ಶನಿವಾರ, 23–12–1967

ಹಿಂದಿ ವಿರೋಧಿ ಪ್ರದರ್ಶನಕಾರರು ಇಂದು ಮದರಾಸಿಗೆ ಬರುತ್ತಿದ್ದ ಮೂರು ರೈಲುಗಳಿಗೆ ಬೆಂಕಿ ಇಟ್ಟರು. ಅದರ ಕ್ರಮಗಳಿಂದ ಮೀಟರ್‌ಗೇಜ್ ಮತ್ತು ಬ್ರಾಡ್‌ಗೇಜ್ ವಿಭಾಗದಲ್ಲಿ ರೈಲುಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ.

ಹಿಂದಿ ವಿರುದ್ಧ ಚಳವಳಿ: ಮದರಾಸಿನಲ್ಲಿ ಮೂರು ರೈಲುಗಳಿಗೆ ಬೆಂಕಿ
ಮದರಾಸು, ಡಿ. 22–
ಹಿಂದಿ ವಿರೋಧಿ ಪ್ರದರ್ಶನಕಾರರು ಇಂದು ಮದರಾಸಿಗೆ ಬರುತ್ತಿದ್ದ ಮೂರು ರೈಲುಗಳಿಗೆ ಬೆಂಕಿ ಇಟ್ಟರು. ಅದರ ಕ್ರಮಗಳಿಂದ ಮೀಟರ್‌ಗೇಜ್ ಮತ್ತು ಬ್ರಾಡ್‌ಗೇಜ್ ವಿಭಾಗದಲ್ಲಿ ರೈಲುಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ.

ಉತ್ತರ ಭಾರತಕ್ಕೆ ಹೋಗುವ ಎಲ್ಲ ರೈಲುಗಳನ್ನು ರದ್ದುಪಡಿಸಬೇಕೆಂದು ಪ್ರದರ್ಶನಕಾರರು ಒತ್ತಾಯಪಡಿಸಿದರು.

ಭೂಕಂದಾಯ ರದ್ದಿನ ‘ವಚನ ಭ್ರಷ್ಟತೆ’ ಖಂಡನೆ: ಅವಿಶ್ವಾಸ ಸೂಚನೆ ಚರ್ಚೆ
ಬೆಂಗಳೂರು, ಡಿ. 22–
ಹತ್ತು ತಿಂಗಳು ಶ್ರೀಗಳ ಹಿಂದೆ ಮತ್ತೆ ಅಧಿಕಾರಕ್ಕೆ ಬಂದ ಶ್ರೀ ನಿಜಲಿಂಗಪ್ಪ ಅವರ ಸರ್ಕಾರದ ವಿರುದ್ಧ ಸಂಯುಕ್ತ ವಿರೋಧಿ ಶಾಸಕ ದಳವು ಮಂಡಿಸಿದ ಪ್ರಥಮ ಅವಿಶ್ವಾಸ ಸೂಚನೆಯ ಮೇಲಿನ ಚರ್ಚೆ ಇಂದು ವಿಧಾನಸಭೆಯಲ್ಲಿ ಆರಂಭವಾಯಿತು.

ಭೂ ಕಂದಾಯ ರದ್ದತಿಯ ‘ವಚನ ಭ್ರಷ್ಟತೆ’ ಮಿತವ್ಯಯದ ಪ್ರತಿಜ್ಞೆಗೆ ‘ಎಸಗಿದ ಅಪಚಾರ’, ಆಹಾರ ಪೂರೈಕೆ, ಬೆಲೆ ಏರಿಕೆ ಹತೋಟಿಯಲ್ಲಿ ಸರ್ಕಾರ ಕಂಡ ‘ವೈಫಲ್ಯ’, ಖಾದಿ ಮಂಡಳಿ, ಪೋಲೀಸರ ‘ದೌರ್ಜನ್ಯ’– ಆಳುವ ಮಂತ್ರಿ ಮಂಡಲದ ವಿರುದ್ಧ ಆರೋಪಗಳ ಪಟ್ಟಿ ಓದಿದ ವಿರೋಧ ಪಕ್ಷಗಳ ಸದಸ್ಯರು, ತತ್‌ಕ್ಷಣ ರಾಜಿನಾಮೆಗೆ ಒತ್ತಾಯಪಡಿಸಿದರು.

