ದೇವದುರ್ಗ

‘ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ಅಗತ್ಯ’

‘ಧರ್ಮ ಉಳಿದಿದ್ದರೆ ಅದು ಮಠಗಳಿಂದ ಸಾಧ್ಯ. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಧರ್ಮವನ್ನು ಎರಡು ಭಾಗಗಳಾಗಿ ಮಾಡಲು ಮುಂದಾಗಿದ್ದಾರೆ ಅಂಥವರಿಗೆ ಕಾಲವೇ ಉತ್ತರ ನೀಡುತ್ತದೆ’

ದೇವದುರ್ಗ: ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಇಂತಹ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ರಾಯಚೂರಿನ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯಿತಿಯ ಯರಮರಸ್‌ ಗ್ರಾಮದ ವೀರಭದ್ರಯ್ಯ ತಾತನವರ 31ನೇ ಪುಣ್ಯತಿಥಿ ಪ್ರಯುಕ್ತ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಧರ್ಮ ಉಳಿದಿದ್ದರೆ ಅದು ಮಠಗಳಿಂದ ಸಾಧ್ಯ. ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಧರ್ಮವನ್ನು ಎರಡು ಭಾಗಗಳಾಗಿ ಮಾಡಲು ಮುಂದಾಗಿದ್ದಾರೆ ಅಂಥವರಿಗೆ ಕಾಲವೇ ಉತ್ತರ ನೀಡುತ್ತದೆ’ ಎಂದರು. ಸಾಮೂಹಿಕ ವಿವಾಹದಂತ ಸಾಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಠಗಳಿಗೆ ಶ್ರೀಮಂತರು ಸಹಾಯ ಮಾಡಬೇಕು ಎಂದರು.

ನವಲಕಲ್ ಬೃಹನ್ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಮಠಧ ಪಂಚಾಕ್ಷರಿ ಸ್ವಾಮೀಜಿ, ಅಡವಿಶ್ವರ ಮಠದ ಕಲ್ಲೂರು ಶಂಭುಲಿಂಗ ಸ್ವಾಮೀಜಿ, ಮುಕ್ಕಂದಿ ಮಠದ ಶಾಶ್ವತಯ್ಯಸ್ವಾಮಿ, ಚರಬಸಯ್ಯ ತಾತ ಜಾಗಟಗಲ್‌, ಬೆಟ್ಟಪ್ಪಯ್ಯ ತಾತ ಜಾಗಟಗಲ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

ಮಾನ್ವಿ
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

21 Jan, 2018
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

20 Jan, 2018

ಮಸ್ಕಿ
ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ

20 Jan, 2018
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

ಮಾನ್ವಿ
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

19 Jan, 2018
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

ರಾಯಚೂರು
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

18 Jan, 2018