ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ತಂಬಾಕು ಉತ್ಪನ್ನ: ದಂಡ ವಸೂಲಿ

Last Updated 26 ಡಿಸೆಂಬರ್ 2017, 7:01 IST
ಅಕ್ಷರ ಗಾತ್ರ

ಔರಾದ್: ಅವಧಿ ಮೀರಿದ ಮತ್ತು ನಕಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ 10 ಅಂಗಡಿಗಳ ಮಾಲೀಕರಿಂದ 20 ಸಾವಿರ ದಂಡ ವಸೂಲಿ ಮಾಡಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ ನೇತೃತ್ವದಲ್ಲಿ ತಂಬಾಕು ನಿಯಂತ್ರಣ ಅಧಿಕಾರಿಗಳು ಭಾನುವಾರ ಪಟ್ಟಣದ ವಿವಿಧೆಡೆ ದಾಳಿ ಮಾಡಿದ್ದಾರೆ. ಈ ವೇಳೆ ಅವಧಿ ಮುಗಿದ ಮತ್ತು ನಕಲಿ ಸಿಗರೇಟ್‌ ಪ್ಯಾಕೇಟ್ ಮಾರಾಟ ಮಾಡುತ್ತಿ ರುವುದು ಬೆಳಕಿಗೆ ಬಂದಿದೆ. ಕೆಲವರಿಗೆ ಎಚ್ಚರಿಕೆ ನೀಡಲಾಗಿದ್ದು ಮತ್ತೆ ಕೆಲವರಿಗೆ ದಂಡ ವಿಧಿಸಿದ್ದಾರೆ.

‘ದಾಳಿ ವೇಳೆ ಕೆಲ ಅಂಗಡಿಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಗಮನಕ್ಕೆ ಬಂದಿದೆ. ಅಂತಹ ಅಂಗಡಿಗಳ ಹೆಸರು ಜಿಲ್ಲಾ ಮಕ್ಕಳ ಹಕ್ಕು ಸಮಿತಿಗೆ ಕೊಡಲಾಗಿದೆ’ ಎಂದು ಡಾ. ಮಹೇಶ ಬಿರಾದಾರ ತಿಳಿಸಿದ್ದಾರೆ.

ಪಟ್ಟಣದ ಕೆಲ ವ್ಯಾಪಾರಿಗಳು ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ತಂಬಾಕು ಉತ್ಪನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಅವು ಸರ್ಕಾರದಿಂದ ನಿಷೇಧಿತ ಉತ್ಪನ್ನಗಳಾಗಿವೆ. ಗ್ರಾಹಕರು ಅಂತಹ ಉತ್ಪನಗಳು ಖರೀದಿಸ ಬಾರದು’ ಎಂದು ಸಲಹೆ ನೀಡಿದ್ದಾರೆ. ಎಸ್‌ಎಸ್ಐ ರಮೇಶ, ತಂಬಾಕು ನಿಯಂತ್ರಣ ಕ್ಷೇತ್ರಾಧಿಕಾರಿ ಅನಿತಾ, ಕಲ್ಲಯ್ಯ ಸ್ವಾಮಿ ದಾಳಿ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT