ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಕಚೇರಿ ಉದ್ಘಾಟಿಸಿದ ಹಫೀಜ್‌

Last Updated 25 ಡಿಸೆಂಬರ್ 2017, 19:42 IST
ಅಕ್ಷರ ಗಾತ್ರ

ನವದೆಹಲಿ/ಲಾಹೋರ್‌: ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಭಾನುವಾರ ಲಾಹೋರ್‌ನಲ್ಲಿ ತನ್ನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಕಚೇರಿಯನ್ನು ಉದ್ಘಾಟಿಸಿದ್ದಾನೆ.

ಪಾಕಿಸ್ತಾನದ ಲಷ್ಕರ್‌-ಎ-ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸ್ಥಾಪಿಸಿದ ಎಂಎಂಎಲ್‌ ಪಕ್ಷದ ನೋಂದಣಿಗೆ ಚುನಾವಣಾ ಆಯೋಗ ನಿರಾಕರಿಸಿತ್ತು.

ನಿಷೇಧಿತ ಸಂಘಟನೆಗಳ ಮುಖಂಡರ ರಾಜಕೀಯ ಪ್ರವೇಶವನ್ನು ವಿರೋಧಿಸಿದ್ದ ಆಂತರಿಕ ಭದ್ರತಾ ಸಚಿವಾಲಯ, ದೇಶದ ಭದ್ರತೆಯ ದೃಷ್ಟಿಯಿಂದ ಎಂಎಂಎಲ್‌ ರಾಜಕೀಯ ಪ್ರವೇಶಕ್ಕೆ ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಇದರ ಹೊರತಾಗಿಯೂ ಆತ ರಾಜಕೀಯ ಪಕ್ಷದ ಕಚೇರಿ ತೆರೆದಿದ್ದಾನೆ.

ಹಫೀಜ್‌ ನೇತೃತ್ವದ ಎಲ್‌ಇಟಿಯನ್ನು ಪಾಕಿಸ್ತಾನ ಮತ್ತು ಅಮೆರಿಕ ಸರ್ಕಾರ ನಿಷೇಧಿಸಿವೆ. ಮಾಜಿ ಪ್ರಧಾನಿ ನವಾಜ್‌ ಷರೀಫ್‌ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂಎಂಎಲ್‌ ಬೆಂಬಲಿತ ಅಭ್ಯರ್ಥಿ ನಾಲ್ಕನೇ ಸ್ಥಾನ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT