ಡಿಜಿಟಲ್‌ ಭಾರತ

ಆಪ್ಟಿಕ್‌ ಫೈಬರ್‌: ಸಿಟಾಡೆಲ್‌ ಎಎಫ್‌ಎಲ್‌ ಸಹಯೋಗ

ಫೈಬರ್‌ ಆಪ್ಟಿಕ್‌ ಕೇಬಲ್‌, ಹಾರ್ಡ್‌ವೇರ್‌ ಮತ್ತು ಬಿಡಿಭಾಗ ತಯಾರಿಸುವ ಜಪಾನಿನ ಫುಜಿಕುರಾದ ಅಂಗಸಂಸ್ಥೆಯಾಗಿರುವ ಎಎಫ್‌ಎಲ್‌, ಆಪ್ಟಿಕ್‌ ಫೈಬರ್‌ ಸೇವೆ ಒದಗಿಸುವ ಬೆಂಗಳೂರಿನ ಸ್ಟಾರ್ಟ್‌ಅಪ್‌, ಸಿಟಾಡೆಲ್‌ ಇಂಟೆಲಿಜೆಂಟ್‌ ಸಿಸ್ಟಮ್ಸ್‌ನ ಸಹಯೋಗದಲ್ಲಿ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ.

ಸಿಟಾಡೆಲ್‌ ಇಂಟೆಲಿಜೆಂಟ್‌ ಸಿಸ್ಟಮ್ಸ್‌ನ ಸಿಇಒ ಕೆ.ಕೆ. ಶೆಟ್ಟಿ ಮತ್ತು ಎಎಫ್‌ಎಲ್‌ನ ಸಿಇಒ ಜೋಡಿ ಗ್ಯಾಲಗ್ಹರ್‌

ಡಿಜಿಟಲ್‌ ಕ್ಷೇತ್ರದಲ್ಲಿ ಭಾರತ ದಾಪುಗಾಲು ಹಾಕುತ್ತಿದೆ. ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌, ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ರಂಗದಲ್ಲಿ ಹೆಚ್ಚುತ್ತಿರುವ ಬಂಡವಾಳ ಹೂಡಿಕೆ, ಡಿಜಿಟಲ್‌ ಭಾರತ, ಭಾರತದಲ್ಲಿಯೇ ತಯಾರಿಸಿ ಮತ್ತು ಸ್ಮಾರ್ಟ್‌ ಸಿಟಿ ನಿರ್ಮಾಣ ಯೋಜನೆಗಳು ಮತ್ತು ಮೊಬೈಲ್ ಬಳಕೆ ಹೆಚ್ಚಳದ ಕಾರಣಕ್ಕೆ ಫೈಬರ್‌ ಆಪ್ಟಿಕ್‌ ಸಂವಹನ ಉತ್ಪನ್ನ ಮತ್ತು ಸೇವೆಗಳಿಗೆ ವ್ಯಾಪಕ ಬೇಡಿಕೆ ಕಂಡು ಬರುತ್ತಿದೆ.

ಫೈಬರ್‌ ಆಪ್ಟಿಕ್‌ ಕೇಬಲ್‌, ಹಾರ್ಡ್‌ವೇರ್‌ ಮತ್ತು ಬಿಡಿಭಾಗ ತಯಾರಿಸುವ ಜಪಾನಿನ ಫುಜಿಕುರಾದ ಅಂಗಸಂಸ್ಥೆಯಾಗಿರುವ ಎಎಫ್‌ಎಲ್‌, ಆಪ್ಟಿಕ್‌ ಫೈಬರ್‌ ಸೇವೆ ಒದಗಿಸುವ ಬೆಂಗಳೂರಿನ ಸ್ಟಾರ್ಟ್‌ಅಪ್‌, ಸಿಟಾಡೆಲ್‌ ಇಂಟೆಲಿಜೆಂಟ್‌ ಸಿಸ್ಟಮ್ಸ್‌ನ ಸಹಯೋಗದಲ್ಲಿ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ. ₹ 45,500 ಕೋಟಿ ವಹಿವಾಟಿನ ಎಎಫ್‌ಎಲ್‌, 30 ವರ್ಷಗಳಿಂದ ಯುರೋಪ್‌, ಉತ್ತರ ಅಮೆರಿಕದಲ್ಲಿ ಉದ್ಯಮ, ದೂರಸಂಪರ್ಕ ಮತ್ತು ಇಂಧನ ಕ್ಷೇತ್ರದಲ್ಲಿ ಆಪ್ಟಿಕ್‌ ಫೈಬರ್‌ ಸೇವೆ ಒದಗಿಸುತ್ತಿದೆ. ಫೈಬರ್‌ ಆಪ್ಟಿಕ್‌ ಸಲಕರಣೆಗಳ ವಹಿವಾಟಿನಲ್ಲಿ ವಿಶ್ವದ ಮುಂಚೂಣಿ ಮೂರು ಸಂಸ್ಥೆಗಳಲ್ಲಿ ಒಂದಾಗಿದೆ. ತನ್ನ ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುತ್ತಿದೆ.
ಈ ಸಹಯೋಗವು ಈ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿರಲು ಎರಡೂ ಸಂಸ್ಥೆಗಳಿಗೆ ನೆರವಾಗಲಿದೆ. ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳನ್ನೂ ಒದಗಿಸಿ ಕೊಡಲಿದೆ. ಭಾರತದಲ್ಲಿ ವಹಿವಾಟು ನಡೆಸುವ ತನ್ನ ಜಾಗತಿಕ ಗ್ರಾಹಕ ಸಂಸ್ಥೆಗಳ ಅಗತ್ಯಗಳನ್ನು ಸ್ಥಳೀಯವಾಗಿ ಪೂರೈಸಲೂ ಎಎಫ್‌ಎಲ್‌ಗೆ ಇದರಿಂದ ಸಾಧ್ಯವಾಗಲಿದೆ.

ಕೆ. ಕೆ. ಶೆಟ್ಟಿ ಅವರು ಸ್ಥಾಪಿಸಿರುವ ಸ್ಟಾರ್ಟ್‌ಅಪ್ ಸಿಟಾಡೆಲ್‌, ಎಎಫ್‌ಎಲ್‌ಗೆ ತಯಾರಿಕಾ ಘಟಕ, ಮಾರಾಟ ಮತ್ತು ಮಾರುಕಟ್ಟೆ ಬೆಂಬಲ ಒದಗಿಸಲಿದೆ. ಸಿಟಾಡೆಲ್‌, ಎಎಫ್‌ಎಲ್‌ನಿಂದ ಎಂಜಿನಿಯರಿಂಗ ಜ್ಞಾನ, ಹೊಸ ಉತ್ಪನ್ನ ಮತ್ತಿತರ ರೂಪದಲ್ಲಿ ಬೆಂಬಲ ಪಡೆಯಲಿದೆ.
ಒಪ್ಪಂದದ ಅನ್ವಯ, ಸಿಟಾಡೆಲ್‌ ಬೆಂಗಳೂರಿನ ಹೊರ ವಲಯದ ಹೂಡಿಯಲ್ಲಿ ಅತ್ಯಾಧುನಿಕ ತಯಾರಿಕಾ ಘಟಕ ಆರಂಭಿಸಿದೆ. ಇಲ್ಲಿ ಜಾಗತಿಕ ಗುಣಮಟ್ಟದ ತಯಾರಿಕಾ ಸಲಕರಣೆಗಳು, ಪರಿಣತ ತಂತ್ರಜ್ಞರು ಮತ್ತು ಅನುಭವಿ ಸಿಬ್ಬಂದಿ ಲಭ್ಯ ಇರಲಿದ್ದಾರೆ.
ಆಪ್ಟಿಕ್‌ ಫೈಬರ್ ಉತ್ಪನ್ನಗಳನ್ನು ಭಾರತದಲ್ಲಿಯೇ ತಯಾರಿಸುವುದರಿಂದ ಎಎಫ್‌ಎಲ್‌ನ ಜಾಗತಿಕ ಗ್ರಾಹಕರ ಭಾರತದಲ್ಲಿನ ಅಂಗಸಂಸ್ಥೆಗಳ ಅಗತ್ಯಗಳನ್ನೆಲ್ಲ ಪೂರೈಸಲೂ ಸಾಧ್ಯವಾಗಲಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಗತ್ಯಗಳನ್ನೆಲ್ಲ ಈಡೇರಿಸಲು ಈ ಒಪ್ಪಂದ ನೆರವಾಗಲಿದೆ.

ಭಾರತದಲ್ಲಿ 5 ವರ್ಷಗಳಿಂದ ಸೇವೆ ಒದಗಿಸುತ್ತಿದ್ದ ಎಎಫ್‌ಎಲ್‌, ಇಲ್ಲಿಯ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸಲು ಭಾಗಿದಾರ ಸಂಸ್ಥೆಯ ಹುಡುಕಾಟದಲ್ಲಿತ್ತು. . ಆಪ್ಟಿಕಲ್‌ ಮೂಲ ಸೌಕರ್ಯ ಒದಗಿಸುವ ಸಂಸ್ಥೆಯಾಗಿರುವ ಸಿಟಾಡೆಲ್‌ ಅದರ ಅಗತ್ಯ ಪೂರೈಸಿತ್ತು.
ಅಂತಿಮವಾಗಿ ಅದು ಕನ್ನಡಿಗರೊಬ್ಬರು ಸ್ಥಾಪಿಸಿರುವ ಸ್ಟಾರ್ಟ್‌ಅಪ್ ಸಿಟಾಡೆಲ್‌ ಆಯ್ಕೆ ಮಾಡಿಕೊಂಡಿದೆ. ‘ಬೆಂಗಳೂರಿನ ಸ್ಟಾರ್ಟ್‌ಅಪ್‌ ಸಿಟಾಡೆಲ್‌ ತನ್ನ ವಹಿವಾಟಿಗೆ ಸೂಕ್ತ ಪಾಲುದಾರ ಎನ್ನುವ ತೀರ್ಮಾನಕ್ಕೆ ಎಎಫ್‌ಎಲ್‌ ಬಂದಿದೆ. ಈ ಪಾಲುದಾರಿಕೆಯು ಎರಡೂ ಸಂಸ್ಥೆಗಳಿಗೆ ಪ್ರಯೋಜನ ತರಲಿದೆ’ ಎಂದು ಎಎಫ್‌ಎಲ್‌ನ ಸಿಇಒ ಜೋಡಿ ಗ್ಯಾಲಗ್ಹರ್‌ ಹೇಳುತ್ತಾರೆ.

‘ತಯಾರಿಕಾ ಘಟಕದ ಸ್ಥಾಪನೆಗೆ ₹ 6.50 ಕೋಟಿ ಹೂಡಿಕೆ ಮಾಡಲಾಗಿದೆ. ಸದ್ಯಕ್ಕೆ 50 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅದನ್ನು 400ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಹೂಡಿಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಘಟಕವು, ಸ್ಥಳೀಯ ಅಗತ್ಯದ ಜತೆಗೆ ರಫ್ತು ಬೇಡಿಕೆಯನ್ನೂ ಈಡೇರಿಸಲಿದೆ. ದೇಶಿ ಅಗತ್ಯ ಪೂರೈಸಲು ಆದ್ಯತೆ ನೀಡಲಾಗುವುದು. ಈ ಘಟಕದಲ್ಲಿ ಉಡುಪಿ, ಮಂಗಳೂರು, ಕಲಬುರ್ಗಿ ಕಡೆಯ ಸಿಬ್ಬಂದಿ ನೇಮಕಕ್ಕೆ ಒತ್ತು ನೀಡಲಾಗುವುದು. ಪ್ರತಿಭಾನ್ವಿತರನ್ನು ಹೊಸದಾಗಿ ನೇಮಿಸಿಕೊಂಡು ತರಬೇತಿ ನೀಡಿ ಸಿದ್ಧಪಡಿಸಲಾಗುತ್ತಿದೆ’ ಎಂದು ಶೆಟ್ಟಿ ಅವರು ಹೇಳುತ್ತಾರೆ.

