ಚಿಕ್ಕೋಡಿ

ನೆನಪು ಕೆದಕಿದ ಹಳೆಯ ವಸ್ತುಗಳ ಪ್ರದರ್ಶನ

ಆಧುನಿಕ ಜೀವನ ಶೈಲಿಯಿಂದಾಗಿ ಗುಜರಿ ಅಂಗಡಿ ಸೇರುತ್ತಿರುವ ಪುರಾತನ ಗೃಹೋಪಯೋಗಿ ಮತ್ತು ಕೃಷಿ ಪರಿಕರಗಳನ್ನು ಯಕ್ಸಂಬಾದಲ್ಲಿ ನಡೆಯುತ್ತಿರುವ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಹಮ್ಮಿಕೊಂಡಿರುವ ಪ್ರೇರಣಾ ಉತ್ಸವದಲ್ಲಿ ಪ್ರದರ್ಶಿಸಲಾಗಿದ್ದು ಇವು ಜನರ ಗಮನ ಸೆಳೆಯುತ್ತಿವೆ.

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಹಮ್ಮಿಕೊಂಡಿರುವ ಪ್ರೇರಣಾ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪುರಾತನ ವಸ್ತುಗಳು

ಚಿಕ್ಕೋಡಿ: ಆಧುನಿಕ ಜೀವನ ಶೈಲಿಯಿಂದಾಗಿ ಗುಜರಿ ಅಂಗಡಿ ಸೇರುತ್ತಿರುವ ಪುರಾತನ ಗೃಹೋಪಯೋಗಿ ಮತ್ತು ಕೃಷಿ ಪರಿಕರಗಳನ್ನು ಯಕ್ಸಂಬಾದಲ್ಲಿ ನಡೆಯುತ್ತಿರುವ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಹಮ್ಮಿಕೊಂಡಿರುವ ಪ್ರೇರಣಾ ಉತ್ಸವದಲ್ಲಿ ಪ್ರದರ್ಶಿಸಲಾಗಿದ್ದು ಇವು ಜನರ ಗಮನ ಸೆಳೆಯುತ್ತಿವೆ.

ಕಟ್ಟಿಗೆಯ ತೊಟ್ಟಿಲು, ಹಿರಿಯರು ಧಾನ್ಯ ಅಳೆಯಲು ಬಳಸುತ್ತಿದ್ದ ಚಿಟ್ಟಿ, ನಿಟವಿಗಳು, ತಾಂಬೂಲ ಡಬ್ಬಿ, ಪುರಾತನ ಪ್ರಸಾಧನ ಸಾಮಗ್ರಿಗಳು, ಹಳೆಯ ಕಾಲದ ಪಾತ್ರೆಗಳು, ಮಣ್ಣಿನ ಮಡಿಕೆಗಳ ಅಡಕಲ್ಲು, ಕತ್ತಿ ಗುರಾಣಿಗಳು, ಕೂರಿಗೆ–ಖುರೂಪಿಗಳಾದಿ ಕೃಷಿ ಪರಿಕರಗಳು ವಸ್ತು ಪ್ರದರ್ಶನದಲ್ಲಿ ಇವೆ.

