ಹೊರ್ತಿ

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಮುಖಂಡ ಅಣ್ಣಪ್ಪ ಸಾಹುಕಾರ ಖೈನೂರ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರದಾರ, ಹೀನ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು.

ಹೊರ್ತಿ: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಹೊರ್ತಿ ಬಳಿ ರಾಷ್ಟ್ರೀಯ ಹೆದ್ದಾರಿ-13 ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಗ್ರಾಮದ ರೇವಣಸಿದ್ದೇಶ್ವರ ಹಳೆಗುಡಿ ಮುಂಬಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ತೆರಳಿ, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಿಸಿ, ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗಿ ಮೂರ್ನಾಲ್ಕು ಕಿ.ಮೀ ವರೆಗೆ ವಾಹನಗಳು ಸಾಲಾಗಿ ನಿಂತಿರುವುದು ಕಂಡು ಬಂದಿತು.

ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ಬಾಲಕಿ ಮೆಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅತ್ಯಂತ ಹೀನ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಅಣ್ಣಪ್ಪ ಸಾಹುಕಾರ ಖೈನೂರ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರದಾರ, ಹೀನ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಶ್ರೀಮಂತ ಇಂಡಿ, ಬಿ.ಡಿ,ಪಾಟೀಲ, ಮಹಾದೇವ ಪೂಜಾರಿ, ಗಣಪತಿ ಬಾಣಿಕೋಲ, ಶ್ರೀನಿವಾಸ ಕಂದಗಲ್, ರವಿ ಪೂಜಾರಿ, ಸಂತೋಷಕುಮಾರ ತಳಕೇರಿ, ಮಹಾಂತೇಶ ಕಾಂಬಳೆ, ಕಲ್ಲು ಅಂಜುಟಗಿ, ಶಿವಪುತ್ರ ತಳಕೇರಿ, ಮಹಾದೇವ ಸಾವಳಸಂಗ, ಮಲ್ಲು ಬನಸೋಡೆ, ಹುಸನಪ್ಪ ಬಾಣಿಕೋಲ, ಶಿವಾನಂದ ಹಲಕವಡೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು

Comments
ಈ ವಿಭಾಗದಿಂದ ಇನ್ನಷ್ಟು
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

ವಿಜಯಪುರ
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

19 Apr, 2018
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

ನಿಡಗುಂದಿ
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

19 Apr, 2018

ನಿಡಗುಂದಿ
ಚುನಾವಣೆ ಬಹಿಷ್ಕಾರ: ಎಚ್ಚರಿಕೆ

ಗ್ರಾಮಕ್ಕೆ ಮೂಲಸೌಲಭ್ಯ ಗಳನ್ನು ಒದಗಿಸಿಲ್ಲ ಎಂದು ಆಕ್ರೋಶ ಗೊಂಡಿರುವ ಸಮೀಪದ ಉಣ್ಣಿಬಾವಿ ಗ್ರಾಮಸ್ಥರು, ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

19 Apr, 2018
ಅಕ್ಷಯ ತೃತೀಯ; ಖರೀದಿ ಜೋರು

ವಿಜಯಪುರ
ಅಕ್ಷಯ ತೃತೀಯ; ಖರೀದಿ ಜೋರು

19 Apr, 2018
ರಾಷ್ಟ್ರೀಯ ಬಸವೋತ್ಸವ; ಬಸವ ಜಯಂತಿ ಮರೀಚಿಕೆ

ವಿಜಯಪುರ
ರಾಷ್ಟ್ರೀಯ ಬಸವೋತ್ಸವ; ಬಸವ ಜಯಂತಿ ಮರೀಚಿಕೆ

18 Apr, 2018