ವಿಜಯಪುರ

‘ಕ್ರಿಸ್ತನ ಸಂದೇಶ ಪ್ರತಿಯೊಬ್ಬರು ಪಾಲಿಸಿ’

ಯಾವುದೇ ಧರ್ಮಗಳಿರಲಿ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯುವುದರಿಂದ ಜನರು ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಇರುತ್ತದೆ. ಯುವಜನರು ಸರಿದಾರಿಯಲ್ಲಿ ನಡೆಯುತ್ತಾರೆ.

ವಿಜಯಪುರ: ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಇಲ್ಲಿನ ಚಂದೇನಹಳ್ಳಿ ಗೇಟ್ ನಲ್ಲಿರುವ ಯೇಸು ಪ್ರೇಮಾಲಯ ಚರ್ಚ್‌ನಲ್ಲಿ ವಿಶೇಷ ಕಾರ್ಯಕ್ರಮ ಯೋಜಿಸಲಾಗಿತ್ತು. ಹಬ್ಬದ ಅಂಗವಾಗಿ ಚರ್ಚ್‌ನ್ನು ವಿದ್ಯುತ್ ದೀಪಾಂಲಕಾರಗಳಿಂದ ಶೃಂಗಾರಗೊಳಿಸಲಾಗಿತ್ತು. ಮಕ್ಕಳಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಕೇಕ್ ಕತ್ತರಿಸುವ ಮೂಲಕ ಯೇಸುಕ್ರಿಸ್ತನ ಜನ್ಮದಿನಾಚರಣೆ ಮಾಡಲಾಯಿತು. ಪಾಸ್ಟರ್ ವಿ.ಸತ್ಯನಾರಾಯಣಪ್ಪ ಅವರು, ಕೇಕ್ ಕತ್ತರಿಸಿ, ದೈವ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದೇವನಹಳ್ಳಿ ಬ್ಲಾಕ್ ಕೆ.ಪಿ.ಸಿ.ಸಿ.ಸದಸ್ಯ ವಿ.ಮಂಜುನಾಥ್, ಯೇಸುಕ್ರಿಸ್ತನ ಸಂದೇಶ ಪ್ರತಿಯೊಬ್ಬರು ಅನುಸರಿಸಬೇಕು. ಭಗವದ್ಗೀತೆ, ಕುರಾನ್, ಬೈಬಲ್ ನಂತಹ ಉತ್ತಮ ಧರ್ಮಗ್ರಂಥಗಳು ಪ್ರಪಂಚದಲ್ಲಿಯೇ ಅತ್ಯುತ್ತಮವಾದ ಗ್ರಂಥಗಳಾಗಿ ಹೊರಹೊಮ್ಮಿವೆ. ಮಾನವರು ಸಾಗಬೇಕಾದ ನಿಜವಾದ ಮಾರ್ಗವನ್ನು, ಪಾಪರಹಿತವಾದ ಜೀವನ ನಡೆಸುವುದು, ಶತ್ರುಗಳನ್ನು ಕ್ಷಮಿಸುವಂತಹ ಗುಣ ಬೈಬಲ್ ಹೇಳಿಕೊಡುತ್ತದೆ. ನಾವು ಎಲ್ಲಾ ಧರ್ಮಗಳನ್ನು ಪ್ರೀತಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿ.ಎಂ.ನಾಗರಾಜು ಮಾತನಾಡಿ, ಯಾವುದೇ ಧರ್ಮಗಳಿರಲಿ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯುವುದರಿಂದ ಜನರು ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಇರುತ್ತದೆ. ಯುವಜನರು ಸರಿದಾರಿಯಲ್ಲಿ ನಡೆಯುತ್ತಾರೆ. ಯೇಸು ಕ್ರಿಸ್ತನು ಭೋದನೆ ಮಾಡಿದಂತೆ ದಾನ ಧರ್ಮ ಮಾಡುವ ಮೂಲಕ ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ನಾಗರಿಕರು ಭಾಗವಹಿಸಿದ್ದರು. ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಮಹಬೂಬ್ ಪಾಷ, ಅಪ್ಜಲ್, ಮುನಿಕೃಷ್ಣಪ್ಪ, ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

ದೊಡ್ಡಬಳ್ಳಾಪುರ
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

27 Mar, 2018
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

ಆನೇಕಲ್‌
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

27 Mar, 2018
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

ವಿಜಯಪುರ
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

27 Mar, 2018

ವಿಜಯಪುರ
ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮನವಿ

ಪ್ರತಿ ವಾರ್ಡಿಗೊಂದರಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು...

24 Mar, 2018
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

ದೊಡ್ಡಬಳ್ಳಾಪುರ
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

24 Mar, 2018