ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಉದ್ಯೋಗ ಮೇಳ ಯಶಸ್ವಿ

Last Updated 27 ಡಿಸೆಂಬರ್ 2017, 6:38 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣದಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದಲ್ಲಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಸಾವಿರಾರು ಯುವಕರು ಪಾಲ್ಗೊಂಡಿದ್ದರು. ಮಾಜಿ ಸಚಿವ ರಾಜೂಗೌಡ ಅವರ ಜನ್ಮದಿನದ ನಿಮಿತ್ತ ಮೇಳ ಆಯೋಜಿಸಲಾಗಿತ್ತು. 

ಬೆಳಿಗ್ಗೆ ಯಿಂದಲೇ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಪಕ್ಕದ ಜಿಲ್ಲೆಗಳಿಂದಲೂ ಉದ್ಯೋಗಾಕಾಂಕ್ಷಿಗಳು ಮೇಳಕ್ಕೆ ಬಂದು ಮಾಹಿತಿ ಪಡೆದರು.
ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ್ದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಉದ್ಯೋಗ ಮೇಳದಲ್ಲಿ 104 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ನಾವು ಉದ್ಯೊಗ ಅರಸಿ ಮಹಾನಗರಳತ್ತ ಹೋಗುತ್ತಿದ್ದೆವು. ಆದರೆ, ಕಂಪೆನಿಗಳು ಇಲ್ಲಿಗೇ ಬಂದು ಉದ್ಯೋಗ ನೀಡಿರುವುದು ಖುಷಿ ತಂದಿದೆ ಎಂದು ಕೊಡೇಕಲ್ಲದ ಹನುಮಾಕ್ಷಿ ತಿಳಿಸಿದರು.

ಸುಮಾರು 50 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಂದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಬಂದಿದ್ದ ಎಲ್ಲ ಅಭ್ಯರ್ಥಿಗಳಿಗೂ ಶುದ್ಧ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂದರ್ಶನದ ಬಳಿಕ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. ಮೇಳದಲ್ಲಿ ಅಂಗವಿಕಲರು ಪಾಲ್ಗೊಂಡಿದ್ದರು.

ಮಾಜಿ ಸಚಿವ ರಾಜೂಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯೋಗ ಮೇಳವು ಗ್ರಾಮೀಣ ಭಾಗದ ಯುವಕರಲ್ಲಿ ಹೆಚ್ಚು ಉತ್ಸಾಹ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಮೇಳ ಆಯೋಜಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರಕುಂದಿ, ಎಚ್.ಸಿ.ಪಾಟೀಲ, ಬಸಣ್ಣ ದೊರೆ, ನಾನಾಗೌಡ ಪಾಟೀಲ, ಸಂಗಣ್ಣ ವೈಲಿ, ಭೀಮರಾಯ ಶ್ರೀನಿವಾಸಪುರ, ಸೋಮಣ್ಣ ಮೇಟಿ ಎಂ,ಎಸ್.ಚಂದಾ, ಸಿದ್ದನಗೌಡ ಕರಿಬಾವಿ, ವಿನೋದ ದೊರೆ, ರವಿ ಪುರಾಣಿಕಮಠ, ನಂದಪ್ಪ ಪೀರಾಪುರ ಸೇರಿದಂತೆ ಇತರರು ಇದ್ದರು. ನೂರಾರು ಕಾರ್ಯಕರ್ತರು ಅಗತ್ಯ ವ್ಯವಸ್ಥೆ ಮಾಡಿದ್ದರು.

ಹುಣಸಗಿ: ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 8 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು ಎಂದು ಎಎಂಸಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ತೇಜಸ್ವಿ ಹೇಳಿದರು.

ಉದ್ಯೋಗ ಮೇಳದ ಬಳಿಕ ಮಾತನಾಡಿದ ಅವರು, ಆಕಾಂಕ್ಷಿಗಳಲ್ಲಿ 4,700 ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಇನ್ನೂ ಕೆಲವು ಜನರಿಗೆ ಶೀಘ್ರ ಪತ್ರ ನೀಡಲಾಗುವುದು ಎಂದು ವಿವರಿಸಿದರು.

1500 ಜನ ಹೊಂಡಾ ಕಂಪೆನಿ, 600 ಜನ ಫ್ಲಿಪ್‌ಕಾರ್ಟ ಕಂಪೆನಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು. ವಿವಿಧ ಕಂಪೆನಿಗಳ ಶಿವಪ್ರತಾಪ್, ಜೀವನ್ ಕುಮಾರ, ಅರುಣ ಕುಮಾರ, ಚಂದ್ರಶೇಖರ ಲೊಕೇಶ ಸೇರಿದಂತೆ ಬಸನಗೌಡ ಅಳ್ಳಿಕೋಟಿ, ಮೋತಿಲಾಲ್ ಚವ್ವಾಣ, ಬಸಣ್ಣ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT