ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾ ಬಳಸಿ ಅಭಿವೃದ್ಧಿ ಸಾಧಿಸಿ’

Last Updated 25 ಡಿಸೆಂಬರ್ 2017, 5:43 IST
ಅಕ್ಷರ ಗಾತ್ರ

ಕೆರಗೋಡು: ನರೇಗಾ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಸಕಾಲದಲ್ಲಿ ಕೆಲಸ ಮಾಡುವ ಮೂಲಕ ಜನತೆ ಪ್ರಯೋಜನ ಪಡೆಯಬೇಕು ಎಂದು ನರೇಗಾ ಯೋಜನೆಯ ರಾಜ್ಯ ನಿರ್ದೇಶಕಿ ಸುಧಾಮಣಿ ಹೇಳಿದರು.

ಇಲ್ಲಿನ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆ ಗಳ ಫಲಾನುಭವಿಗಳು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಮಾತ ನಾಡಿದ ಅವರು, ಸರ್ಕಾರ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡಿದ್ದು, ಫಲಾನುಭವಿಗಳು ಸಕಾಲ ದಲ್ಲಿ ಕಾಮಗಾರಿ ಮುಗಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ನಡೆದಿರುವ ಕಾಮಗಾರಿಗಳ ಲೆಕ್ಕ ಪರಿಶೀಲನೆ ನಡೆಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಕೆ.ಬಿ.ಉಷಾ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ.ಪ್ರಶಾಂತ್‌ಬಾಬು, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭದಾಿನಿ, ಜಿಲ್ಲಾ ಚುನಾಯಿತ ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಯರಹಳ್ಳಿ ಶಿವಕುಮಾರ್, ಪಿಡಿಒ ಸುಬ್ರಹ್ಮಣ್ಯ ಇದ್ದರು.

ಹುಲಿವಾನ: ಇಲ್ಲಿನ ಗ್ರಾಮಪಂಚಾಯಿತಿಗೂ ಭೇಟಿ ನೀಡಿದ ನರೇಗಾ ಯೋಜನೆಯ ರಾಜ್ಯ ನಿರ್ದೇಶಕಿ ಸುಧಾಮಣಿ, ಅವರು ನರೇಗಾ ಯೋಜನೆಯಲ್ಲಿನ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

ಸಂಜೀವಿನಿ ಯೋಜನೆಯಲ್ಲಿ ಸ್ತ್ರೀಶಕ್ತಿ ಮಹಿಳೆಯರು ಒಕ್ಕೂಟ ರಚಿಸಿ ಕಾಮಗಾರಿ ನಡೆಸಬೇಕು ಎಂದು ಸಲಹೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎಲ್.ಸಿದ್ದೇಗೌಡ, ಸದಸ್ಯರಾದ ಚಾಮರಾಜು, ರವಿಕುಮಾರ್, ಆನಂದ್, ಪಿಡಿಒ ಭಾಗ್ಯಾ, ಕಾರ್ಯದರ್ಶಿ ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT