ಧೈರ್ಯ ಕುಂದಿಸುವ ಮಾತು

‘ಕೃಷಿ ಸಾಲ ಮನ್ನಾದಿಂದ ಲಾಭ ಇಲ್ಲ... ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು, ಜಿಡಿಪಿಗೆ ಕೃಷಿಯ ಕೊಡುಗೆ ಕನಿಷ್ಠ,  ರೈತರು ಪರ್ಯಾಯ ಉದ್ಯೋಗಗಳನ್ನೂ ಮಾಡಬೇಕು... (ಪ್ರ.ವಾ., ಡಿ.22) ಎಂಬ ಸಲಹೆಗಳನ್ನು ಡಾ. ದೇವಿಶೆಟ್ಟಿ ಅವರು ನೀಡಿದ್ದಾರೆ.

‘ಕೃಷಿ ಸಾಲ ಮನ್ನಾದಿಂದ ಲಾಭ ಇಲ್ಲ... ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು, ಜಿಡಿಪಿಗೆ ಕೃಷಿಯ ಕೊಡುಗೆ ಕನಿಷ್ಠ,  ರೈತರು ಪರ್ಯಾಯ ಉದ್ಯೋಗಗಳನ್ನೂ ಮಾಡಬೇಕು... (ಪ್ರ.ವಾ., ಡಿ.22) ಎಂಬ ಸಲಹೆಗಳನ್ನು ಡಾ. ದೇವಿಶೆಟ್ಟಿ ಅವರು ನೀಡಿದ್ದಾರೆ.

ಕೃಷಿಯೇ ಬಹುಪಾಲು ಜನರ ಪ್ರಧಾನ ಕಸುಬಾಗಿರುವ ದೇಶದಲ್ಲಿ, ‘ವೈದ್ಯೋದ್ಯಮಿ’ಯೊಬ್ಬರು ರೈತರ ಆತ್ಮಸ್ಥೈರ್ಯವನ್ನು ಕುಂದಿಸುವ ಮಾತನಾಡಿರುವುದು ಸರಿಯಲ್ಲ.

ನಿಜ, ಸಾಲ ಮನ್ನಾ ಮಾಡುವುದು ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರು ಹಿಂದೆಲ್ಲ ಜೀವನದ ಸಹಜ ಭಾಗವೆಂಬಂತೆ ಶೂನ್ಯ ಬಂಡವಾಳದಲ್ಲಿ, ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದರು. ಅವರಲ್ಲಿ ಹೆಚ್ಚು ಲಾಭದ ಆಸೆ ಮೂಡಿಸಿ, ಹೈಬ್ರಿಡ್ ಬಿತ್ತನೆ ಬೀಜಗಳನ್ನು ಪರಿಚಯಿಸಿ, ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ ಮತ್ತು ಬೆಳೆ ಸಂರಕ್ಷಿಸಲು ದುಬಾರಿ ಕೀಟನಾಶಕ ಕೊಳ್ಳುವಂತೆ ಮಾಡಿ, ಹೆಚ್ಚೆಚ್ಚು ಸಾಲ ಮಾಡಿಸಿ ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಂಡು ಕೃಷಿಯ ದಿಕ್ಕನ್ನೇ ಬದಲಿಸಿದ್ದು ಉದ್ಯಮಿಗಳು. ಇಷ್ಟಾದ ಮೇಲೂ ರೈತರು ತಮ್ಮ ಫಸಲಿಗೆ ನ್ಯಾಯವಾದ ಬೆಲೆ ಸಿಗದೆ ಸಾಲಗಾರರಾಗಿಯೇ ಉಳಿದಿದ್ದಾರೆ.

ಜಿಡಿಪಿಯಲ್ಲಿ ಕೃಷಿಯ ಪಾಲು ಕಡಿಮೆ ಇರಬಹುದು. ಆದರೆ ರೈತರು ಆಹಾರ ಬೆಳೆಯುವುದನ್ನು ಬಿಟ್ಟು ಬೇರೆ ವೃತ್ತಿಗೆ ಹೊರಳಿದರೆ ಆಗಬಹುದಾದ ಪರಿಣಾಮ ಉಹಿಸಲು ಅಸಾಧ್ಯ. ಜನರು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಬಹುದು. ಆಹಾರವನ್ನು ಕಾರ್ಖಾನೆ ಅಥವಾ ಆಸ್ಪತ್ರೆಯಲ್ಲಿ ತಯಾರಿಸಲಾಗುವುದಿಲ್ಲವಲ್ಲ!

ಇತರ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ಬೆಲೆ (ಎಂ.ಆರ್‌.ಪಿ) ನಿಗದಿ ಮಾಡುವಂತೆ ತರಕಾರಿ, ಧಾನ್ಯಗಳಿಗೂ ಸ್ಥಿರ ಬೆಲೆ ನಿಗದಿ ವ್ಯವಸ್ಥೆಯಾದರೆ ರೈತರು ಸಹ ಉದ್ಯಮಿಗಳಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಒತ್ತಡ ಸರಿಯಲ್ಲ

ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಏರಿಕೆ (ಪ್ರ.ವಾ., ಜ. 11) ವರದಿ ಆತಂಕ ಮೂಡಿಸುತ್ತದೆ.

18 Jan, 2018

ವಾಚಕರವಾಣಿ
ವಯೋಮಿತಿ ಏರಿಕೆ ಬೇಡ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡರೆ,...

18 Jan, 2018

ವಾಚಕರವಾಣಿ
ತೀರ್ಪಿಗೆ ಕಾಯೋಣ...

ಮಹದಾಯಿ ನದಿ ನೀರಿನ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ.ದೂರದಿಂದ ನೋಡುವ ನಮ್ಮಂಥ ಜನಸಾಮಾನ್ಯರಿಗೆ ಇದರಿಂದ ನೋವು ಉಂಟಾಗುತ್ತದೆ.

18 Jan, 2018

ವಾಚಕರವಾಣಿ
ಮಾರ್ಗದರ್ಶಕರಾಗಿ...

‘ಮಕ್ಕಳಿಲ್ಲದೆ, ವೃದ್ಧಾಪ್ಯದಲ್ಲಿ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಮುಂಬೈನ ವೃದ್ಧ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿರುವುದು (ಪ್ರ.ವಾ., ಜ. 12) ನಮ್ಮ...

18 Jan, 2018

ವಾಚಕರವಾಣಿ
ಧರ್ಮಯುದ್ಧ

ಚುನಾವಣೆ ಯುದ್ಧವಾದರೆ, ಇವರ ಪಕ್ಷದವರು ಪಾಂಡವರಂತೆ, ವಿಪಕ್ಷದವರು ಕೌರವರಂತೆ!

18 Jan, 2018