ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಅವರಿಂದ ಆರ್ಥಿಕ ನಿರ್ವಹಣೆ ಪಾಠ ಕಲಿಯಬೇಕಿಲ್ಲ: ಸಿಎಂ ಸಿದ್ದರಾಮಯ್ಯ

Last Updated 26 ಡಿಸೆಂಬರ್ 2017, 10:12 IST
ಅಕ್ಷರ ಗಾತ್ರ

ದಾವಣಗೆರೆ: ‘ಆರ್ಥಿಕ ನಿರ್ವಹಣೆ ಕುರಿತು ಯಡಿಯೂರಪ್ಪರಿಂದ ಪಾಠ ಕಲಿಯಬೇಕಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಜಿಲ್ಲೆಯ ಹೊನ್ನಾಳಿಯಲ್ಲಿ ಮಂಗಳವಾರ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದರು.

‘ಯಡಿಯೂರಪ್ಪಗೆ ಹಣಕಾಸು ವ್ಯವಹಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ನಾವು 2012ರಲ್ಲಿ ಪಿಸ್ಕಲ್ ರೆಸ್ಪಾನ್ಸಿಬಿಲಿಟಿ ಆಕ್ಟ್ ಜಾರಿಗೆ ತಂದಿದ್ದೇವೆ. ಆರ್ಥಿಕ ಸುಸ್ಥಿತಿ ಬಗ್ಗೆ ಮಾನದಂಡ ನಿಗಧಿ ಆಗಿದೆ. ಆದಾಯ ಹೆಚ್ಚಿರಬೇಕು, ಜಿಡಿಪಿ ಶೇ 25 ಇರಬೇಕು, ವಿತ್ತೀಯ ಕೊರತೆ ಶೇ 3 ದಾಟಬಾರದು. ಯಡಿಯೂರಪ್ಪ ಇದನ್ನು ಓದಿಕೊಂಡಿಲ್ಲ’ ಎಂದು ಟೀಕಿಸಿದರು.

‘ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ. ರಾಜ್ಯಕ್ಕೆ ಎರಡು ತಿಂಗಳ ಹಿಂದೆ ಬಂದಿದ್ದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್, ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ, ನಮಗೆ ಯಡಿಯೂರಪ್ಪನ ಸರ್ಟಿಫಿಕೇಟ್ ಬೇಕಿಲ್ಲ’ ಎಂದರು.

‘ಬಜೆಟ್‌ನ ಉದ್ದೇಶವೇ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವುದಾಗಿದೆ. ಇದರಲ್ಲಿ ದಲಿತ ಬಜೆಟ್, ಹಿಂದುಳಿದ ಬಜೆಟ್, ಯುವಕ ಯುವತಿ, ರೈತ ಬಜೆಟ್ ಅಂತ ಇರುವುದಿಲ್ಲ. ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ಕೃಷಿ ಬಜೆಟ್ ಮಂಡಿಸಿದರು. ಯಾವ ಕಾರ್ಯ ಕ್ರಮಗಳನ್ನು ಕೊಡಲಿಲ್ಲ. ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದರು’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT