ಕಲಬುರ್ಗಿ

ಇಬ್ರಾಹಿಂ ಕೊರತೆ ತುಂಬುತ್ತಿರುವ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ಸಾಧನಾ ಸಂಭ್ರಮ’ ಪ್ರವಾಸವನ್ನು ಕೈಗೊಂಡಿದ್ದಾರೆ. ದಿನಕ್ಕೆ ಮೂರು ಕಡೆ ಭಾಷಣ ಮಾಡುತ್ತಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಅವರೇ ಪ್ರಮುಖ ಆಕರ್ಷಣೆ. ಇದು ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಇಬ್ರಾಹಿಂ ಕಾಣಿಸಿಕೊಳ್ಳುತ್ತಿಲ್ಲ.

ಕಲಬುರ್ಗಿ: ಕಾಂಗ್ರೆಸ್‌ ಪಕ್ಷದ ಸಮಾವೇಶಗಳಲ್ಲಿ ನಾಯಕರು ಹಾಗೂ ಕಾರ್ಯಕರ್ತರನ್ನು ರಂಜಿಸುವುದರಲ್ಲಿ ಸಿ.ಎಂ.ಇಬ್ರಾಹಿಂ ಎತ್ತಿದ ಕೈ. ಅವರು ಮೈಕ್‌ ಮುಂದೆ ನಿಂತರೆ ಸಾಕು, ಯಾವ ಹಾಸ್ಯಗೋಷ್ಠಿಗಳಿಗೂ ಕಡಿಮೆ ಇಲ್ಲದಂತೆ ಭರಪೂರ ಮನರಂಜನೆ ನೀಡುತ್ತಾರೆ. ಅವರ ಪ್ರತಿ ಮಾತಿಗೂ ಚಪ್ಪಾಳೆ, ಶಿಳ್ಳೆ, ಕೇಕೆ ಇರುತ್ತದೆ. ಇಬ್ರಾಹಿಂ ಮಾತನಾಡಿದ ನಂತರ ಉಳಿದವರ ಮಾತು ರುಚಿಸುವುದೇ ಇಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ಸಾಧನಾ ಸಂಭ್ರಮ’ ಪ್ರವಾಸವನ್ನು ಕೈಗೊಂಡಿದ್ದಾರೆ. ದಿನಕ್ಕೆ ಮೂರು ಕಡೆ ಭಾಷಣ ಮಾಡುತ್ತಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಅವರೇ ಪ್ರಮುಖ ಆಕರ್ಷಣೆ. ಇದು ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಇಬ್ರಾಹಿಂ ಕಾಣಿಸಿಕೊಳ್ಳುತ್ತಿಲ್ಲ.

ಆದರೆ, ಸಿದ್ದರಾಮಯ್ಯ ಅವರೇ ಸಭಿಕರನ್ನು ನಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ! ತಮ್ಮ ಭಾವಾಭಿನಯ, ವಿಶಿಷ್ಟ ಶೈಲಿಯ ಮಾತಿನ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ‘ವಸ್ತು’. ಮಿಷನ್‌ 150 ಠುಸ್ಸ್‌, ಸೈಕಲ್‌ ಕೊಟ್ಟೆ, ಸೀರೆ ಕೊಟ್ಟೆ ಎನ್ನುವುದು ಹಾಗೂ ಯಡಿಯೂರಪ್ಪ ಅವರು ಪ್ಯಾಂಟನ್ನು ಮೇಲೆ ಎತ್ತಿಕೊಳ್ಳುವ ರೀತಿ ಅಭಿನಯಿಸುವಾಗ ನಗು ಅಲೆಯಾಗುತ್ತದೆ.

ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಕುಳಿತವರ, ಸಭಿಕರ ಆಕಳಿಕೆ, ಬೇಸರಿಕೆ ಮಾಯವಾಗುವಂತೆ ಮಾಡುತ್ತಿದ್ದಾರೆ. ಇದನ್ನು ಕಂಡ ಕಾರ್ಯಕರ್ತರೊಬ್ಬರು, ‘ನಮ್‌ ಸಿದ್ದರಾಮಯ್ಯ ಸಾಹೇಬ್ರು, ಸಿ.ಎಂ.ಇಬ್ರಾಹಿಂ ಇಲ್ಲ ಅನ್ನುವ ಕೊರತೆಯನ್ನು ಚೆನ್ನಾಗಿಯೇ ತುಂಬುತ್ತಿದ್ದಾರೆ’ ಎಂದಿದ್ದು ಮಾತ್ರ ಕುಹುಕವಲ್ಲ.

