ಖಾನಾಪುರ

ಬಿಜೆಪಿ ನಾಯಕಿ ಮಂಜುಳಾ ಕಾಪಸೆ ಮನೆ ಮುಂದೆ ವಾಮಾಚಾರ !

‘ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲ ಕಿಡಿಗೇಡಿಗಳು ಸೋಮವಾರ ರಾತ್ರಿ ತಮ್ಮ ಬೀಡಿ ಗ್ರಾಮದ ಮನೆಯ ಮುಂದೆ ವಾಮಾಚಾರ ಮಾಡಿಸಿದ ವಸ್ತುಗಳನ್ನು ಇಟ್ಟುಹೋಗಿದ್ದಾರೆ’ ಎಂದು ಬಿಜೆಪಿ ನಾಯಕಿ ಮಂಜುಳಾ ಕಾಪಸೆ ಆರೋಪಿಸಿದ್ದಾರೆ.

ಖಾನಾಪುರ: ‘ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲ ಕಿಡಿಗೇಡಿಗಳು ಸೋಮವಾರ ರಾತ್ರಿ ತಮ್ಮ ಬೀಡಿ ಗ್ರಾಮದ ಮನೆಯ ಮುಂದೆ ವಾಮಾಚಾರ ಮಾಡಿಸಿದ ವಸ್ತುಗಳನ್ನು ಇಟ್ಟುಹೋಗಿದ್ದಾರೆ’ ಎಂದು ಬಿಜೆಪಿ ನಾಯಕಿ ಮಂಜುಳಾ ಕಾಪಸೆ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಅವರು, ‘ಸೋಮವಾರ ಸಂಜೆ ವಿವಿಧೆಡೆ ಕ್ರಿಸ್‌ಮಸ್‌ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿ 10 ಗಂಟೆಗೆ ಮನೆಗೆ ಬಂದು ಮಲಗಿದ್ದೆ. ಮರುದಿನ ಮಂಗಳವಾರ ಮುಂಜಾನೆ ಎದ್ದು ಬಾಗಿಲು ತೆರೆದಾಗ ಮನೆಯ ಮುಂಭಾಗದಲ್ಲಿ ವಾಮಾಚಾರದ ವಸ್ತುಗಳು ಕಾಣಿಸಿದವು. ಕೆಲ ದಿನಗಳ ಹಿಂದೆ ನಾನು ಹೊಸ ಕಾರು ಖರೀದಿಸಿದಾಗಲೂ ಇಂತಹ ವಸ್ತುಗಳು ಗೋಚರಿಸಿದ್ದವು’ ಎಂದು ಹೇಳಿದರು.

‘ನಾನು ಇಂತಹ ಮೂಢ ನಂಬಿಕೆ, ಗೊಡ್ಡು ಆಚರಣೆ ಮತ್ತು ಭಯ ಮೂಡಿಸುವ ಬೆದರಿಕೆಗಳಿಗೆ ಹೆದರುವುದಿಲ್ಲ. ಸಮಾಜದಲ್ಲಿ ಭಯ ಹುಟ್ಟಿಸುವ ಇಂತಹ ಕಿಡಿಗೇಡಿಗಳಿಂದ ಉಳಿದವರು ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಜೆಪಿಯವರಿಗೆ ಅಭಿವೃದ್ಧಿ ಗೊತ್ತಿಲ್ಲ

ಬೆಳಗಾವಿ
ಬಿಜೆಪಿಯವರಿಗೆ ಅಭಿವೃದ್ಧಿ ಗೊತ್ತಿಲ್ಲ

26 Apr, 2018
‘ಭಾಗ್ಯ’ಗಳು ಕೈಹಿಡಿವ ವಿಶ್ವಾಸ

ಬೆಳಗಾವಿ
‘ಭಾಗ್ಯ’ಗಳು ಕೈಹಿಡಿವ ವಿಶ್ವಾಸ

26 Apr, 2018
ಶಿವಬೋಧರಂಗರ ಪಲ್ಲಕ್ಕಿ ಉತ್ಸವ

ಮೂಡಲಗಿ
ಶಿವಬೋಧರಂಗರ ಪಲ್ಲಕ್ಕಿ ಉತ್ಸವ

26 Apr, 2018
ಮತದಾರರಿಗೆ ಮಮತೆಯ ಕರೆಯೋಲೆ!

ಬೆಳಗಾವಿ
ಮತದಾರರಿಗೆ ಮಮತೆಯ ಕರೆಯೋಲೆ!

26 Apr, 2018

ಬೆಳಗಾವಿ
252 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

ಬೆಳಗಾವಿ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ 27 ಜನರ ನಾಮಪತ್ರಗಳು ಬುಧವಾರ ತಿರಸ್ಕೃತಗೊಂಡಿವೆ. 252...

26 Apr, 2018