ಡಾ. ನಾಗಪ್ಪ ಆಳ್ವ: ಮತ್ತೆ ಎಂ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆ
ಬೆಂಗಳೂರು, ಡಿ. 22–
ಇಂದು ಇಲ್ಲಿ ನಡೆದ ನೂತನ ಎಂ.ಪಿ.ಸಿ.ಸಿ.ಯ ಪ್ರಥಮ ಸಭೆ, ಅಧ್ಯಕ್ಷರಾಗಿರುವ ಡಾ. ಕೆ. ನಾಗಪ್ಪ ಆಳ್ವ ಅವರನ್ನು ಎರಡು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಪುನಃ ಆರಿಸಿತು.

ಚಿಂತನಪಲ್ಲಿ ವೆಂಕಟರಾವ್ ಆದ್ಯ ರಂಗಾಚಾರ್ಯರಿಗೆ ಅಕೆಡೆಮಿ ಗೌರವ
ಬೆಂಗಳೂರು, ಡಿ. 22–
ಪ್ರಸಿದ್ಧ ಸಂಗೀತ ವಿದ್ವಾಂಸರಾದ 96 ವರ್ಷ ವಯಸ್ಸಿನ ಶ್ರೀ ಚಿಂತನಪಲ್ಲಿ ವೆಂಕಟರಾಯರಿಗೆ ಕೇಂದ್ರ ಸಂಗೀತ ನಾಟಕ ಅಕೆಡೆಮಿ ಕರ್ನಾಟಕ ಸಂಗೀತ ವಿಭಾಗದ ಪ್ರಶಸ್ತಿ ನೀಡಿದೆಯೆಂದು ತಿಳಿದು ಬಂದಿದೆ.

ಖ್ಯಾತ ಸಾಹಿತಿ ಶ್ರೀ ಆದ್ಯ ರಂಗಾಚಾರ್ಯರನ್ನು ಅಕೆಡೆಮಿಯ ‘ಫೆಲೋ’ ಆಗಿ ನೇಮಿಸಿದೆಯೆಂದು ಗೊತ್ತಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ದಿನದ ನೆನಪು
ಭಾನುವಾರ, 21–1–1968

ಕಾಶ್ಮೀರದ ವಿಮೋಚನೆಗೆ ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ಅವಲಂಬಿಸಿರುವುದರಿಂದ ರಕ್ಷಣಾ ಪಡೆಗಳನ್ನು ಬಲಪಡಿಸುವುದೇ ಪಾಕಿಸ್ತಾನದ ಮುಖ್ಯ ಕರ್ತವ್ಯವಾಗಿದೆ ಎಂದು ಪಶ್ಚಿಮ ಪಾಕಿಸ್ತಾನದ ಗವರ್ನರ್ ಜ. ಮೂಸಾ...

21 Jan, 2018

ದಿನದ ನೆನಪು
ಶನಿವಾರ, 20–1–1968

ಭೂಮ್ಯಂತರ್ಗತ ಅಣುಸ್ಫೋಟ ಪ್ರಯೋಗವನ್ನು ಅಮೆರಿಕವು ನಡೆಸಿದೆ. ಇದರಿಂದ ವಾತಾವರಣದಲ್ಲಿ ಅಣು ವಿಕಿರಣ ಕ್ರಿಯೆ ತಲೆದೋರಿದೆಯೆಂದು ಅಣು ಶಕ್ತಿ ಆಯೋಗ ನಿನ್ನೆ ತಿಳಿಸಿತು.

20 Jan, 2018

50 ವರ್ಷಗಳ ಹಿಂದೆ
ಗುರುವಾರ, 18–1–1968

ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

18 Jan, 2018

50 ವರ್ಷಗಳ ಹಿಂದೆ
ಬುಧವಾರ, 17–1–1968

ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

17 Jan, 2018

ದಿನದ ನೆನಪು
ಸೋಮವಾರ, 15–1–1968

ಆರು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ‍ಪ್ರಗತಿಶೀಲ ಜನತಂತ್ರರಂಗದ ಸಮ್ಮಿಶ್ರ...

15 Jan, 2018