ಕೊಪ್ಪಳ

ಗವಿಮಠ ಜಾತ್ರೆ ವೈಶಿಷ್ಟ್ಯ ಮಹಾದಾಸೋಹ

ನಿತ್ಯವು ಎರಡು ಸಾವಿರ ಬಡಮಕ್ಕಳಿಗೆ ಉಚಿತ ಪ್ರಸಾದ ನಿಲಯ ಆರಂಭಿಸಿ ದಾಸೋಹ ಪರಂಪರೆ ಹುಟ್ಟುಹಾಕಿದೆ.

ಕೊಪ್ಪಳ: ಗವಿಮಠ ಮಹಾರಥೋತ್ಸವ ಜನವರಿ 3ರಂದು ನಡೆಯಲಿದೆ. ಇದಕ್ಕಾಗಿ ದಿನಗಣನೆ ಶುರುವಾಗಿದೆ. ಜಾತ್ರೆ ವೈಶಿಷ್ಟ್ಯವೇ ಮಹಾದಾಸೋಹ. ಗವಿಮಠವು ಅನ್ನ, ಅಕ್ಷರ, ಅಧ್ಯಾತ್ಮ ಹಾಗೂ ಆರೋಗ್ಯ ದಾಸೋಹ ಗೈಯುತ್ತ ಭಕ್ತರ ಜ್ಞಾನ ಮತ್ತು ಹಸಿವಿನ ಅಂಗಳಕೆ ಕೃಪೆಯಾಗುವ ಕೈಂಕರ್ಯ ಮಾಡುತ್ತಿದೆ.

ನಿತ್ಯವು ಎರಡು ಸಾವಿರ ಬಡಮಕ್ಕಳಿಗೆ ಉಚಿತ ಪ್ರಸಾದ ನಿಲಯ ಆರಂಭಿಸಿ ದಾಸೋಹ ಪರಂಪರೆ ಹುಟ್ಟುಹಾಕಿದೆ. ಇದೇ ರೀತಿ ಪ್ರತಿವರ್ಷವು ಜಾತ್ರೆಯಲ್ಲಿ ರಥೋತ್ಸವದಿಂದ ಹಿಡಿದು ಅಮವಾಸ್ಯೆಯ ವರೆಗೆ ದಿನಾಲು ಲಕ್ಷಾಂತರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಾದ ನಿಲಯದ ವಿಸ್ತೀರ್ಣ ಸುಮಾರು ಎರಡು ಎಕರೆಯಷ್ಟು ಇದ್ದು ಅದರಲ್ಲಿ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ ಹಾಗೂ ಪ್ರಸಾದ ಸ್ವೀಕರಿಸಲು ವಿಶಾಲವಾದ ಸ್ಥಳಾವಕಾಶವಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗಾಗಿ ಜಿಗ್‌ಜಾಗ್ ಮಾದರಿಯಲ್ಲಿ ಪ್ರತ್ಯೇಕ ಸಾಲುಗಳನ್ನು ನಿರ್ಮಿಸಲಾಗಿದೆ. ಭಕ್ತರು ಶಾಂತ ರೀತಿಯಿಂದ ಪ್ರಸಾದ ನಿಲಯಕ್ಕೆ ಬಂದು ಪ್ರಸಾದ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಜಾತ್ರಾಮಹೋತ್ಸವ ಸಂದರ್ಭದಲ್ಲಿ ಒಂದು ದಿನಕ್ಕೆ ಪ್ರಸಾದ ತಯಾರಿಸುವವರು 300 ರಿಂದ 400ರ ವರೆಗೆ ಭಕ್ತರು ಸೇವೆಗೈದರೆ, ಪ್ರಸಾದ ವಿತರಣೆಯಲ್ಲಿ 500ರಿಂದ 600 ಭಕ್ತರು ಪಾಲ್ಗೊಳ್ಳುವರು. ಜಾತ್ರಾಮಹೋತ್ಸವ ಆರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು. ಜಾತ್ರೆಯ ಆರಂಭದಿಂದ ಮುಕ್ತಾಯದ ವರೆಗೆ ಸುಮಾರು 15 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ಎಂದರು.

