ಮುಳಗುಂದ

ಉದ್ಘಾಟನೆ ಭಾಗ್ಯ ಯಾವಾಗ ?

‘ಕಟ್ಟಡ ಕಾಮಗಾರಿ ಆರಂಭಿಸಿದ ಹತ್ತು ವರ್ಷಗಳು ಆಗುತ್ತ ಬಂದರೂ ಇನ್ನೂ ಮುಗಿದಿಲ್ಲ. 2018ರ ಏಪ್ರಿಲ್‌ 14ರ ಒಳಗೆ ಕೆಲಸ ಮುಗಿಸಬೇಕು’

ಮುಳಗುಂದ: ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಸಮುದಾಯ ಭವನದ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ. ಆದ್ದರಿಂದ ಕಟ್ಟಡದ ಉದ್ಘಾಟನೆ ಭಾಗ್ಯ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

2008–09ರ ಎಸ್.ಎಫ್‌.ಸಿ ಅನುದಾನದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 23.07 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಎರಡ್ಮೂರು ವರ್ಷ ಕಳೆದರೂ ಕೆಲಸ ಪ್ರಾರಂಭವಾಗಲೇ ಇಲ್ಲ. ಬಳಿಕ ಗುತ್ತಿಗೆದಾರ ಕೆಲಸ ಆರಂಭಿಸಿದರೂ ಅಪೂರ್ಣವಾಯಿತು. ಕೆಲ ದಿನಗಳಲ್ಲಿ ಪಟ್ಟಣ ಪಂಚಾಯ್ತಿ ಕೂಡ ಕಟ್ಟಡದ ಯೋಜನೆ ಬದಲಿಸಿತು.

ಹೆಚ್ಚುವರಿ ಕೆಲಸ ಮಾಡಿಸುವ ಸಲುವಾಗಿ 2013–14ನೇ ಸಾಲಿನಲ್ಲಿ ₹ 10 ಲಕ್ಷ ಮೊತ್ತದಲ್ಲಿ ಸ್ಲ್ಯಾಬ್ ವರೆಗೂ ಕೆಲಸ ಮುಗಿದಿದೆ. ಈಗ ಸಂಪೂರ್ಣ ಕಾಮಗಾರಿ ನಿರ್ವಹಣೆಗಾಗಿ 2016–17ನೇ ಸಾಲಿನಲ್ಲಿ ₹ 14.75 ಲಕ್ಷ ಮೊತ್ತದಲ್ಲಿ ಸಮುದಾಯ ಭವನದ ಸಂಪೂರ್ಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದಿದೆ. ಕಟ್ಟಡದ ಬಾಗಿಲು ಕೂಡ ಇಲ್ಲದ ಕಾರಣ ಈ ಸ್ಥಳ ಕುಡುಕರ ತಾಣವಾಗಿದೆ.

‘ಕಟ್ಟಡ ಕಾಮಗಾರಿ ಆರಂಭಿಸಿದ ಹತ್ತು ವರ್ಷಗಳು ಆಗುತ್ತ ಬಂದರೂ ಇನ್ನೂ ಮುಗಿದಿಲ್ಲ. 2018ರ ಏಪ್ರಿಲ್‌ 14ರ ಒಳಗೆ ಕೆಲಸ ಮುಗಿಸಬೇಕು’ ಎಂದು ಡಿ.ಎಸ್‌.ಎಸ್‌. ಸಂಚಾಲಕ ರಮೇಶ ಮ್ಯಾಗೇರಿ ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಾಣ ವಿಳಂಬವಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಳಗುಂದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಡಿ.ಅಗಡಿ ‘ ಈ ಹಿಂದೆ ಇದ್ದ ಮೊತ್ತದಲ್ಲಿ ಕಾಮಗಾರಿ ನಿರ್ವಹಣೆ ಮಾಡಲಾಗಿತ್ತು. ನಡುವೆ ಕಟ್ಟಡದ ನೀಲ ನಕ್ಷೆ ಬದಲಿಸಲಾಯಿತು. ಈಗ ಮತ್ತೆ ಪೂರ್ಣ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಒಂದುವಾರದಲ್ಲಿ ಕೆಲಸ ಆರಂಭವಾಗಲಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಗೋವಾ ಮೊಂಡುವಾದ ನಿಲ್ಲಿಸಲಿ

ನರಗುಂದ
ಗೋವಾ ಮೊಂಡುವಾದ ನಿಲ್ಲಿಸಲಿ

17 Jan, 2018

ನರೇಗಲ್
ವಿದ್ಯಾರ್ಥಿಗಳ ಶ್ರಮದಾನ; ಶೌಚಾಲಯ ನಿರ್ಮಾಣ

ಗ್ರಾಮದಲ್ಲಿ ನಡೆಯುತ್ತಿರುವ ಆರು ದಿನಗಳ ಶಿಬಿರವನ್ನು ಸಂಪೂರ್ಣ ಶೌಚಾಲಯ ನಿರ್ಮಾಣ ಮಾಡುವುದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಶೌಚಾಲಯ ನಿರ್ಮಾಣಕ್ಕೆ ಬೇಕಾಗುವ ವೆಚ್ಚವನ್ನು ಭರಿಸಿ ಸಹಕರಿಸುತ್ತಿದೆ. ...

17 Jan, 2018

ಮುಂಡರಗಿ
ಯುವಕರು ಜನಪದ ಕಲೆ ಮೈಗೂಡಿಸಿಕೊಳ್ಳಲಿ

ನೃತ್ಯ, ದೊಡ್ಡಾಟ, ಡೊಳ್ಳುಕುಣಿತ, ಹಾಡುಗಾರಿಕೆ ಮೊದಲಾದ ಜನಪದ ಕಲೆಗಳು ಮನರಂಜನೆ ನೀಡುವ ಜತೆ ಕಲಾವಿದರ ದೇಹಾರೋಗ್ಯವನ್ನು ಕಾಪಾಡುತ್ತವೆ.

17 Jan, 2018
ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ಹುಲಿ ದರ್ಶನ ಭಾಗ್ಯ

ಗದಗ
ಬಿಂಕದಕಟ್ಟಿಯಲ್ಲಿ ಪ್ರವಾಸಿಗರಿಗೆ ಹುಲಿ ದರ್ಶನ ಭಾಗ್ಯ

16 Jan, 2018

ನರಗುಂದ
‘ಸರ್ವಪಕ್ಷ ಸಭೆ ಬಳಿಕ ಮುಂದಿನ ನಿರ್ಧಾರ’

‘ಮಹದಾಯಿ ಕುರಿತು ಈ ಭಾಗದ ರೈತರು ಎಚ್ಚೆತ್ತುಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬವಣೆ, ಭಾವನೆ ಅರ್ಥಮಾಡಿಕೊಳ್ಳಬೇಕು. ಮಹದಾಯಿ ಯೋಜನೆ ಅನುಷ್ಠಾನವಾಗಬೇಕು.

16 Jan, 2018