ಇಂದಿನ ದಿನಗಳಲ್ಲಿ ಮನೆ ತುಂಬ ಪ್ಲಾಸ್ಟಿಕ್‌ ವಸ್ತುಗಳು, ಯಂತ್ರಗಳು ತುಂಬಿಕೊಂಡಿವೆ. ಹಿರಿಯರು ಬಳಸುತ್ತಿದ್ದ ರುಬ್ಬು ಕಲ್ಲಿನ ಸ್ಥಾನವನ್ನು ಗ್ರೈಂಡರ್‌ ಆಕ್ರಮಿಸಿಕೊಂಡಿದೆ. ಚಿಟ್ಟಿ, ನಿಟವಿಗಳು ಕಣ್ಮರೆಯಾಗಿವೆ. ಕೌದಿಗಳ ಜಾಗದಲ್ಲಿ ರಂಗುರಂಗಿನ ರಗ್ಗುಗಳು ಬಂದಿವೆ. ಇಂತಹ ಅಪರೂಪದ ಹಳೆಯ ವಸ್ತುಗಳನ್ನು ಸಮುದಾಯಕ್ಕೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನವೇ ಈ ವಸ್ತು ಪ್ರದರ್ಶನ.
ಹಳೆಯ ಪೇಪರ್‌, ಐಸ್‌ಕ್ರೀಮ್‌ ಕಡ್ಡಿ, ಪ್ಲಾಸ್ಟಿಕ್‌ ಶೀಟ್‌ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿಕೊಂಡು ರಚಿಸಿರುವ ಅಂದವಾದ ಕಲಾಕೃತಿಗಳು, ತಮ್ಮ ಕಲ್ಪನೆಗೆ ಕುಂಚದಿಂದ ರೂಪದ ನೀಡಿದ ಚಿತ್ರಕೃತಿಗಳು, ವಿಜ್ಞಾನ ಮಾದರಿಗಳು ಉತ್ಸವದ ಆಕರ್ಷಣೆಗಳಾಗಿವೆ.

ವಸ್ತು ಪ್ರದರ್ಶನ ವೀಕ್ಷಿಸಲು ಬರುವ ಹಿರಿಯರು ತಾವು ಬಳಸುತ್ತಿದ್ದ ವಸ್ತುಗಳನ್ನು ಕಂಡು ಹಳೆಯ ನೆನಪುಗಳಿಗೆ ಜಾರಿದರೆ, ಮಕ್ಕಳು ಈ ವಸ್ತುಗಳು ಏನೆಂದು ತಿಳಿಯದೇ ಇತರರಿಂದ ವಿವರಣೆ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ನಮ್ಮ ಹೊಲ್ಲಾ ಉಳುಮಿ ಮಾಡಾಕ್ ಈಗ ಟ್ರ್ಯಾಕ್ಟರ್‌ ಬಳಸ್ತಾರ, ನಾವು ಕಟ್ಟಿಗೆ ಕೂರಿಗಿನ್ ನೋಡಿದ್ದಿಲ್ರೀ, ಇಲ್ಲಿ ಕೂರಿಗೆ, ಖೂರೂಪಿ ನೋಡಿ ಖುಷಿಯಾಯ್ತು, ಹಿತ್ತಾಳೆ ಪಾತ್ರೆಗಳು, ಮಣ್ಣಿನ ಮಡಿಕೆಗಳು, ಕಟ್ಟಿಗೆಯ ರವಿಗೆ, ಕೊಡಮಣಿಗೆ (ರೊಟ್ಟಿ ತಟ್ಟುವ ಪಾತ್ರೆ) ಕಂಡರೆ ಹಳೇ ಕಾಲದ ಜನರ ಜೀವನಶೈಲಿ ಅರ್ಥ ಆಗತೈತೀ ನೋಡ್ರಿ..’ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದರು. ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ನಡೆಯುತ್ತಿರುವ ಈ ವಸ್ತು ಪ್ರದರ್ಶನ ಇದೇ 28 ವರೆಗೆ ನಡೆಯಲಿದೆ.

 

Comments
ಈ ವಿಭಾಗದಿಂದ ಇನ್ನಷ್ಟು
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

ಬೆಳಗಾವಿ
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

22 Jan, 2018
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಬೆಳಗಾವಿ
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

22 Jan, 2018
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಬೆಳಗಾವಿ
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

21 Jan, 2018
ಜಾಗತಿಕ ಪೈಪೋಟಿ: ಗುಣಮಟ್ಟದ ಶಿಕ್ಷಣ ಅಗತ್ಯ

ಬೆಳಗಾವಿ
ಜಾಗತಿಕ ಪೈಪೋಟಿ: ಗುಣಮಟ್ಟದ ಶಿಕ್ಷಣ ಅಗತ್ಯ

20 Jan, 2018
ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

ಬೆಳಗಾವಿ
ಬೆಳಗಾವಿ ವಿಭಾಗಕ್ಕೂ ‘ಬಸ್‌ ಆಂಬುಲೆನ್ಸ್‌’

20 Jan, 2018