ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 8 ಕೋಟಿ ವೆಚ್ಚದಲ್ಲಿ ಎಪಿಎಂಸಿಯಲ್ಲಿ ವಿವಿಧ ಸೌಲಭ್ಯ

Last Updated 27 ಡಿಸೆಂಬರ್ 2017, 5:46 IST
ಅಕ್ಷರ ಗಾತ್ರ

ಮಳವಳ್ಳಿ: ಪಟ್ಟಣದ ಕನಕಪುರ ರಸ್ತೆ ಬದಿ ಇರುವ ಎಪಿಎಂಸಿ ಮಾರುಕಟ್ಟೆ ಯಲ್ಲಿ ಡಿ.28 ರಂದು ಮಾರುಕಟ್ಟೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಕೃಷಿ ಉತ್ಪನ್ನಗಾರರು ಹಾಗೂ ಖರೀದಿದಾರರು ಮಾರುಕಟ್ಟೆ ವಿಸ್ತರಿಸಲು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಅಂಬರೀಷ್‌ ಮಂಗಳವಾರ ಮನವಿ ಮಾಡಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಮದ್ದೂರು ಎಪಿಎಂಸಿ ಮಾರುಕಟ್ಟೆ ಯಿಂದ ಬೇರ್ಪಟ್ಟು ₹ 8 ಕೋಟಿಗೂ ಅಧಿಕ ವೆಚ್ಚದಲ್ಲಿ ಉಗ್ರಾಣ ಮಳಿಗೆ, ಗೋದಾಮು, ಕುರಿ ಮಾರಾಟ ಸುಸಜ್ಜಿತ ಮಾರುಕಟ್ಟೆ ರೂಪಿಸಲಾಗಿದೆ ಎಂದರು.

'ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಮತ್ತು ಚರಂಡಿ, ಕಾಂಪೌಂಡ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿ ಎಲ್ಲ ರೀತಿಯ ಸೌಕರ್ಯಗಳು ದೊರೆಯಲಿವೆ. ಹೆಚ್ಚಿನ ಖರೀದಿಗಾರರು, ಮಾರಾಟ ಗಾರರು ಮಾರುಕಟ್ಟೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಅಧಿಕ ಖಾತೆದಾರರು ಇದ್ದಾರೆ. 29 ಸಾವಿರ ರೈತರು ಆನ್ ಲೈನ್ ಮೂಲಕ ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಮಾಡಲಾಗುತ್ತಿದೆ. ಕೃಷಿಕರು ದಳ್ಳಾಳಿಗಳ ಮೂಲಕ ಸರಕು ಮಾರದೆ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದರು.

ಈ ಪ್ರಕ್ರಿಯೆಗೆ ಸಮಸ್ಯೆಗಳೇನು, ಅನುಕೂಲಗಳೇನು ಎಂಬುದರ ಕುರಿತು ಮಾರುಕಟ್ಟೆ ಸಪ್ತಾಹದಲ್ಲಿ ರೈತರು, ಪ್ರಗತಿಪರರು, ಚಿಂತಕರಿಂದ ಸಂವಾದ ನಡೆಸಿ ಸಲಹೆ ನೀಡಲಾಗುವುದು ಎಂದರು.

ರೈತ ಸಂಜೀವಿನಿ ಬಳಕೆಗೆ ಮನವಿ: ರೈತರು ಅವಘಡದಲ್ಲಿ ಮೃತಪಟ್ಟ ಸಂದರ್ಭದಲ್ಲಿ ರೈತ ಸಂಜೀವಿನಿ ಯೋಜನೆಯಡಿ ₹ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಅಂಗವಿಕಲರಾದರೆ ಅವರಿಗೆ ₹ 50 ಸಾವಿರ ಪರಿಹಾರ ನೀಡಲಾಗುತ್ತಿದೆ. ಈಗ 4 ಮಂದಿಗೆ ಪರಿಹಾರ ನೀಡಲಾಗಿದೆ ಎಂದರು.

ಎಪಿಎಂಸಿ ವ್ಯವಸ್ಥಾಪಕ ನಾಗೇಶ್ ಅವರು, ಮಾರುಕಟ್ಟೆ ಸಪ್ತಾಹದಲ್ಲಿ ಕೃಷಿಗೆ ಪೂರಕ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡುವರು. ಈಚೆಗೆ ಕೃಷಿ ಅಭಿಯಾನದಲ್ಲಿಯೂ ಎಪಿಎಂಸಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು. ಎಪಿಎಂಸಿ ನಿರ್ದೇಶಕರಾದ ದಿಲೀಪ್‌ಕುಮಾರ್, ಕೆ.ಜೆ.ದೇವರಾಜು, ಶಿವಲಿಂಗಯ್ಯ, ಶಿವಲಿಂಗು, ಜಯಮ್ಮ, ನಾಗಮ್ಮ ಅವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT