ಶ್ರಮದ ಪರಿಚಯವೂ ಆಗಲಿ

‘ಯಾರಾದರೂ ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

‘ಯಾರಾದರೂ ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ’ (ಪ್ರ.ವಾ., ಡಿ. 25) ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಈ ಸುದ್ದಿ ಓದುತ್ತಿದ್ದಂತೆಯೇ, ಇದೇ ರೀತಿ ನಮಗೆ ಆಹಾರ ಪದಾರ್ಥಗಳನ್ನು ಬೆಳೆದುಕೊಟ್ಟಿರುವ, ನಾವು ತೊಟ್ಟಿರುವ ಬಟ್ಟೆಯನ್ನು ನೇಯ್ದಿರುವ ಮತ್ತು ವಾಸಕ್ಕೆ ಮನೆಯನ್ನು ಕಟ್ಟಿರುವ ವ್ಯಕ್ತಿಗಳ ಬೆವರನ್ನು ಪರೀಕ್ಷಿಸಿದರೆ, ನಮ್ಮ ಜಾತಿ–ಧರ್ಮವನ್ನು ಮತ್ತಷ್ಟು ಖಚಿತವಾಗಿ ತಿಳಿಯಬಹುದು ಎಂಬ ಅನಿಸಿಕೆಯುಂಟಾಯಿತು.

ಅನಂತಕುಮಾರ್ ಹೆಗಡೆಯವರು ಇತ್ತೀಚೆಗೆ ಆಡುತ್ತಿರುವ ಮಾತುಗಳು ಮೇಲ್ನೋಟಕ್ಕೆ ಹಗುರವಾಗಿ ಕಂಡುಬಂದರೂ, ಅದರಿಂದ ಒಟ್ಟು ಸಮಾಜದ ಮತ್ತು ದೇಶದ ಜನರ ಬದುಕಿಗೆ ದೊಡ್ಡ ಹಾನಿಯುಂಟಾಗುತ್ತಿದೆ. ಏಕೆಂದರೆ ಸಾರ್ವಜನಿಕ ಜೀವನದ ವ್ಯವಹಾರಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾತಿ, ಧರ್ಮವನ್ನು ತನ್ನ ಮೇಲರಿಮೆಯ ಮತ್ತು ಅಹಂಕಾರದ ಆಯುಧವನ್ನಾಗಿ ಮಾಡಿಕೊಂಡಾಗ ಉಂಟಾಗುವ ಸಾಮಾಜಿಕ ಕ್ಷೋಭೆಯು ಇಡೀ ಸಮಾಜವನ್ನು ಮತ್ತು ದೇಶವನ್ನು ಆವರಿಸತೊಡಗುತ್ತದೆ.

ನೂರಾರು ವರ್ಷಗಳಿಂದ ಕಡುಬಡತನದ ಬದುಕಿನಲ್ಲೂ ನೆರೆಹೊರೆಯವರ ಜೊತೆಯಲ್ಲಿ ನೆಮ್ಮದಿಯಿಂದ ಬಾಳುತ್ತಿರುವ ಕೆಳಮಧ್ಯಮ ವರ್ಗದ ಮತ್ತು ಕೆಳವರ್ಗದ ಜನರ ಬದುಕನ್ನು ಇಂತಹ ಮಾತಿನ ಕಿಡಿಗಳು ಮೊದಲು ದುರಂತಕ್ಕೆ ತಳ್ಳುತ್ತವೆ. ಆನಂತರ ನಾವು ಸುರಕ್ಷಿತವೆಂದು ನಂಬಿ, ಈ ಬಗೆಯ ಮೋಜಿನ ಮಾತುಗಳನ್ನು ಕೇಳುತ್ತಿರುವ ಮಧ್ಯಮ ಮೇಲು ವರ್ಗದವರು ಮತ್ತು ಸಿರಿವಂತರು ಸಾಮಾಜಿಕ ಕ್ಷೋಭೆಯಿಂದ ಉಂಟಾಗುವ ದಳ್ಳುರಿಯಲ್ಲಿ ಬೇಯುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಇಂತಹ ಮಾತುಗಳಿಗೆ ಸಂವಿಧಾನದತ್ತವಾದ ಕಾನೂನು ಇಲ್ಲವೇ ಮಾನವೀಯತೆಯಿಂದ ಕೂಡಿದ ನಡೆನುಡಿಗಳಿಂದ ಕಡಿವಾಣವನ್ನು ಹಾಕದಿದ್ದರೆ ಯಾರೊಬ್ಬರಿಗೂ ನೆಮ್ಮದಿಯಿಲ್ಲದಂತಹ ದಿನಗಳು ಮುಂದೆ ಬರಲಿವೆ.

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಸ್ಥಿರ ದೂರವಾಣಿಗೆ ಕರಭಾರ

ಸ್ಥಿರ ದೂರವಾಣಿಗೆ ಪ್ರತೀ ತಿಂಗಳು ಗ್ರಾಹಕರು ಶೇ 18ರಷ್ಟು ಜಿಎಸ್‌ಟಿ ಕಕ್ಕಬೇಕಾಗಿದೆ. ಮೂಗಿಗೆ ಮೂಗುತಿ ಭಾರ ಎನಿಸಿದೆ. ಸ್ಥಿರ ದೂರವಾಣಿಗೆ ಉತ್ತೇಜನ ಕೊಡುವಲ್ಲಿ ಕೇಂದ್ರ...

23 Jan, 2018

ವಾಚಕರ ವಾಣಿ
ಪುಂಡಾಟಿಕೆಗೆ ಪ್ರೇರಣೆ

ಪ್ರಕಾಶ್ ರೈ ಇತ್ತೀಚೆಗೆ ಶಿರಸಿಯ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ, ದೇಶದಲ್ಲಿ ಈಗ ಅಸಮಾನತೆ ಹೆಚ್ಚುತ್ತಿರುವ ಕುರಿತು ಹಾಗೂ ಸೌಹಾರ್ದವನ್ನು ಹಾಳುಗೆಡವುತ್ತಿರುವ ಸಮೂಹಗಳ ಬಗ್ಗೆ...

23 Jan, 2018

ವಾಚಕರ ವಾಣಿ
ಕಲ್ಯಾಣ ರಾಜ್ಯದ ಕನಸು...

ಬಸವಣ್ಣನವರು ತಮ್ಮ ಸಹಜ ಮಾನವೀಯ, ವೈಚಾರಿಕ, ವಿಶ್ವಕುಟುಂಬತ್ವದ ನೆಲೆಯಲ್ಲಿ ತಮ್ಮ ಚಿಂತನೆಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಕಾರಣಗಳಿಂದ ಲಿಂಗವಂತ (ಲಿಂಗಾಯತ) ಧರ್ಮ ವಿಶ್ವಧರ್ಮವಾಗಲು ಸಾಧ್ಯವಾಗಿದೆ....

23 Jan, 2018

ವಾಚಕರ ವಾಣಿ
ಅಪಾರ್ಥ ಬೇಡ!

‘ಯುವತಿಯರ ಜತೆ ಬಿಜೆಪಿ ಕಾರ‍್ಯಕರ್ತರ ಕುಣಿತ...’ (ಪ್ರ.ಜಾ., ಜ. 13). ಪರಿವರ್ತನಾ ಯಾತ್ರೆಯಲ್ಲಿ ‘ಅಲ್ಲಾಡ್ಸು, ಅಲ್ಲಾಡ್ಸು’ ಎನ್ನುವಂತಹ ಹಾಡುಗಳಿಗೆ ವೇದಿಕೆಯ ಮೇಲೆ ನೃತ್ಯ ನಡೆಯಿತಂತೆ!...

23 Jan, 2018

ವಾಚಕರ ವಾಣಿ
ಚಿತ್ರೋತ್ಸವ ಮತ್ತು ನೆರವು

ನಾನು ಒಂದು ದಶಕದಿಂದ ಗೋವಾ ಚಿತ್ರೋತ್ಸವಕ್ಕೆ ಹೋಗುತ್ತಿದ್ದೇನೆ. ಮಡಗಾಂವ್ ಅಥವಾ ಪಣಜಿಯಿಂದ ದೂರದಲ್ಲಿರುವ ಸ್ಟೇಡಿಯಂ ಒಂದರಲ್ಲಿ ಸಮಾರಂಭ ಮಾಡುತ್ತಿರುವುದರಿಂದ ಪ್ರತಿನಿಧಿಗಳಿಗೆ ತೊಂದರೆ ಆಗುತ್ತಿದೆ ಅಷ್ಟೇ. ...

23 Jan, 2018