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಅಭಿನಂದನಾರ್ಹ

‘ಶುದ್ಧೀಕರಣ ಪ್ರಕ್ರಿಯೆ: ಅಸಂಗತ ಪ್ರಹಸನ’ ಸಂಪಾದಕೀಯ (ಪ್ರ.ವಾ., ಜ. 17) ಓದಿ ತುಂಬ ಸಂತೋಷವಾಯ್ತು. ಇದು ನಮ್ಮ ಮೆಚ್ಚಿನ ‘ಪ್ರಜಾವಾಣಿ’ಯ ಹೆಗ್ಗಳಿಕೆ, ಹೆಗ್ಗುರುತು.

24 Jan, 2018

ವಾಚಕರ ವಾಣಿ
ಪರೀಕ್ಷೆಗೆ ಸೀಮಿತ!

ಆರು ತಿಂಗಳ ಸೆಮಿಸ್ಟರ್‌ ಅವಧಿಯಲ್ಲಿ ಮೂರೂವರೆ ತಿಂಗಳು ಮಾತ್ರ ತರಗತಿಗಳು ನಡೆದು, ಉಳಿದ ಎರಡೂವರೆ ತಿಂಗಳು ಪರೀಕ್ಷೆ ಹಾಗೂ ಮೌಲ್ಯಮಾಪನಗಳಿಗೆ ವ್ಯಯವಾಗುತ್ತಿದೆ.

24 Jan, 2018

ವಾಚಕರ ವಾಣಿ
ಆಯ್ಕೆಯ ಪ್ರಕ್ರಿಯೆ

ಕಳೆದ ತಿಂಗಳು ಪ್ರಕಟವಾದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಬಿ.ಎಂ. ಚಂದ್ರಶೇಖರಯ್ಯ ಅವರು ‘ಮಾನದಂಡ ಏನು?’ (ವಾ.ವಾ., ಜ. 9) ಎಂದು ಪ್ರಶ್ನಿಸಿದ್ದಾರೆ. ...

24 Jan, 2018

ವಾಚಕರ ವಾಣಿ
ಅಪಾರ್ಥ ಬೇಡ!

‘ಯುವತಿಯರ ಜತೆ ಬಿಜೆಪಿ ಕಾರ‍್ಯಕರ್ತರ ಕುಣಿತ...’ (ಪ್ರ.ಜಾ., ಜ. 13). ಪರಿವರ್ತನಾ ಯಾತ್ರೆಯಲ್ಲಿ ‘ಅಲ್ಲಾಡ್ಸು, ಅಲ್ಲಾಡ್ಸು’ ಎನ್ನುವಂತಹ ಹಾಡುಗಳಿಗೆ ವೇದಿಕೆಯ ಮೇಲೆ ನೃತ್ಯ ನಡೆಯಿತಂತೆ!...

23 Jan, 2018

ವಾಚಕರ ವಾಣಿ
ಚಿತ್ರೋತ್ಸವ ಮತ್ತು ನೆರವು

ನಾನು ಒಂದು ದಶಕದಿಂದ ಗೋವಾ ಚಿತ್ರೋತ್ಸವಕ್ಕೆ ಹೋಗುತ್ತಿದ್ದೇನೆ. ಮಡಗಾಂವ್ ಅಥವಾ ಪಣಜಿಯಿಂದ ದೂರದಲ್ಲಿರುವ ಸ್ಟೇಡಿಯಂ ಒಂದರಲ್ಲಿ ಸಮಾರಂಭ ಮಾಡುತ್ತಿರುವುದರಿಂದ ಪ್ರತಿನಿಧಿಗಳಿಗೆ ತೊಂದರೆ ಆಗುತ್ತಿದೆ ಅಷ್ಟೇ. ...

23 Jan, 2018