ನಟಿಯರು

ತಮನ್ನಾ ‘ಟಾಪ್‌ 4’ ಸೆಲೆಬ್ರಿಟಿ

2017ರ ಖ್ಯಾತ 10 ಭಾರತೀಯರ ಸೆಲೆಬ್ರೆಟಿಗಳ ಪಟ್ಟಿಯನ್ನು ಇಂಟರ್ನೆಟ್‌ ಮೂವಿ ಡಾಟಾಬೇಸ್‌(ಐಎಂಡಿಬಿ)ಬಿಡುಗಡೆ ಮಾಡಿದ್ದು, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಮನ್ನಾ ‘ಟಾಪ್‌ 4’ ಸೆಲೆಬ್ರಿಟಿ

ಬಾಲಿವುಡ್‌ ನಟಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ಈ ವರ್ಷ ಹಾಲಿವುಡ್‌ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡು ಸಿನಿಮಾ ಜಗತ್ತಿನಲ್ಲಿ ಭಾರಿ ಮಿಂಚಿದ್ದರು. ಆದರೆ ಅವರು ಭಾರತೀಯ ಸಿನಿ ಪ್ರಿಯರ ಹೃದಯ ಗೆಲ್ಲುವಲ್ಲಿ ವಿಫಲರಾಗಿದ್ದು, ನಟಿಯರಾದ ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಇವರಿಬ್ಬರನ್ನು ಹಿಂದಿಕ್ಕಿದ್ದಾರೆ.

2017ರ ಖ್ಯಾತ 10 ಭಾರತೀಯರ ಸೆಲೆಬ್ರೆಟಿಗಳ ಪಟ್ಟಿಯನ್ನು ಇಂಟರ್ನೆಟ್‌ ಮೂವಿ ಡಾಟಾಬೇಸ್‌(ಐಎಂಡಿಬಿ)ಬಿಡುಗಡೆ ಮಾಡಿದ್ದು, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಾಹುಬಲಿ ಭಾಗ –1 ಹಾಗೂ 2 ರಲ್ಲಿ ದೇವಸೇನಾ ಹಾಗೂ ಆವಂತಿಕಾ ಆಗಿ ಮಿಂಚಿದ್ದ ಅನುಷ್ಕಾ ಹಾಗೂ ತಮನ್ನಾ ಬಾಲಿವುಡ್‌ ನಟಿಯರಿಗೆ ಸರಿಸಮಾನವಾಗಿ ಗುರುತಿಸಿಕೊಂಡಿದ್ದು, ಬಾಲಿವುಡ್‌ ನಟಿಯರಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಪಡೆದಿರುವುದು ಈ ಮೂಲಕ ಸಾಬೀತಾಗಿದೆ.

ವಿಶೆಷವೆಂದರೆ ತಮನ್ನಾ ಭಾಟಿಯಾ 2017ರ ಖ್ಯಾತ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಮೂರನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ ಇದ್ದಾರೆ.  ಆದರೆ ಹಾಲಿವುಡ್‌ ಸಿನಿಮಾದ ಮೂಲಕ ವಿಶ್ವದಲ್ಲೇ ಗುರುತಿಸಿಕೊಂಡರೂ, ದೀಪಿಕಾ ಹಾಗೂ ಪ್ರಿಯಾಂಕಾ ಚೋಪ್ರಾ ಹೆಸರು ಟಾಪ್‌ 10 ಪಟ್ಟಿಯಲ್ಲಿಲ್ಲ. ಈ ಪಟ್ಟಿಯಲ್ಲಿ ಬಾಹುಬಲಿ ಸಿನಿಮಾದ ನಾಯಕ ಪ್ರಭಾಸ್‌ ಹೆಸರೂ ಇದೆ. ಈ ಪಟ್ಟಿಯಲ್ಲಿರುವವರ ಹೆಸರು: ಶಾರುಕ್‌ ಖಾನ್‌, ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌, ತಮನ್ನಾ ಭಾಟಿಯಾ, ಇರ್ಫಾನ್‌ ಖಾನ್‌, ಪ್ರಭಾಸ್‌, ಅನುಷ್ಕಾ ಶರ್ಮಾ, ಅನುಷ್ಕಾ ಶೆಟ್ಟಿ, ಹೃತಿಕ್‌ ರೋಶನ್‌, ಕತ್ರೀನಾ ಕೈಫ್.

Comments
ಈ ವಿಭಾಗದಿಂದ ಇನ್ನಷ್ಟು
ಹಿಮ್ಮುಖ ಓಟದಿಂದ  ಎಷ್ಟೊಂದು ಲಾಭ

ಗುಲ್‌ಮೊಹರ್
ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

23 Jan, 2018
ಮನಸಿನಂತೆ ಕನಸು

ಗುಲ್‌ಮೊಹರ್
ಮನಸಿನಂತೆ ಕನಸು

23 Jan, 2018
ಚೆಲುವೆಯ ಸೌಂದರ್ಯ ಗುಟ್ಟು

ಗುಲ್‌ಮೊಹರ್
ಚೆಲುವೆಯ ಸೌಂದರ್ಯ ಗುಟ್ಟು

23 Jan, 2018
ದೀಪಾವಳಿಗೆ ‘ತಲಪತಿ 62’

ಗುಲ್‌ಮೊಹರ್
ದೀಪಾವಳಿಗೆ ‘ತಲಪತಿ 62’

23 Jan, 2018
ನೆನಪಿನ ಬುತ್ತಿ ‘ಯಾದ ಹೈ’

ಗುಲ್‌ಮೊಹರ್
ನೆನಪಿನ ಬುತ್ತಿ ‘ಯಾದ ಹೈ’

22 Jan, 2018