ಸಿನಿಮಾ

‘ವಿಕ್ರಂ ವೇದ’ ನಂಬರ್‌ 1 ಚಿತ್ರ

2017ರ ‘ಟಾಪ್‌ 10’ ಭಾರತೀಯ ಸಿನಿಮಾಗಳ ಪಟ್ಟಿಯನ್ನು ‘ಇಂಟರ್ನೆಟ್‌ ಡಾಟಾ ಬೇಸ್‌’ (ಐಎಂಡಿಬಿ) ಬಿಡುಗಡೆ ಮಾಡಿದೆ. ಬಾಕ್ಸ್‌ಆಫೀಸ್‌ನಲ್ಲಿ ₹2000 ಕೋಟಿಗಿಂತಲೂ ಅಧಿಕ ಗಳಿಕೆ ಮಾಡಿದ ‘ಬಾಹುಬಲಿ’ಯನ್ನು ‘ವಿಕ್ರಂ ವೇದ’ ಹಿಂದಿಕ್ಕಿರುವುದು ವಿಶೇಷ ಎನಿಸಿದೆ.

‘ವಿಕ್ರಂ ವೇದ’ ನಂಬರ್‌ 1 ಚಿತ್ರ

ಆರ್‌. ಮಾಧವನ್‌ ಹಾಗೂ ವಿಜಯ್‌ ಸೇತುವತಿ ಅಭಿನಯದ ‘ವಿಕ್ರಂ ವೇದ’ ಚಿತ್ರ 2017ರ ಶ್ರೇಷ್ಠ ಚಿತ್ರ!

2017ರ ‘ಟಾಪ್‌ 10’ ಭಾರತೀಯ ಸಿನಿಮಾಗಳ ಪಟ್ಟಿಯನ್ನು ‘ಇಂಟರ್ನೆಟ್‌ ಡಾಟಾ ಬೇಸ್‌’ (ಐಎಂಡಿಬಿ) ಬಿಡುಗಡೆ ಮಾಡಿದೆ. ಬಾಕ್ಸ್‌ಆಫೀಸ್‌ನಲ್ಲಿ ₹2000 ಕೋಟಿಗಿಂತಲೂ ಅಧಿಕ ಗಳಿಕೆ ಮಾಡಿದ ‘ಬಾಹುಬಲಿ’ಯನ್ನು ‘ವಿಕ್ರಂ ವೇದ’ ಹಿಂದಿಕ್ಕಿರುವುದು ವಿಶೇಷ ಎನಿಸಿದೆ.

ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ‘ವಿಕ್ರಂ ವೇದ’, ‘ಬಾಹುಬಲಿ 2’ ಹಾಗೂ ‘ಅರ್ಜುನ್‌ ರೆಡ್ಡಿ’ ಇದೆ. ತಂತ್ರಜ್ಞಾನ ಬಳಕೆ, ಕಥಾವಸ್ತು ಹಾಗೂ ನಿರೂಪಣೆಯ ವೈಶಿಷ್ಟ್ಯದಿಂದಾಗಿ ಈ ಮೂರೂ ಸಿನಿಮಾಗಳು ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆಯ ಜೊತೆಗೆ ಸಾಕಷ್ಟು ಹಣವನ್ನೂ ಗಳಿಸಿದ್ದವು.

ನಂತರದ ಸ್ಥಾನಗಳಲ್ಲಿ ‘ಸೀಕ್ರೆಟ್‌ ಸೂಪರ್‌ ಸ್ಟಾರ್‌’, ‘ಹಿಂದಿ ಮೀಡಿಯಂ’ (ಹಿಂದಿ), ‘ಘಾಜಿ ಅಟ್ಯಾಕ್‌’ (ತೆಲುಗು), ‘ಟಾಯ್ಲೆಟ್‌– ಏಕ್‌ ಪ್ರೇಮ್‌ ಕಥಾ’, ‘ಜಾಲಿ ಎಲ್‌ಎಲ್‌ಬಿ 2’ (ಹಿಂದಿ), ‘ಮರ್ಸೆಲ್‌’ (ತಮಿಲು), ‘ದಿ ಗ್ರೇಟ್‌ ಫಾದರ್‌’ (ಮಲಯಾಳಂ) ಸಿನಿಮಾಗಳಿವೆ.

ಬಾಲಿವುಡ್‌ನ ಬಾದ್‌ಷಾ ಎಂದು ಗುರುತಿಸಿಕೊಳ್ಳುವ ಶಾರುಕ್‌ ಖಾನ್‌ ಹಾಗೂ ಇನ್ನೊಬ್ಬ ಪ್ರಸಿದ್ಧ ನಟ‌ ಸಲ್ಮಾನ್‌ ಖಾನ್‌ ಅಭಿನಯದ ಯಾವ ಚಿತ್ರಗಳೂ ಈ ಪಟ್ಟಿಯಲ್ಲಿ ಇಲ್ಲದಿರುವುದು ವಿಶೇಷ.

Comments
ಈ ವಿಭಾಗದಿಂದ ಇನ್ನಷ್ಟು
ದೀಪಾವಳಿಗೆ ‘ತಲಪತಿ 62’

ಗುಲ್‌ಮೊಹರ್
ದೀಪಾವಳಿಗೆ ‘ತಲಪತಿ 62’

23 Jan, 2018
ಹಿಮ್ಮುಖ ಓಟದಿಂದ  ಎಷ್ಟೊಂದು ಲಾಭ

ಗುಲ್‌ಮೊಹರ್
ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

23 Jan, 2018
ಮನಸಿನಂತೆ ಕನಸು

ಗುಲ್‌ಮೊಹರ್
ಮನಸಿನಂತೆ ಕನಸು

23 Jan, 2018
ಚೆಲುವೆಯ ಸೌಂದರ್ಯ ಗುಟ್ಟು

ಗುಲ್‌ಮೊಹರ್
ಚೆಲುವೆಯ ಸೌಂದರ್ಯ ಗುಟ್ಟು

23 Jan, 2018
ಒರಟು ವ್ಯಕ್ತಿಯ  ಸಂಗೀತ ಶಕ್ತಿ

ಪ್ರೇರಣೆ
ಒರಟು ವ್ಯಕ್ತಿಯ ಸಂಗೀತ ಶಕ್ತಿ

22 Jan, 2018