ಕೂಡ್ಲಿಗಿ

ಕಲ್ಲು ಗಣಿಗಾರಿಕೆ ಪರವಾನಗಿ ರದ್ದು ಮಾಡಲು ಆಗ್ರಹ

ಹಗಲು ರಾತ್ರಿ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವ ಕಾರಣ ಗ್ರಾಮದಲ್ಲಿನ ಮನೆಗಳು, ಶಾಲಾ ಕೊಠಡಿಗಳು, ದೇವಸ್ಥಾನ ಗೋಡೆಗಳು ಬಿರುಕು ಬಿಡುತ್ತಿವೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.

ಕೂಡ್ಲಿಗಿ: ತಾಲ್ಲೂಕಿನ ಬೋರಯ್ಯನಹಟ್ಟಿ ಗ್ರಾಮ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದ್ದು, ತಕ್ಷಣವೇ ಕ್ರಷರ್‌ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿ ಸಿಪಿಐ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರಯ್ಯನಹಟ್ಟಿ ಗ್ರಾಮದ ಪಕ್ಕದಲ್ಲಿಯೇ ಕೈಲಾಸ್, ಶಿವಸಾಯಿ ಹಾಗೂ ಎಲ್. ನಾಗೆಂದ್ರ ನಾಯ್ಕ್ ಸ್ಟೋನ್ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪಕ್ಕದಲ್ಲಿಯೇ ಗ್ರಾಮ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುರಾತನ ಅಂಜನೇಯ ಸ್ವಾಮಿ ದೇವಸ್ಥಾನವಿದೆ. ಈ ಕ್ರಷರ್‌ಗಳು ಪರವಾನಗಿ ಪಡೆಯುವಾಗ ಈ ಜಾಗದಲ್ಲಿ ಯಾವುದೇ ದೇವಾಲಯ, ಗ್ರಾಮಗಳಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಹಗಲು ರಾತ್ರಿ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವ ಕಾರಣ ಗ್ರಾಮದಲ್ಲಿನ ಮನೆಗಳು, ಶಾಲಾ ಕೊಠಡಿಗಳು, ದೇವಸ್ಥಾನ ಗೋಡೆಗಳು ಬಿರುಕು ಬಿಡುತ್ತಿವೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸ್ಫೋಟಿಸಿದ ಕಲ್ಲುಗಳು ರೈತರ ಜಮೀನಿಗಳಲ್ಲಿ ಬೀಳುತ್ತಿದ್ದು, ಕೃಷಿಗೆ ತೊಂದರೆಯಾಗಿದೆ. ಕ್ರಷರ್‌ ಸ್ಥಗಿತಗೊಳಿಸುವಂತೆ ಡಿ. 23 ರಂದು ಮನವಿ ಮಾಡಲು ಹೋದ ಕಾರಣಕ್ಕೆ ಕ್ರಷರ್‌ ಮಾಲೀಕರು ಗ್ರಾಮಸ್ಥರ ವಿರುದ್ಧವೇ ಗುಡೇಕೋಟೆ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಕ್ರಷರ್‌ ಪರವಾನಗಿ ರದ್ದು ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ಕೂರಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿ ಕ್ರಮ ಕಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಿಪಿಐ ತಾಲ್ಲೂಕು ಘಟಕದ ಕಾರ್ಯದರ್ಶಿ ಎಚ್. ವೀರಣ್ಣ, ಅಖಿಲ ಭಾರತ ಕಿಸನ್ ಸಭಾದ ಅಧ್ಯಕ್ಷ ರಾಜುಗೌಡ್ರು, ಗ್ರಾಮದ ಮುಖಂಡ ಮಂಜುನಾಥ, ರೇಣುಕಮ್ಮ, ಪುಜಾರಿ ಓಬಯ್ಯ, ದೊಡ್ಡ ಓಬಯ್ಯ, ದೊಡ್ದ ಮಾರಯ್ಯ, ಪುಟ್ಟಯ್ಯ, ಗಂಗಬೊಮ್ಮಯ್ಯ, ತಿಪ್ಪಯ್ಯ, ನಾಗರಾಜ, ಪಾಪಣ್ನ, ವಿನಾಯಕ, ಪಂಪಣ್ಣ, ನಿಂಗನಗೌಡ್ರು, ತಿಮ್ಮಣ್ಣ, ಪಾಲಯ್ಯ ಭಾಗಿಯಾಗಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

ಬಳ್ಳಾರಿ
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

21 Jan, 2018
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಘಟನೆ
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

20 Jan, 2018
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

ಸಂಡೂರು
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

20 Jan, 2018
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

ಸಿರುಗುಪ್ಪ
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

19 Jan, 2018

ಬಳ್ಳಾರಿ
‘ಹಳೇ ಪಿಂಚಣಿ ಯೋಜನೆಯೇ ಇರಲಿ’

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ...

19 Jan, 2018