಿದಿನ ಒಂದೊಂದು ಒಳ್ಳೆಯ ಸಂಗತಿ ತಿಳಿದುಕೊಳ್ಳಬೇಕು ಎಂದು ಬಯಸುವವರು ಈ ಪುಸ್ತಕವನ್ನು ಕೊಂಡುಕೊಳ್ಳಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಾಣಿ ಪ್ರಪಂಚ: ವೈವಿಧ್ಯ - ವಿಸ್ಮಯ

ವಿಜ್ಞಾನ ವಿಶೇಷ
ಪ್ರಾಣಿ ಪ್ರಪಂಚ: ವೈವಿಧ್ಯ - ವಿಸ್ಮಯ

22 Apr, 2018
ಅಣ್ಣನ ವೆಸ್ಟ್‌ಕೋಟ್‌

ಮಕ್ಕಳ ಪದ್ಯ
ಅಣ್ಣನ ವೆಸ್ಟ್‌ಕೋಟ್‌

22 Apr, 2018
ಹಕ್ಕಿಗೊಂದಿಷ್ಟು ಅರವಟ್ಟಿಗೆ

ಮಕ್ಕಳ ಪದ್ಯ
ಹಕ್ಕಿಗೊಂದಿಷ್ಟು ಅರವಟ್ಟಿಗೆ

22 Apr, 2018
ಸಂತರ ಸಂಗ

ಮಕ್ಕಳ ಕತೆ
ಸಂತರ ಸಂಗ

22 Apr, 2018
ತಂದೆಯ ನೆನಪಿನ ಸಾರ!

ಮೊದಲ ಓದು
ತಂದೆಯ ನೆನಪಿನ ಸಾರ!

22 Apr, 2018