ಶಿರಾ

ಪಹಣಿ ಹೊಂದಿರುವ ರೈತರಿಗೆ ಸಾಲ ವಿತರಣೆ

ರಾಜ್ಯ ಸರ್ಕಾರ ₹ 50 ಸಾವಿರ ಸಾಲ ಮನ್ನಾ ಮಾಡಿದೆ. ಶಾಸಕ ಕೆ.ಎನ್.ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಾಲಮನ್ನಾಕ್ಕೆ ಕಾರಣೀಭೂತರಾಗಿದ್ದಾರೆ

ಶಿರಾ: ಪಹಣಿ ಹೊಂದಿರುವ ಎಲ್ಲ ರೈತರಿಗೆ ಮುಂದಿನ ದಿನಗಳಲ್ಲಿ ₹ 25 ರಿಂದ 50 ಸಾವಿರ ಸಾಲ ವಿತರಿಸುವುದಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ನಿರ್ದೇಶಕ ಆರ್.ರಾಜೇಂದ್ರ ಹೇಳಿದರು.

ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಈಚೆಗೆ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಪಹಣಿ ಹೊಂದಿದ ರೈತರಿಗೆ ಸಾಲ ವಿತರಣೆ ಹಾಗೂ ನೂತನ ಅಂಗಡಿ ಮಳಿಗೆಗಳ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ₹ 50 ಸಾವಿರ ಸಾಲ ಮನ್ನಾ ಮಾಡಿದೆ. ಶಾಸಕ ಕೆ.ಎನ್.ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಾಲಮನ್ನಾಕ್ಕೆ ಕಾರಣೀಭೂತರಾಗಿದ್ದಾರೆ ಎಂದರು.

ಬರಗೂರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ 663 ರೈತರಿಗೆ ₹ 1.75 ಕೋಟಿ ಹಾಗೂ ದೊಡ್ಡಬಾಣಗೆರೆ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ 233 ರೈತರಿಗೆ ₹ 1.10 ಕೋಟಿ ಸೇರಿದಂತೆ ಒಟ್ಟು 896 ರೈತರಿಗೆ ₹ 2.85 ಕೋಟಿ ಸಾಲ ವಿತರಿಸಲಾಯಿತು.

ಬರಗೂರು ವಿಎಸ್ಎಸ್ಎನ್ ಅಧ್ಯಕ್ಷ ಮದ್ದೇಗೌಡ, ದೊಡ್ಡಬಾಣಗೆರೆ ವಿಎಸ್ಎಸ್ಎನ್ ಅಧ್ಯಕ್ಷ ವೀರಣ್ಣ, ಮುಖಂಡರಾದ ಜಿ.ಎನ್.ಮೂರ್ತಿ, ಎಸ್.ರಾಮಚಂದ್ರ, ಡಿಸಿಸಿ ಬ್ಯಾಂಕ್ ಮಹಾಪ್ರಭಂದಕರಾದ ಜಿ.ಪ್ರಕಾಶ್, ಕುಬೇಂದ್ರ ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಕೃಷ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಶ್ರೀನಿವಾಸಬಾಬು, ಎಚ್.ಜಿ.ಲಿಂಗಪ್ಪ, ಗುಜ್ಜಾರಪ್ಪ, ಹುಣಸೇಹಳ್ಳಿ ಶಿವಕುಮಾರ್, ಮಹೇಂದ್ರ ಗೌಡ, ಅಜ್ಜೇಗೌಡ, ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿನರಸಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಜನಾರ್ದನ್, ವಿಠಲ್, ಯುವರಾಜು, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕರಾದ ಕೃಷ್ಣೇಗೌಡ, ಜಯರಾಂ, ಶ್ರೀನಿವಾಸ್, ಉಗ್ರೇಶ್‌ಗೌಡ, ನರಸಿಂಹಮೂರ್ತಿ, ಶೈಲಜಾ, ಶಾರದಮ್ಮ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

ಶಿರಾ
ಬೆಂಬಲಿಗರ ಬಹುಪರಾಕ್‌, ಬಲ ಪ್ರದರ್ಶನ

21 Apr, 2018

ತುಮಕೂರು
ನಗರದಲ್ಲಿ ಬಿಜೆಪಿ ಭಾರಿ ಮೆರವಣಿಗೆ

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಜಿ.ಜ್ಯೋತಿ ಗಣೇಶ್ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶ್‌ಗೌಡ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

21 Apr, 2018

ತುಮಕೂರು
ನಗರದಲ್ಲಿ ಬಿಜೆಪಿ ಭಾರಿ ಮೆರವಣಿಗೆ

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಜಿ.ಜ್ಯೋತಿ ಗಣೇಶ್ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶ್‌ಗೌಡ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

21 Apr, 2018

ತುಮಕೂರು
ನಗರದಲ್ಲಿ ಬಿಜೆಪಿ ಭಾರಿ ಮೆರವಣಿಗೆ

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಜಿ.ಜ್ಯೋತಿ ಗಣೇಶ್ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶ್‌ಗೌಡ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

21 Apr, 2018

ತುಮಕೂರು
ರಂಗೇರಿದ ಚುನಾವಣೆ; 40 ನಾಮಪತ್ರ ಸಲ್ಲಿಕೆ

ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ, ಸ್ವತಂತ್ರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಕಾರ್ಯ ಚುರುಕುಗೊಂಡಿದೆ.

21 Apr, 2018