ಪ್ರತಿಷ್ಠೆ ಬಿಡಬೇಕು

‘ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?’ ಲೇಖನದಲ್ಲಿ ಪಿ.ಪಿ. ಬಾಬುರಾಜ್‌ ಅವರು ತಾವೇ ಶಾಲಾಬ್ಯಾಗ್ ಹೊತ್ತುಕೊಂಡವರ ಹಾಗೆ ಸಂಕಟಪಟ್ಟಿದ್ದಾರೆ. ಅವರಿಗೆ ಗೊತ್ತಿರಲಿಕ್ಕಿಲ್ಲ, ಮಕ್ಕಳಲ್ಲಿ ಬಹುತೇಕರು ಸ್ಕೂಲ್ ಬ್ಯಾಗ್ ಹೊರುವುದಿಲ್ಲ ಎಂಬುದನ್ನು.

‘ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?’ ಲೇಖನದಲ್ಲಿ ಪಿ.ಪಿ. ಬಾಬುರಾಜ್‌ ಅವರು ತಾವೇ ಶಾಲಾಬ್ಯಾಗ್ ಹೊತ್ತುಕೊಂಡವರ ಹಾಗೆ ಸಂಕಟಪಟ್ಟಿದ್ದಾರೆ (ಪ್ರ.ವಾ., ಸಂಗತ, ಡಿ. 26). ಅವರಿಗೆ ಗೊತ್ತಿರಲಿಕ್ಕಿಲ್ಲ, ಮಕ್ಕಳಲ್ಲಿ ಬಹುತೇಕರು ಸ್ಕೂಲ್ ಬ್ಯಾಗ್ ಹೊರುವುದಿಲ್ಲ ಎಂಬುದನ್ನು.

ಶಾಲಾಬ್ಯಾಗ್‌ ಹೊರುವುದು ಶಾಲೆಯ ವಾಹನ. ಅದಿಲ್ಲದಿದ್ದರೆ, ತುಂಬಿತುಳುಕುವ ಮಾರುತಿ ಓಮ್ನಿ, ಪುಷ್ಪಕ ವಿಮಾನದಂತಹ ಆಟೊರಿಕ್ಷಾ, ಅಮ್ಮನ ಸ್ಕೂಟಿ, ಅಪ್ಪನ ಬೈಕ್‌, ಅಜ್ಜನ ಕಾರು... ಇವುಗಳು ಬ್ಯಾಗನ್ನು ಹೊರುತ್ತವೆ.

ಇವು ಯಾವೂ ಇಲ್ಲದೇ ಇದ್ದಾಗ ಅಮ್ಮನೇ ಇವೆಲ್ಲವೂ ಆಗಿ ಬ್ಯಾಗ್ ಹೊರುತ್ತಾಳೆ. ಮಗನೋ ಮಗಳೋ ಕೈ ಬೀಸಿಕೊಂಡು ಕುಣಿ ಕುಣಿದು ಆಟಾ ಆಡುತ್ತಾ ಹೋಗುತ್ತಿರುತ್ತಾರೆ. ಸಂಜೆ ಟ್ಯೂಷನ್‌ಗೂ ತಂದೆ, ತಾಯಿಯೇ ವಾಹನ.

ಮಗುವಿನ ಬ್ಯಾಗು ದೊಡ್ಡದಾದಷ್ಟೂ ಶಾಲೆಯ ಪ್ರತಿಷ್ಠೆ ಹೆಚ್ಚಾಗುತ್ತದೆ. ನಮ್ಮ ಪ್ರತಿಷ್ಠೆಯನ್ನು ಬಿಟ್ಟು ಮಕ್ಕಳನ್ನು ಸನಿಹದ ಸರ್ಕಾರಿ ಶಾಲೆಗೆ ಹಾಕಿದರೆ ಬ್ಯಾಗ್‌ನ ಭಾರ ಕಡಿಮೆಯಾಗದಿದ್ದರೂ ಬ್ಯಾಗನ್ನು ಹೊರುವ ದೂರವಾದರೂ ಕಡಿಮೆಯಾಗಬಹುದು.

ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷನ್ನು ಪ್ರಾಮಾಣಿಕವಾಗಿ, ಯೋಗ್ಯ ರೀತಿಯಿಂದ ಕಲಿಸುವುದರಿಂದ ಮಾತ್ರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಬಹುದಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ವಚನ ತಳಹದಿ

ವಚನ: ಹೊಸ ಧರ್ಮದ ತಳಹದಿ?!’ (ಸಂಗತ, ಮಾ. 22) ಲೇಖನಕ್ಕೆ ಈ ಪ್ರತಿಕ್ರಿಯೆ. ಲಿಂಗಾಯತ ಒಂದು ಹೊಸ ‘ಧರ್ಮ’ ಅಲ್ಲ. ಯಾವುದಾದರೂ ಒಂದು ಧರ್ಮವನ್ನು...

23 Mar, 2018

ವಾಚಕರವಾಣಿ
ಮರೆವು ಮದ್ದಲ್ಲ

‘ಇತಿಹಾಸವನ್ನು ಮರೆತು ಮುನ್ನಡೆಯೋಣ’ (ವಾ.ವಾ.,ಮಾ.21) ಎಂಬ ಸಲಹೆಯನ್ನು ಗಿರೀಶ್ ವಿ. ವಾಘ್ ನೀಡಿದ್ದಾರೆ. ಅದನ್ನು ಸಮರ್ಥಿಸಲು ಫ್ರೆಂಚ್ ವಿದ್ವಾಂಸ ಅರ್ನೆಸ್ಟ್ ರೆನಾನ್, ದೆಹಲಿಯ ದಿವಂಕರ್...

23 Mar, 2018

ವಾಚಕರವಾಣಿ
ಕ್ರೀಡಾಸ್ಫೂರ್ತಿ ಇರಲಿ

ಇತ್ತೀಚೆಗೆ ಬಾಂಗ್ಲಾದೇಶದ ಕ್ರಿಕೆಟ್‌ ತಂಡದ ವಿರುದ್ಧ ರೋಚಕವಾಗಿ ಗೆದ್ದು ಭಾರತೀಯ ತಂಡ ‘ನಿದಾಸ್‌ ಕಪ್‌’ ಜಯಿಸಿತು. ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು...

23 Mar, 2018

ವಾಚಕರವಾಣಿ
ಮರೆಯೋಣ ಎಂಬುದು...

ಇತಿಹಾಸದಲ್ಲಿ ನಾನಾ ವಿಧವಾದ ದುರ್ಘಟನೆಗಳು ನಡೆದುಹೋಗಿವೆ. ಬೇರೊಂದು ರೂಪದಲ್ಲಿ ಈಗಲೂ ನಡೆಯುತ್ತಿವೆ. ಆದರೆ ಅವುಗಳನ್ನು ಗಾಢವಾಗಿ ಅರಿಯದೆ; ಮಾನವೀಯ ಸಂಬಂಧಗಳನ್ನು ದಟ್ಟಗೊಳಿಸಿಕೊಳ್ಳಲು ಸಾಧ್ಯವಿಲ್ಲ.

23 Mar, 2018

ವಾಚಕರವಾಣಿ
ಬಸವವಾದಿಗಳಿಗೆ ನೋವು...

ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಂಡ ಜಾತ್ಯತೀತ ಪತ್ರಿಕೆಗಳಲ್ಲಿ ‘ಪ್ರಜಾವಾಣಿ’ ತನ್ನ ಸ್ಥಾನವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಪತ್ರಿಕೆಯ ಪ್ರತೀ ವರದಿ ಹಾಗೂ ವಾಚಕರವಾಣಿಯು ಜನಸಾಮಾನ್ಯರ ಭಾವದ... ...

22 Mar, 2018