ಪ್ರಸಾದ ನಿಲಯದಲ್ಲಿ ಆರಂಭದಿಂದ ಮುಕ್ತಾಯದ ವರೆಗೆ ಖರ್ಚಾಗುವ ಸಾಮಾಗ್ರಿಗಳ ವಿವರಣೆ ಈ ಕೆಳಗಿನಂತಿದೆ. ರೊಟ್ಟಿ ಸುಮಾರು 14ರಿಂದ 15 ಲಕ್ಷ, ಅಕ್ಕಿ 600 ಕ್ವಿಂಟಾಲ್, ಸಿಹಿ ಪದಾರ್ಥಗಳು 700 ಕ್ವಿಂಟಾಲ್, ತರಕಾರಿ 200 ಕ್ವಿಂಟಾಲ್ ತರಕಾರಿ, ದ್ವಿದಳ ಧಾನ್ಯಗಳು 250 ಕ್ವಿಂಟಾಲ್, ಹಾಲು 10 ಸಾವಿರ ಲೀಟರ್, ತುಪ್ಪ ಒಂದು ಸಾವಿರ ಲೀಟರ್, ಉಪ್ಪಿನಕಾಯಿ 5000 ಕೆ.ಜಿ ಹಾಗೂ ಪುಠಾಣಿ ಚಟ್ನಿ 15 ಕ್ವಿಂಟಾಲ್ ಹೀಗೆ ಇಷ್ಟೊಂದು ಭಾರಿ ಪ್ರಮಾಣದ ಸಿದ್ಧತೆಯೊಂದಿಗೆ ಮಹಾಪ್ರಸಾದ ನಿಲಯವು ಭಕ್ತರ ಹಸಿವನ್ನು ನೀಗಿಸಬಲ್ಲದು.

ಈ ಪ್ರಸಾದವನ್ನು ಸಿದ್ಧಗೊಳಿಸಲು ಸುಮಾರು 100 ಗಾಡಿ ಕಟ್ಟಿಗೆ (500 ಟನ್) ಬಳಸಲಾಗುತ್ತದೆ. ಇದೆಲ್ಲ ಭಕ್ತರ ಭಕ್ತಿ ಶ್ರದ್ಧೆ ಹಾಗೂ ಸ್ವಯಂ ಪ್ರೇರಣೆಗಳಿಂದ ನಡೆಯುತ್ತಿರುವುದು ಗವಿಮಠದ ಜಾತ್ರೆಯ ವೈಶಿಷ್ಟ್ಯತೆ. ಹೆಚ್ಚಿನ ಮಾಹಿತಿಗೆ ರಾಮನಗೌಡ್ರ ಮೊ. 93413 60548, ಪ್ರಕಾಶ ಚಿನಿವಾಲರ ಮೊ. 94481 20610, ರಾಜು ಶೆಟ್ಟರ್ ಮೊ. 98454 29944 ಸಂಪರ್ಕಿಸಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಬರಕ್ಕೆ ಸೆಡ್ಡು ಹೊಡೆದು ರೇಷ್ಮೆ ಕೃಷಿ

ತಾವರಗೇರಾ
ಬರಕ್ಕೆ ಸೆಡ್ಡು ಹೊಡೆದು ರೇಷ್ಮೆ ಕೃಷಿ

19 Mar, 2018
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

ಕುಷ್ಟಗಿ
ರಾಜ್ಯದಲ್ಲಿ ಕಾಂಗ್ರೆಸ್‌ ತಲೆ ಎತ್ತದಂತೆ ಮಾಡಿ: ಬಂಡಾರು ದತ್ತಾತ್ರೇಯ ಹೇಳಿಕೆ

17 Mar, 2018
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ
ವಿವಿಧ ಮಹನೀಯರ ಜಯಂತಿ ಆಚರಣೆಗೆ ನಿರ್ಧಾರ

17 Mar, 2018

ಲಿಂಗಸುಗೂರು
‘ಸಾಹಿತ್ಯಕ್ಕೆ ದಲಿತ ವಚನಕಾರರ ಕೊಡುಗೆ ಅಪಾರ’

‘ಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹ ಅಪಾರ’ ಎಂದು ಉಪ ವಿಭಾಗಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.

17 Mar, 2018

ಮಸ್ಕಿ
ಹೆದ್ದಾರಿ ತಡೆ: ತಹಶೀಲ್ದಾರ್‌ಗೆ ಮನವಿ

ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ 5 (ಎ) ಕಾಲುವೆ ಹೋರಾಟ...

17 Mar, 2018