ಶಿಕಾರಿಪುರ

ರೈತನ ಶ್ರಮಕ್ಕೆ ಬೆಲೆ‌ಕಟ್ಟಲು ಅಸಾಧ್ಯ

‘ಪರಸ್ಪರ ದ್ವೇಷ ಅಸೂಯೆ ಮರೆತು ನಾವು ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಕಷ್ಟ ಸುಖದಲ್ಲಿ ಪಾಲುದಾರರಾಗಬೇಕು.

ಶಿಕಾರಿಪುರ: ‘ಜಗತ್ತಿಗೆ ಅನ್ನ ನೀಡುವ ರೈತನ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಭಾನುವಾರ ನಡೆದ ಸುಗಂಧ ಬಳಗದ 12ನೇ ವರ್ಷದ ಸ್ನೇಹ ಸಮ್ಮಿಲನ ಹಾಗೂ ರೈತರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರೈತರ ಕೃಷಿ ಚಟುವಟಿಕೆಗೆ ಅಗತ್ಯವಾದ ಮಣ್ಣನ್ನು ತಯಾರಿಸಲು ಸಾಧ್ಯವಿಲ್ಲ. ನಮಗೆ ಅನ್ನ ನೀಡುವ ರೈತನ ಜೀವನ ಕಷ್ಟವಾಗಿದೆ. ಶ್ರಮಜೀವಿಗಳಾದ ರೈತರನ್ನು ಸ್ಮರಿಸಿ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಸುಗಂಧ ಬಳಗ ತಾಲ್ಲೂಕಿನ ರೈತರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ’ ಎಂದು ಅವರು ಶ್ಲಾಘಿಸಿದರು.

‘ಪರಸ್ಪರ ದ್ವೇಷ ಅಸೂಯೆ ಮರೆತು ನಾವು ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು. ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಕಷ್ಟ ಸುಖದಲ್ಲಿ ಪಾಲುದಾರರಾಗಬೇಕು. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಲು ಸಹಕಾರಿಯಾಗಿದೆ’ ಎಂದ ಅವರು, ‘ಪಟ್ಟಣದ ಜನರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ’ ಎಂದರು.

ಸುಗಂಧ ಬಳಗ ಅಧ್ಯಕ್ಷ ಎಂ.ಜಿ. ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಮತಾಸಾಲಿ, ಅರುಂಧತಿ ರಾಜೇಶ್‌, ಪುರಸಭೆ ಸದಸ್ಯರಾದ ಎಂ.ಎಚ್‌. ರವೀಂದ್ರ, ರೂಪಕಲಾ ಎಸ್‌. ಹೆಗಡೆ, ಭದ್ರಾಪುರ ಫಾಲಾಕ್ಷ, ಮಾಜಿ ಸದಸ್ಯ ಕೆ.ಪಿ. ಮಂಜುನಾಥ್‌, ತರಲಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಸಂತೋಷ್‌, ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ್‌, ಸುಗಂಧ ಬಳಗ ಕಾರ್ಯದರ್ಶಿ ಎ.ಎಸ್‌. ಶಿವಕುಮಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್‌.ಬಿ. ಮಠದ್‌ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುಗಂಧ ಬಳಗದ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Comments
ಈ ವಿಭಾಗದಿಂದ ಇನ್ನಷ್ಟು
ಬೋರ್‌ ಬಂಡೆಗಳ ಒಡಲಲ್ಲಿ ಕೇಳದ ಭೋರ್ಗರೆತ

ಕಾರ್ಗಲ್
ಬೋರ್‌ ಬಂಡೆಗಳ ಒಡಲಲ್ಲಿ ಕೇಳದ ಭೋರ್ಗರೆತ

17 Mar, 2018
ಕನಸಿನ ಕಾರ್ಖಾನೆ ಉಳಿಸಲು ಎಲ್ಲರ ಸಂಕಲ್ಪ ಅಗತ್ಯ

ಭದ್ರಾವತಿ
ಕನಸಿನ ಕಾರ್ಖಾನೆ ಉಳಿಸಲು ಎಲ್ಲರ ಸಂಕಲ್ಪ ಅಗತ್ಯ

17 Mar, 2018
ಪ್ರಕರಣ ದಾಖಲು ಹೋರಾಟ ಹತ್ತಿಕ್ಕುವ ತಂತ್ರ: ದೇವೇಂದ್ರಪ್ಪ

ಶಿವಮೊಗ್ಗ
ಪ್ರಕರಣ ದಾಖಲು ಹೋರಾಟ ಹತ್ತಿಕ್ಕುವ ತಂತ್ರ: ದೇವೇಂದ್ರಪ್ಪ

17 Mar, 2018
‘ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ– ಕಮಲ ಜಾತ್ರೆ’

ಆನವಟ್ಟಿ
‘ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ– ಕಮಲ ಜಾತ್ರೆ’

17 Mar, 2018
ಕಾರ್ಮಿಕರ ಮೊಗದಲ್ಲಿ ಉಕ್ಕೀತೇ ಸಂತಸ ?

ಭದ್ರಾವತಿ
ಕಾರ್ಮಿಕರ ಮೊಗದಲ್ಲಿ ಉಕ್ಕೀತೇ ಸಂತಸ ?

16 Mar, 2018