ಯಾದಗಿರಿ

‘100 ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಭಾಗ್ಯ’

ಯಾದಗಿರಿ ಮತಕ್ಷೇತ್ರದ 100 ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ₹1000 ತುಂಬಲಾಗುವುದು. ಇದರ ಲಾಭವನ್ನು ಮತಕ್ಷೇತ್ರದ ಬಡ ಕುಟುಂಬಗಳು ಪಡೆದುಕೊಳ್ಳಬೇಕು’

ಯಾದಗಿರಿ: ‘ಯಾದಗಿರಿ ಮತಕ್ಷೇತ್ರದ 100 ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ₹1000 ತುಂಬಲಾಗುವುದು. ಇದರ
ಲಾಭವನ್ನು ಮತಕ್ಷೇತ್ರದ ಬಡ ಕುಟುಂಬಗಳು ಪಡೆದುಕೊಳ್ಳಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮೇಟಿ ತಿಳಿಸಿದ್ದಾರೆ.

‘1ರಿಂದ 12 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ₹1,000 ತುಂಬಿದ ನಂತರ ಖಾತೆಯಲ್ಲಿ ತಮ್ಮ ಕೈಲಾದಷ್ಟು ಹಣ ಜಮಾ ಮಾಡುತ್ತಾ ಹೋಗಬೇಕು. ಮಗುವಿಗೆ 18 ವರ್ಷ ತುಂಬಿದ ಮೇಲೆ ಭವಿಷ್ಯಕ್ಕೆ ಅನುಕೂಲ ಆಗುವಷ್ಟು ನಗದು ಸಿಗುತ್ತದೆ’ ಎಂದು ವಿವರಿಸಿದ್ದಾರೆ.

ಬಡ ಹೆಣ್ಣು ಮಕ್ಕಳು ನಿಗಧಿತ ಅರ್ಜಿ ನಮೂನೆ ತುಂಬಿ ಆಧಾರ್ ಕಾರ್ಡ್, ಭಾವಚಿತ್ರ, ಜನನ ಪ್ರಮಾಣಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಬಹುದು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಅರ್ಜಿ ದೊರೆಯುತ್ತವೆ. 100ಕ್ಕೂ ಹೆಚ್ಚು ಅರ್ಜಿ ಬಂದರೆ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ಜ.15ರೊಳಗಾಗಿ ಅರ್ಜಿ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 94815 38567 ಗೆ ಸಂಪರ್ಕಿಸಬಹುದು ಎಂದು ಭೀಮಣ್ಣ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಗುಡುಗಿದ ಮಹಿಳೆಯರು: ಸಭೆ ಮೊಟಕು

ಯಾದಗಿರಿ
ಗುಡುಗಿದ ಮಹಿಳೆಯರು: ಸಭೆ ಮೊಟಕು

20 Jan, 2018
ವೈಭವದ ಸೋಮನಾಥ ದೇವರ ಉಚ್ಛಾಯಿ

ಕಕ್ಕೇರಾ
ವೈಭವದ ಸೋಮನಾಥ ದೇವರ ಉಚ್ಛಾಯಿ

19 Jan, 2018
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

ಯಾದಗಿರಿ
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

19 Jan, 2018
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

ಯಾದಗಿರಿ
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

18 Jan, 2018

ಕೆಂಭಾವಿ
ಮೂಲಸೌಕರ್ಯಕ್ಕೆ ಆದ್ಯತೆ: ಶಿರವಾಳ

ಸಮೀಪದ ಮಲ್ಲಾ ಕ್ರಾಸ್‌ನಲ್ಲಿ 2017–18ನೇ ಸಾಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಮಲ್ಲಾದಿಂದ ಕೆಂಭಾವಿಯ 9.8 ಕಿ.ಮೀ ರಸ್ತೆಯ ₹1.25 ಕೋಟಿ...

18 Jan, 2018