ದಾವಣಗೆರೆ

ಹೆಗಡೆ ಮಾತು: ಪ್ರಗತಿಪರರ ಪ್ರತಿಭಟನೆ

ಹೆಗಡೆ ಜಾತ್ಯತೀತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಸಂವಿಧಾನ ಬದಲಿಸಬೇಕೆಂಬ ಹೇಳಿಕೆ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ

ದಾವಣಗೆರೆ: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರ ಇತ್ತೀಚಿನ ಹೇಳಿಕೆಗಳು ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು. 

ಹೆಗಡೆ ಜಾತ್ಯತೀತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಸಂವಿಧಾನ ಬದಲಿಸಬೇಕೆಂಬ ಹೇಳಿಕೆ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಶ್ರೋಕ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಮಹಾಲಿಂಗಪ್ಪ ಮಾತನಾಡಿ, ‘ಡಿಸೆಂಬರ್‌ 25 ಅಂಬೇಡ್ಕರ್‌ ಮನುಸ್ಮೃತಿಯನ್ನು ದಹನ ಮಾಡಿದ ದಿನ. ಇದೇ ದಿವಸ ಅವರದೇ ಹೆಸರಿನ ವೃತ್ತದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಚಿಸಿ ಎಂಬ ಘೋಷಣೆಯೊಂದಿಗೆ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ವಿರೋಧಿಸಲಾಗುತ್ತಿದೆ’ ಎಂದು ಹೇಳಿದರು.

ಧರ್ಮ, ಧರ್ಮಗಳ ನಡುವೆ ಕೋಮುಗಲಭೆಗಳನ್ನು ಸೃಷ್ಟಿಸುವ ಇಂತಹ ಸಂವಿಧಾನ ವಿರೋಧಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಿಪಿಐ ಮುಖಂಡ ಕೆ.ಎಲ್‌.ಭಟ್ ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರಾದ ಬಲ್ಲೂರು ರವಿಕುಮಾರ್, ಮಹಾಂತೇಶ್, ಹಾಲಸ್ವಾಮಿ, ರೇಣುಕಮ್ಮ, ತಿಪ್ಪೇಸ್ವಾಮಿ, ಭರ್ಮಪ್ಪ, ಪಿ.ಕೆ.ಗೌಸ್‌‍ಪೀರ್, ಶ್ರೀನಿವಾಸಮೂರ್ತಿ, ಅನಂತರಾಜು ಅವರೂ ವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರುಚಿ ಮೊಗ್ಗು ಅರಳಿಸಿದ ವಿದ್ಯಾರ್ಥಿಗಳು

ದಾವಣಗೆರೆ
ರುಚಿ ಮೊಗ್ಗು ಅರಳಿಸಿದ ವಿದ್ಯಾರ್ಥಿಗಳು

23 Jan, 2018

ದಾವಣಗೆರೆ
ತೇಪೆ ರಾಜಕಾರಣ ಬೇಕಿಲ್ಲ; ಭರವಸೆ ಈಡೇರಿಸಿ

ಸ್ವಾತಂತ್ರ್ಯ ಬಂದಾಗ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ಸಮಾಜವನ್ನು ಮುಂದಕ್ಕೆ ಕರೆಯೊಯ್ಯುವ ಕನಸುಗಳಿದ್ದವು. ಆದರೆ, ಸಮಾಜವೇ ಹಿಂದಕ್ಕೆ ಹೋಗಲು ಯತ್ನಿಸುತ್ತಿತ್ತು.

23 Jan, 2018
ನಿಲ್ಲದ ನಿಷೇಧಿತ ಪ್ಲಾಸ್ಟಿಕ್‌ ಬಳಕೆ

ದಾವಣಗೆರೆ
ನಿಲ್ಲದ ನಿಷೇಧಿತ ಪ್ಲಾಸ್ಟಿಕ್‌ ಬಳಕೆ

22 Jan, 2018
ಭೂಮಿ ಪರಿಹಾರಕ್ಕೆ ಟವರ್‌ ಏರಿದ ರೈತ

ದಾವಣಗೆರೆ
ಭೂಮಿ ಪರಿಹಾರಕ್ಕೆ ಟವರ್‌ ಏರಿದ ರೈತ

22 Jan, 2018
ಜಗಳೂರು ಜನರ ಕಾತರದ ಹುಣ್ಣಿಮೆ

ದಾವಣಗೆರೆ
ಜಗಳೂರು ಜನರ ಕಾತರದ ಹುಣ್ಣಿಮೆ

21 Jan, 2018