ಸಕಲೇಶಪುರ

ಕಾಡಾನೆ ದಾಳಿ: ಬೆಳೆ ಹಾನಿ

ಕೃಷ್ಣ ಎಂಬವರ ಭತ್ತದ ಬೆಳೆಯನ್ನು ತುಳಿದು ಹಾಳು ಮಾಡಿವೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಸಕಲೇಶಪುರ: ಶುಕ್ರವಾರ ಮತ್ತು ಶನಿವಾರ ಕಾಡಾನೆಗಳ ದಾಳಿಯಿಂದಾಗಿ ತಾಲ್ಲೂಕಿನ ಈಚಲಪುರ, ಮಳಲಿ ಹಾಗೂ ದೊಡ್ಡಸತ್ತಿಗಾಲ ಗ್ರಾಮಗಳಲ್ಲಿ ಕೊಯ್ಲು ಮಾಡಿ ಗುಡ್ಡೆ ಮಾಡಿದ್ದ ಭತ್ತದ ಪೈರು, ಒಕ್ಕಣೆ ಮಾಡಿ ಮೂಟೆ ಕಟ್ಟಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತ ನಾಶವಾಗಿವೆ.

ಮಳಲಿ ಗ್ರಾಮದ ಧರ್ಮೇಗೌಡ ಅವರು ಭತ್ತದ ಬೆಳೆ ಕೊಯ್ಲು ಮಾಡಿ ಕಣದಲ್ಲಿ ಗುಡ್ಡೆ ಮಾಡಿದ್ದರು. ರಾತ್ರಿ ಕಾಡಾನೆಗಳು ನುಗ್ಗಿ ಈ ಬೆಳೆಯನ್ನು ಚೆಲ್ಲಾಡಿ, ಹಾಳು ಮಾಡಿವೆ. ಸತ್ತಿಗಾಲ್‌ ಗ್ರಾಮದಲ್ಲಿ ಮಹಮ್ಮದ್‌ ಅಬ್ಬಾಸ್‌, ಅಬ್ದುಲ್‌ ಮಜೀದ್‌ ಇವರು ಒಕ್ಕಣೆ ಮಾಡಿ ಚೀಲದಲ್ಲಿ ತುಂಬಿಸಿ ದಾಸ್ತಾನು ಮಾಡಿದ್ದ ಸುಮಾರು 4 ಚೀಲ ಭತ್ತವನ್ನು ತಿಂದು ಸುತ್ತಲೂ ಎರಚಿ ಭಾರಿ ನಷ್ಟ ಉಂಟು ಮಾಡಿವೆ. ಇದೇ ಗ್ರಾಮದ ರವಿ ಅವರ ತೋಟದಲ್ಲಿ ಅಡಿಕೆ, ಕಾಫಿ ಗಿಡಗಳನ್ನು ನಾಶ ಮಾಡಿವೆ.

ಕೃಷ್ಣ ಎಂಬವರ ಭತ್ತದ ಬೆಳೆಯನ್ನು ತುಳಿದು ಹಾಳು ಮಾಡಿವೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈಚಲಪುರ ಗ್ರಾಮದ ಬೋಗರಾಜಾಚಾರ್‌ ಅವರ ಕಾಫಿ ತೋಟಕ್ಕೆ ನುಗ್ಗಿರುವ ಆನೆಗಳು ತೋಟದ ಎದುರಿನ ಗೇಟ್‌ ಅನ್ನು ಸಂಪೂರ್ಣ ಮುರಿದು ಹಾಕಿವೆ. 20ಕ್ಕೂ ಹೆಚ್ಚು ಅಡಿಕೆ ಮರಗಳು, ತೆಂಗು, ಕಾಫಿ ಗಿಡಗಳನ್ನು ನಾಶ ಮಾಡಿ ಭಾರಿ ನಷ್ಟ ಉಂಟುಮಾಡಿವೆ. ಸ್ಥಳಕ್ಕೆ ಯಸಳೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಹಾಸನ
ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಸಲಹೆ ನೀಡಿದರು.

21 Apr, 2018

ಅರಕಲಗೂಡು
ಸಚಿವ ಎ.ಮಂಜು ನಾಮಪತ್ರ ಸಲ್ಲಿಕೆ

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಗುರುವಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

20 Apr, 2018
ಐದು ದಶಕಗಳಿಂದ ಒಕ್ಕಲಿಗರದ್ದೇ ಪಾರುಪತ್ಯ

ಹಾಸನ
ಐದು ದಶಕಗಳಿಂದ ಒಕ್ಕಲಿಗರದ್ದೇ ಪಾರುಪತ್ಯ

20 Apr, 2018
ಮತ ಎಣಿಕೆ ಕೇಂದ್ರಗಳಿಗೆ ಡಿಸಿ ಭೇಟಿ

ಹಾಸನ
ಮತ ಎಣಿಕೆ ಕೇಂದ್ರಗಳಿಗೆ ಡಿಸಿ ಭೇಟಿ

20 Apr, 2018

ಹಾಸನ
ಚುನಾವಣಾ ವೆಚ್ಚ; ನಿಗಾ ವಹಿಸಲು ಸೂಚನೆ

ವಿಧಾನಸಭಾ ಚುನಾವಣೆಗೆ ಜಿಲ್ಲೆಗೆ ನಿಯೋಜಿಸಲ್ಪಟ್ಟಿರುವ ಚುನಾವಣಾ ವೆಚ್ಚ ವೀಕ್ಷಕರು ನೋಡಲ್ ಅಧಿಕಾರಿಗಳೊಂದಿಗೆ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಗುರುವಾರ ಸಭೆ ನಡೆಸಿ ಚುನಾವಣಾ ವೆಚ್ಚದ ಮೇಲೆ...

20 Apr, 2018