‘ಮೊದಲ ವರ್ಷ ₹ 25 ಕೋಟಿ ಮತ್ತು ಮುಂದಿನ 5 ವರ್ಷಗಳಲ್ಲಿ ₹ 250 ಕೋಟಿ ವಹಿವಾಟು ನಡೆಸುವ ಗುರಿ ಹಾಕಿಕೊಳ್ಳಲಾಗಿದೆ. ಆಪ್ಟಿಕಲ್‌ ಫೈಬರ್‌ನ ಜಾಗತಿಕ ಮಾರುಕಟ್ಟೆಯು 2020ರ ವೇಳೆಗೆ ₹ 16,250 ಕೋಟಿಗಳಿಗೆ ತಲುಪುವ ನಿರೀಕ್ಷೆ ಇದೆ. ಜಾಗತಿಕ ವಹಿವಾಟಿಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ಶೇ 10ಕ್ಕಿಂತ ಕಡಿಮೆ ಇದೆ. ಹೀಗಾಗಿ ಸ್ಥಳೀಯವಾಗಿ ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳಿವೆ.

‘ಭಾರತದಲ್ಲಿ ದತ್ತಾಂಶ ಸಂಗ್ರಹವು ಚೀನಾಕ್ಕಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಆಪ್ಟಿಕ್‌ ಫೈಬರ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯು ಗಮನಾರ್ಹವಾಗಿ ಹೆಚ್ಚುತ್ತಿದೆ. ಸದ್ಯಕ್ಕೆ ಭಾರತ ನಮಗೆ ಸಣ್ಣ ಮಾರುಕಟ್ಟೆಯಾಗಿದ್ದರೂ ಇಲ್ಲಿ ಬೆಳವಣಿಗೆಗೆ ಅಪಾರ ಅವಕಾಶಗಳು ಇವೆ.
‘ಎರಡೂ ಸಂಸ್ಥೆಗಳೂ ದೀರ್ಘಾವಧಿ ಒಪ್ಪಂದಕ್ಕೆ ಬಂದಿವೆ. ನಮಗೆ ಸ್ಥಳೀಯ ಮಾರುಕಟ್ಟೆಯ ನಾಡಿಮಿಡಿತ ಗೊತ್ತಿದೆ. ಎಎಫ್‌ಎಲ್‌ಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇದೆ. ಅವೆರಡೂ ಸೇರಿಕೊಂಡು ಇಬ್ಬರಿಗೂ ಪ್ರಯೋಜನ ಆಗಲಿದೆ. ಎಂಜಿನಿಯರಿಂಗ್‌, ಉತ್ಪನ್ನ ಅಭಿವೃದ್ಧಿ, ಮಾರುಕಟ್ಟೆ ವಿಸ್ತರಣೆಯಲ್ಲಿ ಈ ಸಹಯೋಗ ನೆರವಿಗೆ ಬರಲಿದೆ’ ಎಂದು ಶೆಟ್ಟಿ ಹೇಳುತ್ತಾರೆ.

