ಬಾಗಲಕೋಟ

ಸೋರೆಕಾಯಿಗೆ ಮನಸೋತ ರೈತರು

ಮೇಳದಲ್ಲಿದ್ದ ಪ್ರದರ್ಶನಕ್ಕೆ ಇಟ್ಟಿದ್ದ ತರಕಾರಿ ಬೆಳೆ ಸೋರೆಕಾಯಿಗೆ ರೈತರು ಮನಸೋತರು. ಉತ್ತಮ ಆರೋಗ್ಯಕ್ಕಾಗಿ, ತೂಕ ಇಳಿಸಲು ಸಹಕಾರಿಯಾಗಿರುವ ಸೋರೆಕಾಯಿಯು ಬೆಳೆದ ಜಾಗ ಕೇವಲ 50 ಅಡಿ ಉದ್ದ, 15 ಅಡಿ ಅಗಲದಲ್ಲಿ. ಒಂದು ಕಾಯಿ 5ರಿಂದ 10 ಕೆ.ಜಿ ತೂಕ ಇರುತ್ತದೆ.

ಚಪ್ಪರದ ನೆರಳಡಿ ಸೋರೆಕಾಯಿ

ಬಾಗಲಕೋಟ: ಮೇಳದಲ್ಲಿದ್ದ ಪ್ರದರ್ಶನಕ್ಕೆ ಇಟ್ಟಿದ್ದ ತರಕಾರಿ ಬೆಳೆ ಸೋರೆಕಾಯಿಗೆ ರೈತರು ಮನಸೋತರು. ಉತ್ತಮ ಆರೋಗ್ಯಕ್ಕಾಗಿ, ತೂಕ ಇಳಿಸಲು ಸಹಕಾರಿಯಾಗಿರುವ ಸೋರೆಕಾಯಿಯು ಬೆಳೆದ ಜಾಗ ಕೇವಲ 50 ಅಡಿ ಉದ್ದ, 15 ಅಡಿ ಅಗಲದಲ್ಲಿ. ಒಂದು ಕಾಯಿ 5ರಿಂದ 10 ಕೆ.ಜಿ ತೂಕ ಇರುತ್ತದೆ.

ಈ ಕುರಿತು ಮಾತನಾಡಿದ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೋಹನ ಹಾಗೂ ಜ್ಯೋತಿ, ಸೋರೆಕಾಯಿ ಬೆಳೆಯಲು ಹೊಲಗಳ ಅಗತ್ಯವಿಲ್ಲ. 50 ಅಡಿಯಷ್ಟು ಜಾಗ ಸಾಕು. ರೈತರು ಉಪ ಉತ್ಪನ್ನವಾಗಿ ಬೆಳೆಯಬಹುದು ಎಂದು ಹೇಳಿದರು.

ಚಪ್ಪರ ನಿರ್ಮಿಸಿ ಸೋರೆಕಾಯಿ ಬೆಳೆದಿದ್ದೇವೆ. ಚಪ್ಪರ ನಿರ್ಮಿಸಿಸುವುದರಿಂದ ಕಾಯಿಗಳಿಗೆ ಯಾವುದೇ ಕ್ರೀಮಿ ಕೀಟಗಳ ಬಾಧೆ ಇರುವುದಿಲ್ಲ. ಹಾಸನ, ಮಂಡ್ಯ, ಮೈಸೂರ ಕಡೆಗಳಲ್ಲಿ ಕೈ ತುಂಬಾ ಕಾಸು ಸಂಪಾದಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೂ ರಾಜ್ಯದ ಸೋರೆಕಾಯಿ ಹೋಗುತ್ತಿದೆ’ ಎಂದು ಹೇಳಿದರು.

ಮಹಾಲಿಂಗಪುರದ ರೈತ ಸಂಗಪ್ಪ ಕಟಗೇರಿ ಮಾತನಾಡಿ, ಜಿಲ್ಲೆಯಲ್ಲಿ ಸೋರೆಕಾಯಿಗೆ ಮಾರುಕಟ್ಟೆ ಇಲ್ಲ. ಇಲ್ಲಿಯ ಜನರು ಬಳಸುವುದು ಅತಿ ಕಡಿಮೆ. ಆದರೆ ಜನರಿಗೆ ಅದರ ಉಪಯೋಗ ಗೊತ್ತಾದರೆ ಬಳಕೆ ಹೆಚ್ಚುತ್ತದೆ ಎಂದು ಹೇಳಿದರು.

ಸೋರೆಕಾಯಿಗೆ ಚಪ್ಪರ ನಿರ್ಮಾಣಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ.  ಆದರೆ ರೋಗ ರುಜಿನ ತಡೆದು ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತಾರೆ ಅಧ್ಯಾಪಕ ಗಾಣಿಗೇರ.
 

Comments
ಈ ವಿಭಾಗದಿಂದ ಇನ್ನಷ್ಟು
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

ಬಾಗಲಕೋಟೆ
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

22 Jan, 2018
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

ಬಾಗಲಕೋಟೆ
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

22 Jan, 2018
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

ಬಾಗಲಕೋಟೆ
ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

21 Jan, 2018

ರಬಕವಿ–ಬನಹಟ್ಟಿ
‘ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ’

‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳಿಂದಾಗುವ ಅನಾಹುತ ತಪ್ಪಿಸಬಹುದು. ಹೆಲ್ಮೆಟ್ ಧರಿಸುವುದರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಬಹುದು’

21 Jan, 2018
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

ಬಾಗಲಕೋಟೆ
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

20 Jan, 2018