ಹೊಳೆನರಸೀಪುರ

‘ಜೆ.ಡಿ.ಎಸ್‌–ಕಾಂಗ್ರೆಸ್‌ನಿಂದ ಅಭಿವೃದ್ಧಿ ಕುಂಠಿತ’

‘ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಂಬಾಕು ಮಾರುಕಟ್ಟೆ ಮಾಡುತ್ತೇನೆ ಎಂದು ಅದ್ಧೂರಿಯಾಗಿ ಭೂಮಿಪೂಜೆ ಮಾಡಿಸಿ ಹೋದವರು ಮತ್ತೆ ಈ ಬಗ್ಗೆ ಚಕಾರ ಎತ್ತಿಲ್ಲ. ಇಂತಹ ಸುಳ್ಳು ಭರವಸೆ ನೀಡುವ ಅಭ್ಯರ್ಥಿಗಳಿಂದ ನಿಮಗೆ ಸಹಾಯ ಆಗುವುದಿಲ್ಲ’

ಹೊಳೆನರಸೀಪುರ: ತಾಲ್ಲೂಕಿನಲ್ಲಿ 50 ವರ್ಷಗಳಿಂದ ಆಡಳಿತ ನಡೆಸಿದ ಜೆಡಿಎಸ್ ಹಾಗೂ 5 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನಿಂದಾಗಲಿ ಹಳ್ಳಿಮೈಸೂರು ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಯೋಗಾರಮೇಶ್‌ ಆರೋಪಿಸಿದರು.

ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕ್ಯಾತನಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಂಬಾಕು ಮಾರುಕಟ್ಟೆ ಮಾಡುತ್ತೇನೆ ಎಂದು ಅದ್ಧೂರಿಯಾಗಿ ಭೂಮಿಪೂಜೆ ಮಾಡಿಸಿ ಹೋದವರು ಮತ್ತೆ ಈ ಬಗ್ಗೆ ಚಕಾರ ಎತ್ತಿಲ್ಲ. ಇಂತಹ ಸುಳ್ಳು ಭರವಸೆ ನೀಡುವ ಅಭ್ಯರ್ಥಿಗಳಿಂದ ನಿಮಗೆ ಸಹಾಯ ಆಗುವುದಿಲ್ಲ’ ಎಂದು ಅವರು ಹೇಳಿದರು. ಬಡಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಬಿ.ಜೆ.ಪಿ. ಮುಖಂಡರಾದ ಕೆಂಪರಾಜು, ರಾಜೇಗೌಡ, ವಿಶ್ವನಾಥ್, ಯೋಗೇಶ್, ಡಿ.ಆರ್.ಶಿವಣ್ಣ, ಕೃಷ್ಣಶೆಟ್ಟಿ, ಮೋಹನ, ಸಿದ್ದೇಗೌಡ, ಲಿಂಗರಾಜು, ಬಳೆ ಮಂಜು, ಅಶೋಕ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ನೋ ಪಾರ್ಕಿಂಗ್’ನಲ್ಲೂ ವಾಹನ ನಿಲುಗಡೆ

ಹಾಸನ
‘ನೋ ಪಾರ್ಕಿಂಗ್’ನಲ್ಲೂ ವಾಹನ ನಿಲುಗಡೆ

18 Jun, 2018

ಹಾಸನ
ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ

ಯುವಜನರು ಹಾಗೂ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹಿಮ್ಸ್ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್ ಹೇಳಿದರು.

18 Jun, 2018

ಶ್ರವಣಬೆಳಗೊಳ
40 ಪಲ್ಲಕ್ಕಿಯಲ್ಲಿ ಗ್ರಂಥಗಳ ಮೆರವಣಿಗೆ

ಬಾಹುಬಲಿಮೂರ್ತಿಗೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು. ನಂತರ 40 ಪಲ್ಲಕ್ಕಿಯಲ್ಲಿಧವಲಾ, ಜಯಧವಲಾ, ಮಹಾಧವಲ, ಗೊಮ್ಮಟಸಾರ ಗ್ರಂಥಗಳ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.

18 Jun, 2018

ಹಾಸನ
ವನ ಸಂಪತ್ತು ನಾಶ ತಡೆಯಿರಿ

ಪರಿಸರ ದಿನಾಚರಣೆ ಕೇವಲ ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗದೇ ನಿರಂತರ ಪ್ರಕ್ರಿಯೆ ಯಾಗಬೇಕು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯ ಚಟುವಟಿಕೆ ಹಲವಾರು ಸಂಘ,...

18 Jun, 2018

ಹಾಸನ
ದುದ್ದ ಹೋಬಳಿ ಕೆರೆಗಳಿಗೆ ನೀರು ತುಂಬಿಸಿ

ಹಾಸನ ತಾಲ್ಲೂಕಿನ ದುದ್ದ ಹೋಬಳಿ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ಕಾಚೇನಹಳ್ಳಿ, ಯಗಚಿ, ಹೇಮಾವತಿ ಹಾಗೂ ಎತ್ತಿನಹೊಳೆ ಮೂಲಗಳಿಂದ ನೀರು ತುಂಬಿಸಬೇಕು ಎಂದು ದುದ್ದ ಹೋಬಳಿ...

17 Jun, 2018