‘ಸಣ್ಣ, ಸಣ್ಣ ಸಂಸ್ಥೆಗಳು ಸಾಫ್ಟ್‌ವೇರ್‌ ಬಾಡಿಗೆ ಸೌಲಭ್ಯದ ಕ್ಲೌಡ್‌ ತಂತ್ರಜ್ಞಾನಕ್ಕೆ ವರ್ಗಾವಣೆಗೊಳ್ಳುತ್ತಿವೆ. ಭಾರಿ ಪ್ರಮಾಣದಲ್ಲಿ ದತ್ತಾಂಶ ಸಂಗ್ರಹ ಮತ್ತು ನಿರ್ವಹಣೆಯ ಅಗತ್ಯ ಹೆಚ್ಚಿದೆ. ಗ್ರಾಮ ಪಂಚಾಯ್ತಿಗಳಿಗೆ ಡಿಜಿಟಲ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಹಣಕಾಸು, ಬ್ಯಾಂಕಿಂಗ್‌ ವಹಿವಾಟಿಗೆ ದತ್ತಾಂಶ ಕೇಂದ್ರಗಳ ಅಗತ್ಯ ಹೆಚ್ಚುತ್ತಿದೆ. ಗಣನೀಯ ಪ್ರಮಾಣದಲ್ಲಿ ಡಿಜಿಟಲ್‌ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಟಾಡೆಲ್‌ ಮತ್ತು ಎಎಫ್‌ಎಲ್‌, ಡಿಜಿಟಲ್‌ ಜಗತ್ತಿನ ಮೂಲ ಸೌಕರ್ಯ ಒದಗಿಸಲು ಕೈಜೋಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ’ ಎಂದು ಶೆಟ್ಟಿ ಹೇಳುತ್ತಾರೆ.

ಡೆಲ್‌, ಟೈಕೊ ಎಲೆಕ್ಟ್ರಾನಿಕ್ಸ್‌ನಲ್ಲಿ ಕೆಲಸ ಮಾಡಿದ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಶೆಟ್ಟಿ ಅವರು ಸಿಟಾಡೆಲ್‌ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ. ಆನಂತರ ಅನೇಕರು ಇವರ ಜತೆ ಕೈಜೋಡಿಸಿದ್ದರು. ಈಗ ಎಎಫ್‌ಎಲ್‌ನ ಸಹಯೋಗದಲ್ಲಿ ಈ ನವೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಶೆಟ್ಟಿ ಅವರು ಮುಂದಾಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ವಾಣಿಜ್ಯ
ಬದಲಾವಣೆ ಹಾದಿಯಲ್ಲಿ ಜಿಎಸ್‌ಟಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಆರು ತಿಂಗಳು ಪೂರ್ಣಗೊಂಡಿದ್ದು, ಹಲವು ಏರಿಳಿತಗಳ ಹೊರತಾಗಿಯೂ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು ನಿಧಾನವಾಗಿ...

17 Jan, 2018
50ನೇ ವರ್ಷಕ್ಕೆ ನಿವೃತ್ತಿ ಯೋಜನೆ

ವಾಣಿಜ್ಯ
50ನೇ ವರ್ಷಕ್ಕೆ ನಿವೃತ್ತಿ ಯೋಜನೆ

17 Jan, 2018
ಈಗ ಸ್ಮಾರ್ಟ್‌ಹೋಂ ಸಮಯ

ವಾಣಿಜ್ಯ
ಈಗ ಸ್ಮಾರ್ಟ್‌ಹೋಂ ಸಮಯ

17 Jan, 2018
ವೈರ್‌ಲೆಸ್‌ ಮೊಬೈಲ್ ಚಾರ್ಜರ್

ವಾಣಿಜ್ಯ
ವೈರ್‌ಲೆಸ್‌ ಮೊಬೈಲ್ ಚಾರ್ಜರ್

17 Jan, 2018
ಬರಲಿವೆ ಅದ್ಭುತ ತಂತ್ರಜ್ಞಾನಗಳು

ವಾಣಿಜ್ಯ
ಬರಲಿವೆ ಅದ್ಭುತ ತಂತ್ರಜ್ಞಾನಗಳು

17 Jan, 2018