ಅಚ್ಚರಿ

ವಯಸ್ಸು 6, ಸಂಪಾದನೆ ₹71ಕೋಟಿ!

ಈ ಪೋರನ ಹೆಸರು ರ‍್ಯಾನ್. ಈತ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಆಟಿಕೆಗಳನ್ನು ಪರೀಕ್ಷಿಸುತ್ತಾ ತನ್ನ ಖಾತೆಗೆ ಹಣ ಜಮೆ ಮಾಡಿಕೊಳ್ಳುತ್ತಿದ್ದಾನೆ.

ವಯಸ್ಸು 6, ಸಂಪಾದನೆ ₹71ಕೋಟಿ!

ಆರು ವರ್ಷದ ಪುಟಾಣಿ ಬಾಲಕ ಕೇವಲ ಒಂದು ವರ್ಷದಲ್ಲಿ ₹71 ಕೋಟಿ ಸಂಪಾದಿಸಿದ್ದಾನೆ! ಅಮೆರಿಕದ ಈ ಪುಟಾಣಿ ಆಟವಾಡುತ್ತಲೇ ಕೋಟಿಗಟ್ಟಲೆ ಹಣ ಮತ್ತು ಅಭಿಮಾನಿಸುವ ಬಳಗವನ್ನು ಹೊಂದಿದ್ದಾನೆ.

ಈ ಪೋರನ ಹೆಸರು ರ‍್ಯಾನ್. ಈತ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಆಟಿಕೆಗಳನ್ನು ಪರೀಕ್ಷಿಸುತ್ತಾ ತನ್ನ ಖಾತೆಗೆ ಹಣ ಜಮೆ ಮಾಡಿಕೊಳ್ಳುತ್ತಿದ್ದಾನೆ.

ಈ ಬಾಲಕ ‘ರ‍್ಯಾನ್ ಟಾಯ್ಸ್‌ ರಿವ್ಯೂ’ ಹೆಸರಿನ ಯೂ ಟ್ಯೂಬ್ ವಾಹಿನಿ ನಡೆಸುತ್ತಿದ್ದಾನೆ. ನಿತ್ಯ ಚೆನ್ನಾಗಿ ಅಲಂಕರಿಸಿಕೊಂಡು, ಆ್ಯಂಗ್ರಿ ಬರ್ಡ್‌, ಸೂಪರ್‌ ಹೀರೊನಂತಹ ಕಾರ್ಟೂನ್‌ ಬೊಂಬೆಗಳು, ಲೊಗೊ ಬ್ರಿಕ್ಸ್‌, ರೈಲು, ವಿಮಾನ, ಬಸ್‌... ಹೀಗೆ ಹೊಸದಾಗಿ ಮಾರುಕಟ್ಟೆಗೆ ಬರುವ ಆಟದ ವಸ್ತುಗಳೊಂದಿಗೆ ಆಟವಾಡುತ್ತಾನೆ.

ಆಡುವುದಷ್ಟೇ ಅಲ್ಲ, ಅವು ಹೇಗಿವೆ, ಹೇಗೆ ಕೆಲಸ ಮಾಡುತ್ತಿವೆ, ಗುಣಮಟ್ಟ ಹೇಗಿದೆ ಎಂಬ ವಿವರಗಳನ್ನು ವಿವರಿಸುತ್ತಾನೆ. ಈ ವಿಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತಾನೆ.

ರ‍್ಯಾನ್ ಅಪ್‌ಲೋಡ್‌ ಮಾಡಿದ ವಿಡಿಯೊಗಳನ್ನು ಲಕ್ಷಗಟ್ಟಲೆ ಅಂತರ್ಜಾಲ ಬಳಕೆದಾರರು ನೋಡಿರುವುದರಿಂದ ಜಾಹೀರಾತುಗಳು ಬಂದಿವೆ. ಇದರಿಂದ ಈ ವರ್ಷ ಸುಮಾರು ₹70 ಕೋಟಿ ಹಣ ರ‍್ಯಾನ್ ಖಾತೆಗೆ ಜಮೆಯಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹಿಮ್ಮುಖ ಓಟದಿಂದ  ಎಷ್ಟೊಂದು ಲಾಭ

ಗುಲ್‌ಮೊಹರ್
ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

23 Jan, 2018
ಮನಸಿನಂತೆ ಕನಸು

ಗುಲ್‌ಮೊಹರ್
ಮನಸಿನಂತೆ ಕನಸು

23 Jan, 2018
ಚೆಲುವೆಯ ಸೌಂದರ್ಯ ಗುಟ್ಟು

ಗುಲ್‌ಮೊಹರ್
ಚೆಲುವೆಯ ಸೌಂದರ್ಯ ಗುಟ್ಟು

23 Jan, 2018
ದೀಪಾವಳಿಗೆ ‘ತಲಪತಿ 62’

ಗುಲ್‌ಮೊಹರ್
ದೀಪಾವಳಿಗೆ ‘ತಲಪತಿ 62’

23 Jan, 2018
ಒರಟು ವ್ಯಕ್ತಿಯ  ಸಂಗೀತ ಶಕ್ತಿ

ಪ್ರೇರಣೆ
ಒರಟು ವ್ಯಕ್ತಿಯ ಸಂಗೀತ ಶಕ್ತಿ

22 Jan, 2018