ಚಿಕ್ಕಮಗಳೂರು

29ರಂದು ಜಿಗ್ನೇಶ್‌ ಮೇವಾನಿ ಚಿಕ್ಕಮಗಳೂರಿಗೆ

28ರಂದು ಬೆಳಿಗ್ಗೆ 11.30ಕ್ಕೆ ನುಡಿ ನಮನ ನಡೆಯಲಿದೆ. 15 ವರ್ಷಗಳಲ್ಲಿ ಸೌಹಾರ್ದಕ್ಕಾಗಿ ದುಡಿದು ಮಡಿದ ವೇದಿಕೆಯ ಸಂಗಾತಿಗಳಿಗೆ ನುಡಿನಮನ ಸಲ್ಲಿಸಲಾಗುವುದು.

ಚಿಕ್ಕಮಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ಸಂದ ಅಂಗವಾಗಿ ಇದೇ 28 ಮತ್ತು 29ರಂದು ನಗರದ ಜಿಲ್ಲಾ ಆಟದ ಮೈದಾನದಲ್ಲಿ ‘ಸೌಹಾರ್ದ ಮಂಟಪ: ಹಿಂದಣ ನೋಟ– ಮುಂದಣ ಹೆಜ್ಜೆ’ ರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಇಲ್ಲಿ ಮಂಗಳವಾರ ತಿಳಿಸಿದರು.

28ರಂದು ಬೆಳಿಗ್ಗೆ 11.30ಕ್ಕೆ ನುಡಿ ನಮನ ನಡೆಯಲಿದೆ. 15 ವರ್ಷಗಳಲ್ಲಿ ಸೌಹಾರ್ದಕ್ಕಾಗಿ ದುಡಿದು ಮಡಿದ ವೇದಿಕೆಯ ಸಂಗಾತಿಗಳಿಗೆ ನುಡಿನಮನ ಸಲ್ಲಿಸಲಾಗುವುದು. ಮಧ್ಯಾಹ್ನ 12.30ರಿಂದ 3.30ರವರೆಗೆ ಬಾಬಾಬುಡನ್‌ಗಿರಿ ದರ್ಶನಕ್ಕೆ ತೆರಳಲಾಗುವುದು. ಸಂಜೆ 4 ಗಂಟೆಗೆ ಸಾಕ್ಷ್ಯಚಿತ್ರ ಬಿಡುಗಡೆ, ಪ್ರದರ್ಶನ ಆಯೋಜಿಸಲಾಗಿದೆ. ಲೇಖಕಿ ಬಿ.ಟಿ.ಲಲಿತಾ ನಾಯಕ್‌, ರೈತ ಮುಖಂಡ ಕಡಿದಾಳ್‌ ಶಾಮಣ್ಣ ಭಾವಹಿಸುವರು. ಸಂಜೆ 6 ಗಂಟೆಗೆ ಸೌಹಾರ್ದ ಸಂಜೆ ಏರ್ಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

29ರಂದು ಬೆಳಿಗ್ಗೆ 10 ಗಂಟೆಗೆ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಮಾವೇಶ ಉದ್ಘಾಟಿಸುವರು. ‘ಹಿಂದಣ ಹೆಜ್ಜೆ’ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ 2.30ಕ್ಕೆ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದೆ. ಗುಜರಾತ್‌ನ ವಡ್‌ಗಾಂ ಕ್ಷೇತ್ರದ ಶಾಸಕ ಜಿಗ್ನೇಶ್‌ ಮೇವಾನಿ ಸಮಾರೋಪ ಭಾಷಣ ಮಾಡುವರು. ಮುಂಬೈನ ಮಾನವಹಕ್ಕು ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್‌ ಆಶಯ ನುಡಿಗಳನ್ನಾಡುವರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜಕೀಯ ಕಾರಣಕ್ಕೆ ಟೀಕಿಸುವುದು ಸರಿಯಲ್ಲ

ಚಿಕ್ಕಮಗಳೂರು
ರಾಜಕೀಯ ಕಾರಣಕ್ಕೆ ಟೀಕಿಸುವುದು ಸರಿಯಲ್ಲ

25 Apr, 2018

ಕಡೂರು
‘ಜನರ ಪ್ರೀತಿ ಆತ್ಮವಿಶ್ವಾಸ ಹೆಚ್ಚಿಸಿದೆ’

ಶಾಸಕ ವೈ.ಎಸ್.ವಿ. ದತ್ತ ಅವರು ಮಂಗಳವಾರ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಕಳೆದ 19ರಂದು ದತ್ತ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು.

25 Apr, 2018

ಚಿಕ್ಕಮಗಳೂರು
ಬರ ಪರಿಸ್ಥಿತಿ ನಿಭಾಯಿಸಲು ಶಾಸಕ ವಿಫಲ: ಬಿ.ಎಲ್.ಶಂಕರ್

ಕ್ಷೇತ್ರದಲ್ಲಿನ ಬರ ಪರಿಸ್ಥಿತಿ ನಿಭಾಯಿಸಲು ಇಲ್ಲಿನ ಶಾಸಕರು ವಿಫಲರಾಗಿದ್ದಾರೆ ಎಂದು ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ದೂಷಿಸಿದರು.

25 Apr, 2018

ಕೊಪ್ಪ
ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವಿಲ್ಲ

‘ನಾವೆಲ್ಲರೂ ಪಾಲಿಸುವ ಹಿಂದೂ ಧರ್ಮಕ್ಕೂ ಬಿಜೆಪಿ, ಸಂಘ ಪರಿವಾರದವರು ಪ್ರತಿಪಾ ದಿಸುವ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್...

25 Apr, 2018
ಕ್ರಮ ಜರುಗಿಸಲು ಒತ್ತಾಯ

ಚಿಕ್ಕಮಗಳೂರು
ಕ್ರಮ ಜರುಗಿಸಲು ಒತ್ತಾಯ

25 Apr, 2018