ವಾಚಕರವಾಣಿ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ ಇತಿಹಾಸದ ಪುಟ ಸೇರುತ್ತಿರುವುದು ಒಂದು ಭಾವಪೂರ್ಣ ಪ್ರಸಂಗ. ರಾಜೀವ್‌ ಗಾಂಧಿಯವರ ‘ಬಿಳಿಹೆಂಡ್ತಿ’ಯಾಗಿ ಬಂದ ಸೋನಿಯಾ, ನೆಹರೂ ಮನೆತನಕ್ಕೆ ‘ಗೃಹಲಕ್ಷ್ಮಿ’ಯಾದರು.

ಸೋನಿಯಾ ಗಾಂಧಿ ಇತಿಹಾಸದ ಪುಟ ಸೇರುತ್ತಿರುವುದು ಒಂದು ಭಾವಪೂರ್ಣ ಪ್ರಸಂಗ. ರಾಜೀವ್‌ ಗಾಂಧಿಯವರ ‘ಬಿಳಿಹೆಂಡ್ತಿ’ಯಾಗಿ ಬಂದ ಸೋನಿಯಾ, ನೆಹರೂ ಮನೆತನಕ್ಕೆ ‘ಗೃಹಲಕ್ಷ್ಮಿ’ಯಾದರು. ಪತಿಯನ್ನು ಜಗತ್ತೇ ಬೆಚ್ಚಿದ ದುರಂತದಲ್ಲಿ ಕಳೆದುಕೊಂಡು ‘ರಕ್ತದ ಕಣ್ಣೀರು’ ಹರಿದಾಗಲೂ ಮಕ್ಕಳನ್ನು ‘ತಾಯಿಯ ಮಡಿಲಲ್ಲಿ’ ಬೆಳೆಸಿದರು. ಕೋಮುವಾದದ ದಳ್ಳುರಿಯಾಗಿ ದೇಶ ‘ಬಯಲುದಾರಿ’ಯಾದಾಗ ದೇಶಕ್ಕೆ ‘ಸೊಸೆ ತಂದ ಸೌಭಾಗ್ಯ’

ವೆನ್ನುವಂತೆ ‘ಹೊಸಬೆಳಕು’ ನೀಡಿದರು. ಹೆಚ್ಚಿನ ಸಮಯ ‘ಮೌನರಾಗ’ದಲ್ಲೆ ಇದ್ದರೂ ಎಲ್ಲರಿಗೂ ಆಸರೆಯಾಗಿದ್ದ ಸೋನಿಯಾ, ತಮ್ಮ ಉಳಿದ ಜೀವನವನ್ನು ಮಹಿಳೆಯರು ಹಾಗೂ ಮಕ್ಕಳ ಅಭ್ಯುದಯಕ್ಕೆ ಮೀಸಲಿಡಲಿ.

–ಕೆ. ಪ್ರಕಾಶ, ಸೀಗೋಡು (ಚಿಕ್ಕಮಗಳೂರು ಜಿಲ್ಲೆ)

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಒತ್ತಡ ಸರಿಯಲ್ಲ

ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಏರಿಕೆ (ಪ್ರ.ವಾ., ಜ. 11) ವರದಿ ಆತಂಕ ಮೂಡಿಸುತ್ತದೆ.

18 Jan, 2018

ವಾಚಕರವಾಣಿ
ವಯೋಮಿತಿ ಏರಿಕೆ ಬೇಡ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡರೆ,...

18 Jan, 2018

ವಾಚಕರವಾಣಿ
ತೀರ್ಪಿಗೆ ಕಾಯೋಣ...

ಮಹದಾಯಿ ನದಿ ನೀರಿನ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ.ದೂರದಿಂದ ನೋಡುವ ನಮ್ಮಂಥ ಜನಸಾಮಾನ್ಯರಿಗೆ ಇದರಿಂದ ನೋವು ಉಂಟಾಗುತ್ತದೆ.

18 Jan, 2018

ವಾಚಕರವಾಣಿ
ಮಾರ್ಗದರ್ಶಕರಾಗಿ...

‘ಮಕ್ಕಳಿಲ್ಲದೆ, ವೃದ್ಧಾಪ್ಯದಲ್ಲಿ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಮುಂಬೈನ ವೃದ್ಧ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿರುವುದು (ಪ್ರ.ವಾ., ಜ. 12) ನಮ್ಮ...

18 Jan, 2018

ವಾಚಕರವಾಣಿ
ಧರ್ಮಯುದ್ಧ

ಚುನಾವಣೆ ಯುದ್ಧವಾದರೆ, ಇವರ ಪಕ್ಷದವರು ಪಾಂಡವರಂತೆ, ವಿಪಕ್ಷದವರು ಕೌರವರಂತೆ!

18 Jan, 2018