ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಕಲೆ, ಸಂಸ್ಕೃತಿ ವೈಭವಗಳ ದರ್ಶನ

Last Updated 24 ಡಿಸೆಂಬರ್ 2017, 7:17 IST
ಅಕ್ಷರ ಗಾತ್ರ

ರವಿ ಎಂ. ಹುಲಕುಂದ

ಬೈಲಹೊಂಗಲ: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಶಾಸಕ ಡಾ.ವಿಶ್ವನಾಥ ಪಾಟೀಲ ಗೆಳೆಯರ ಬಳಗ ಹಾಗೂ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಗಳ ಆಶ್ರಯದಲ್ಲಿ ಇದೇ 24 ರಂದು ಸಂಜೆ 5.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ನಡೆಯಲಿವೆ. 350 ಕ್ಕೂ ಹೆಚ್ಚು ಕಲಾವಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹತ್ತು ಬಸ್‌ಗಳಲ್ಲಿ ಆಗಮಿಸಿದ್ದು, ಭಾರತದ ವಿವಿಧ ಕಲೆಗಳು, ನೃತ್ಯ ಪ್ರದರ್ಶಿಸ ಲಿದ್ದಾರೆ.

40 ಸಾವಿರ ಪ್ರೇಕ್ಷಕರಿಗೆ ವೀಕ್ಷಿಸಲು ಮೈದಾನ ಸಿದ್ದವಾಗಿದೆ. 20 ಸಾವಿರ ಆಸನಗಳ ವ್ಯವಸ್ಥೆ ಇದೆ. ಶಾಸಕ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗ ಮೇಲ್ವಿಚಾರಣೆ ನಡೆಸಿದೆ.

ಶಾಸಕರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಸಾಧಕರನ್ನು ಹುಡುಕಿ ವೇದಿಕೆ ಕಲ್ಪಿಸಿದ್ದಾರೆ. ಯುವ ಶಕ್ತಿಗೆ ಮಾರ್ಗದರ್ಶನ ನೀಡಿದ್ದಾರೆ.ಭಾರತೀಯ ಕಲೆಗಳನ್ನು ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದಾರೆ.

ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಸಾನಿಧ್ಯ ವಹಿಸುವರು. ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸುವರು. ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಉದ್ಘಾಟಿಸುವರು.

ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಬಸವರಾಜ ಬಾಳೇಕುಂದರಗಿ, ಉದ್ಯಮಿ ಬಾಬಣ್ಣ ಢಮ್ಮಣಗಿ, ಸ್ವಾತಂತ್ರ್ಯ ಯೋಧ ಅಣ್ಣಪ್ಪ ಕಂಠಿ, ಶ್ರೀ ವರ್ತಿ ಸಿದ್ದಬಸವೇಶ್ವರ ಸೊಸೈಟಿ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಶ್ರೀ ನೀವಿವ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಚಂದ್ರಶೇಖರ ಸಾಧುನವರ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ವಕೀಲ ಶ್ರೀಶೈಲ ಬೋಳಣ್ಣವರ, ಶ್ರೀ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಬಿ.ಎಸ್. ಕಿವಡಸಣ್ಣವರ, ಹಿರಿಯ ಸಾಹಿತಿ ಚನ್ನಬಸಪ್ಪ ಹೊಸ ಮನಿ, ವಕೀಲರ ಸಂಘದ ಅಧ್ಯಕ್ಷ ಎಂ.ವೈ. ಸೋಮಣ್ಣವರ, ಹಿರಿಯ ಪತ್ರಕರ್ತ ಈಶ್ವರ ಹೋಟಿ, ಪುರಸಭೆ ಸದಸ್ಯ ಮಹಾಂತೇಶ ತುರಮರಿ, ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಶೀನಾಥ ಬಿರಾದಾರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ಪುರಸಭೆ ವಿಪಕ್ಷ ನಾಯಕ ಬಾಬು ಹರಕುಣಿ, ಪ್ರಗತಿಪರ ರೈತ ಮಲ್ಲಿಕಾರ್ಜುನ ಬೋಳಣ್ಣವರ, ಎಸ್.ಆರ್. ಕಮ್ಮಾರ, ರಾಷ್ಟ್ರೀಯ ಬಸವ ದಳ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟಗಿ, ರಾಜ್ಯ ಪ್ರಶಸ್ತಿ ವಿಜೇತೆ ಪಾರಿಜಾತ ಕಲಾವಿದೆ ಮಲ್ಲವ್ವ ಮ್ಯಾಗೇರಿ, ಜಯ ಕರ್ನಾಟಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಿ.ಕೆ. ಮೆಕ್ಕೇದ, ಎಪಿಎಂಸಿ ನಿರ್ದೇಶಕ ಎಸ್.ಎಫ್. ಹರಕುಣಿ, ರಾಮನಗೌಡ ಪಾಟೀಲ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ, ಖರೀದಿ ದಾರರ ಸಂಘದ ಅಧ್ಯಕ್ಷ ರಾಜೇಂದ್ರ ಸಂಗೊಳ್ಳಿ, ಗಣ್ಯರಾದ ಸುರೇಶ ಮೆಟಗುಡ್ಡ, ಬಸವಪ್ರಭು ಬೆಳಗಾವಿ, ಗಂಗಾಮತ ಸಮಾಜದ ಮುಖಂಡ ಮಲ್ಲಪ್ಪ ಮುರಗೋಡ, ಹಿರಿಯರಾದ ಗುಬ್ಬಣ್ಣ ಹೊಸಮನಿ, ರೈತ ನಾಯಕ ಶಂಕರೆಪ್ಪ ಯಡಳ್ಳಿ ಪಾಲ್ಗೊಳ್ಳಲಿದ್ದಾರೆ.

ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿ ಅಟ್ಟಂ, ಶ್ರೀ ಗಣೇಶ ಸ್ತುತಿ, ಬಡಗುತಿಟ್ಟು ಯಕ್ಷಪ್ರಯೋಗ, ಶ್ರೀರಾಮ ಪಟ್ಟಾಭಿಷೇಕ, ಓರಿಸ್ಸಾ-ಗೋಟಿಪೂವ, ಶ್ರೀಲಂಕಾದ ಕ್ಯಾಂಡಿ ಯನ್ ಸಮೂಹ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಭರತನಾಟ್ಯ-ಭೋ ಶಂಭೋ, ಗುಜರಾತಿನ ರಂಗೀನ ದಾಂಡಿಯಾ ನೃತ್ಯ, ಪಶ್ಚಿಮ ಬಂಗಾಳದ ಸಿಂಹ ಭೇಟೆಯ ಪುರೋಲಿಯೋ, ಕಥಕ್ ಪ್ರಹಾರ, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕುತಿಟ್ಟು ಯಕ್ಷಗಾನ-ಅಗ್ರಪೂಜೆ, ಶ್ರೀಲಂಕಾದ ಜಾನಪದ ನೃತ್ಯ, ಸಾಹಸಮಯ ಮಲ್ಲಕಂಬ ಪ್ರದರ್ಶನ, ವಂದೇ ಮಾತರಂ-ನೃತ್ಯ ರೂಪಕ ಹಾಗೂ ಹಲವು ಕಾರ್ಯಕ್ರಮಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT