ವಾಚಕರವಾಣಿ

ಕೋಟ್ಯಧಿಪತಿ!

ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರ ಬಳಿ, ಕೋಟ್ಯಂತರ ರೂಪಾಯಿ ಬಹುಮಾನ ಕೊಡುವಷ್ಟು ಹಣ ಇದೆಯೆಂದಾದರೆ, ಇವರೇನಾದರೂ ಶಾಸಕ ಅಥವಾ ಮಂತ್ರಿಯಾಗಿದ್ದರೆ ಬಹುಮಾನದ ಮೊತ್ತ ಎಷ್ಟಿರುತ್ತಿತ್ತು?

ಸಚಿವ ಅನಂತಕುಮಾರ್ ಹೆಗಡೆ ಅವರ ನಾಲಿಗೆ ಕತ್ತರಿಸಿ ಕೊಟ್ಟವರಿಗೆ ₹ 1 ಕೋಟಿ ಬಹುಮಾನ ನೀಡುವುದಾಗಿ ಕಲಬುರ್ಗಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಘೋಷಿಸಿದ್ದಾರೆ (ಪ್ರ.ವಾ., ಡಿ. 27)!

ಆ ನಾಲಿಗೆಯನ್ನು ಈ ಮಹಾನುಭಾವರು ಏನು ಮಾಡುತ್ತಾರೆ? ಆ ನಾಲಿಗೆಗೆ ಅಷ್ಟೊಂದು ಬೆಲೆ ಕಟ್ಟಲು ಕಾರಣವೇನು?

ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರ ಬಳಿ, ಕೋಟ್ಯಂತರ ರೂಪಾಯಿ ಬಹುಮಾನ ಕೊಡುವಷ್ಟು ಹಣ ಇದೆಯೆಂದಾದರೆ, ಇವರೇನಾದರೂ ಶಾಸಕ ಅಥವಾ ಮಂತ್ರಿಯಾಗಿದ್ದರೆ ಬಹುಮಾನದ ಮೊತ್ತ ಎಷ್ಟಿರುತ್ತಿತ್ತು? ಸಚಿವರ ನಾಲಿಗೆಗೆ ಕೊಡುವ ಬದಲು, ಆ ಹಣವನ್ನು ಕಲಬುರ್ಗಿಯ ಜನರ ಸೇವೆಗೆ ಬಳಸಿದ್ದರೆ ಪಟ್ಟೇದಾರರು ಹೆಚ್ಚು ಎತ್ತರಕ್ಕೇರುತ್ತಿದ್ದರು.

–ಪಿ.ಜೆ.ರಾಘವೇಂದ್ರ, ಮೈಸೂರು

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಸುಗ್ಗಿ – ಹುಗ್ಗಿ!

ಇನ್ನು ಮುಂದೆ ಚುನಾವಣಾ ಪರ್ವಕಾಲ ಶ್ರೀಸಾಮಾನ್ಯನಿಗೆ ಇನ್ನಿಲ್ಲದ ಅನುಕೂಲ

20 Jan, 2018

ವಾಚಕರವಾಣಿ
ಎಚ್ಚೆತ್ತುಕೊಳ್ಳುವುದು ಎಂದು?

ನಮ್ಮ ರಾಜಕೀಯ ಮುಖಂಡರು, ಎರಡು ದೋಣಿಗಳಲ್ಲಿ ಪಯಣಿಸುವ ಮಠಾಧೀಶರು ಮತ್ತು ‘ಒಂದು ಕಿಡಿ ಇಡೀ ಕಾಡನ್ನೇ ಹೊತ್ತಿ ಉರಿಸುತ್ತದೆ’ ಎಂಬ ಜ್ಞಾನವಿಲ್ಲದ ಜನರು ಇದಕ್ಕೆ...

20 Jan, 2018

ವಾಚಕರವಾಣಿ
ಮಾದರಿ ಕ್ರಮ

ಆಂಧ್ರಪ್ರದೇಶ ಸರ್ಕಾರವು ಶಾಸಕರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಕಡ್ಡಾಯಗೊಳಿಸುವ ಕುರಿತು ಮಸೂದೆ ಮಂಡನೆಗೆ ಮುಂದಾಗಿರುವುದು ಚರಿತ್ರಾರ್ಹ ಕ್ರಮವಾಗಿದೆ.

20 Jan, 2018

ವಾಚಕರವಾಣಿ
ಲೇಖಾನುದಾನ ತೆಗೆದುಕೊಳ್ಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಒಂದು ತಿಂಗಳು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಹೋದ ಕಡೆಗಳಲ್ಲೆಲ್ಲ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

20 Jan, 2018

ವಾಚಕರವಾಣಿ
ಹೆಲ್ಮೆಟ್ ಭಾಗ್ಯ?!

ರಾಜಕೀಯ ಪಕ್ಷಗಳಿಗೆ ಒಂದು ಒಳ್ಳೆಯ ಅವಕಾಶ. ‘ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್ ಅನ್ನೇ ಧರಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

20 Jan, 2018