ಹಾವೇರಿ

ಜಾನುವಾರು ರಕ್ಷಣೆಗೆ ಎಪಿಎಂಸಿ ಬದ್ಧ

‘ಜಾನುವಾರು ಮಾರುಕಟ್ಟೆ ನಿರ್ವಹಣೆಗೆ ಪ್ರತಿವರ್ಷ ₹ 6 ಲಕ್ಷ ವೆಚ್ಚವಾಗುತ್ತಿದೆ. ಆದರೆ ಆದಾಯ ಕಡಿಮೆ ಇದೆ

ಹಾವೇರಿ: ‘ಜಾನುವಾರುಗಳು ಕೃಷಿ ಬದುಕಿನ ಭಾಗವಾಗಿದ್ದು, ಅವುಗಳ ಪೋಷಣೆ ಹಾಗೂ ನಿರ್ವಹಣೆ ಕುರಿತು ರೈತರಿಗೆ ಸಂಪೂರ್ಣ ನೆರವು ನೀಡಲು ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬದ್ಧವಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ನಗರದ ಹುಕ್ಕೇರಿಮಠದ ನಮ್ಮೂರ ಜಾತ್ರೆ ಅಂಗವಾಗಿ ನಗರದ ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ನಡೆದ ಜಾನುವಾರು ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಜಾನುವಾರು ಮಾರುಕಟ್ಟೆಯಲ್ಲಿ ಶೆಡ್‌ಗಳನ್ನು ಹಾಗೂ ಮೇವಿನ ರಕ್ಷಣೆಗಾಗಿ ಘಟಕ ನಿರ್ಮಿಸುವ ನಿರ್ಧಾರ ಕೈಗೊಂಡಿದೆ’ ಎಂದರು.

‘ಜಾನುವಾರು ಮಾರುಕಟ್ಟೆ ನಿರ್ವಹಣೆಗೆ ಪ್ರತಿವರ್ಷ ₹ 6 ಲಕ್ಷ ವೆಚ್ಚವಾಗುತ್ತಿದೆ. ಆದರೆ ಆದಾಯ ಕಡಿಮೆ ಇದೆ. ಅದಕ್ಕಾಗಿ ಮಾರುಕಟ್ಟೆ ಮಂದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ರಸ್ತೆ ಮತ್ತು ಚರಂಡಿ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ’ ಎಂದರು. ಉದ್ಯಮಿ ಪಿ.ಡಿ ಶಿರೂರ ಮಾತನಾಡಿ, ಸರ್ಕಾರವು ಗೋಶಾಲೆ ತೆರೆಯಲು ಅಗತ್ಯ ಅನುದಾನವನ್ನು ಒದಗಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ರೈತರು ಕೃಷಿ ಕೆಲಸಕ್ಕೆ ಯಂತ್ರೋಪಕರಣಗಳನ್ನು ಹೆಚ್ಚು ಬಳಸುತ್ತಿದ್ದು, ಮನೆಯಲ್ಲಿ ಜಾನುವಾರುಗಳನ್ನು ಸಾಕುವುದು ಕಡಿಮೆಯಾಗಿದೆ. ಆದರೆ, ಜಾನುವಾರುಗಳ ಗೊಬ್ಬರವು ಉತ್ಕೃಷ್ಟವಾಗಿದ್ದು, ಸಾವಯವ ಕೃಷಿಗೆ ಸಹಾಯಕವಾಗುತ್ತದೆ. ಇದರಿಂದ ಬರುವ ಕೃಷಿ ಉತ್ಪನ್ನಗಳು ಆರೋಗ್ಯದ ದೃಷ್ಟಿಯಿಂದಳು ಉತ್ತಮ’ ಎಂದರು.

ಎಪಿಎಂಸಿ ಉಪಾಧ್ಯಕೆ ವನಜಾಕ್ಷಿ ಬ್ಯಾಳಿ, ಸದಸ್ಯ ರುದ್ರೇಶ ಚಿನ್ನಣ್ಣನವರ, ಮೂಲೆಗದ್ದೆಯ ಸ್ವಾಮೀಜಿ, ಮಾದನಹಿಪ್ಪರಗಿಯ ಶ್ರೀಕಂಠ ದೇವರು, ಎಪಿಎಂಸಿ ಉಪಕಾರ್ಯದರ್ಶಿ ಮನೋಹರ ಬಾರ್ಕಿ. ಶಿವಯೋಗಿ ವಾಲಿಶೆಟ್ಟರ್, ಶಿವಕುಮಾರ ಮುದಗಲ್ಲ, ಪ್ರಭು ಹಿಟ್ನಳ್ಳಿ, ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

ಹಾವೇರಿ
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

21 Apr, 2018

ಹಾಸನ
ಬಿಜೆಪಿ: 3 ಹೊಸ ಮುಖಗಳಿಗೆ ಅವಕಾಶ

ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಹೊಳೆನರಸೀಪುರ, ಅರಸೀಕೆರೆ, ಶ್ರವಣಬೆಳಗೊಳ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ ಬೇಲೂರು, ಸಕಲೇಶಪುರ ಹಾಗೂ...

21 Apr, 2018

  ಹಾವೇರಿ
ಹಾವೇರಿ ಜಿಲ್ಲೆ: ಆರು ಕ್ಷೇತ್ರಗಳಿಂದ 7 ನಾಮಪತ್ರ

ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

20 Apr, 2018