ರಾಮಚಂದ್ರಾಪುರ ಮಠದಿಂದ ಅಭಯಾಕ್ಷರ ಆಂದೋಲನ ರಥಯಾತ್ರೆ; ಸಹಕಾರಕ್ಕೆ ಮನವಿ

ಗೋರಕ್ಷಣೆಗೆ ಧ್ವನಿ ಎತ್ತುವವರಿಗೆ ಬಲ ತುಂಬಿ

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಭಯಾಕ್ಷರ ಆಂದೋಲನ ರಥಯಾತ್ರೆ ಕೈಗೊಳ್ಳಲಾಗಿದೆ’ ಎಂದು ರಾಮಚಂದ್ರಾಪುರ ಮಠ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಗೌರಿಬಿದನೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅಭಯಾಕ್ಷರ ಆಂದೋಲನ ರಥಯಾತ್ರೆ ಕೈಗೊಳ್ಳಲಾಗಿದೆ’ ಎಂದು ರಾಮಚಂದ್ರಾಪುರ ಮಠ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಅಭಯಾಕ್ಷರ ರಥಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ‘ಇಂದು ಗೋತಾಯಿಗೆ ಅಪತ್ತು ಬಂದಿದೆ. ನಡು ರಸ್ತೆಯಲ್ಲಿಯೇ ಹಸುಗಳನ್ನು ಕಡಿದು ತಿನ್ನುತ್ತಿದ್ದಾರೆ. ಗೋ ತಾಯಿ ಮಕ್ಕಳಾದ ನಾವು ಅವುಗಳನ್ನು ರಕ್ಷಿಸುವ ಪ್ರತಿಜ್ಞೆ ಮಾಡಬೇಕಾಗಿದೆ. ಗೋಮಾತೆ ಪ್ರಾಣ ರಾಜಕಾರಣಿಗಳ ಕೈಯಲ್ಲಿದೆ. ಮತಕ್ಕಾಗಿ ರಾಜಕಾರಣಿಗಳು ಇಂದು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಯಾವ ರಾಜಕೀಯ ಪಕ್ಷ ಗೋಮಾತೆ ಪರವಾಗಿ ಇರುತ್ತಾರೋ ಅಂತಹವರಿಗೆ ಶಕ್ತಿ ತುಂಬ ಬೇಕಾಗಿದೆ. ಗೋವಿನ ರಕ್ತ ಭೂಮಿಗೆ ಚೆಲ್ಲಬಾರದು ಎನ್ನುವ ಏಕೈಕ ಉದ್ದೇಶ ನಮ್ಮದು. ತಾಲ್ಲೂಕಿನಲ್ಲಿ ಒಂದು ಲಕ್ಷ ಮಂದಿ ಗೋಹತ್ಯೆ ನಿಷೇಧ ಮಾಡಬೇಕು ಎಂದು ಸಹಿ ಸಂಗ್ರಹಿಸಿ ನಮಗೆ ನೀಡಿರುವುದು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಬೂತ್‌ ಮಟ್ಟದಲ್ಲಿ ಗೋ ಹತ್ಯೆ ನಿಷೇಧ ಸಮಿತಿ ರಚಿಸಿ ಸಂಪೂರ್ಣ ಗೋ ಹತ್ಯೆಯನ್ನು ನಿಲ್ಲಿಸುವ ಹೋರಾಟ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

ಗೋ ಸಂರಕ್ಷಣಾ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಡೈರಿ ರಮೇಶ್ ಮಾತನಾಡಿ, ‘ಭಾರತೀಯ ಗೋವು ಹಾಗೂ ತಳಿಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಮನಗಾಣಬೇಕಾಗಿದೆ. ಗೋವಿನ ಹಾಲು, ಗಂಜಲ, ಸಗಣಿ ಅಮೃತಕ್ಕೆ ಸಮಾನ. ಇಂದು ಹಲವಾರು ಕಾಯಿಲೆ ಗಳಿಗೆ ಇವುಗಳನ್ನು ಔಷಧಿಯಾಗಿ ಬಳಸಲಾಗುತ್ತಿದೆ’ ಎಂದರು.

ಪಟ್ಟಣದ ಆಚಾರ್ಯ ಕಾಲೇಜಿನಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಎನ್.ಎಂ. ರವಿನಾರಾಯಣರೆಡ್ಡಿ, ಜ್ಯೋತಿರೆಡ್ಡಿ, ಸಿ.ಆರ್. ನರಸಿಂಹಮೂರ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಳಗೌಡ, ಮುರಳೀಧರ್, ಮೋಹನ್, ಜಯಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ ಉಪಸ್ಥಿತರಿದ್ದರು.

ಜನರಿಗೆ ಗೋರಕ್ಷಣೆಯ ಮಹತ್ವವನ್ನು ತಿಳಿಸಲು ರಾಜ್ಯದಾದ್ಯಂತ ಕಾರ್ಯಕ್ರಮ ರೂಪಿಸಿದೆ. ಹೋರಾಟ ನಿರಂತರವಾಗಿ ನಡೆಯುವುದು
-ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರಮಠ ಪೀಠಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

ಚಿಕ್ಕಬಳ್ಳಾಪುರ
ಮಾರುಕಟ್ಟೆಯಲ್ಲೇ ಇಂದಿರಾ ಕ್ಯಾಂಟೀನ್‌ಗೆ ಜಾಗ

23 Jan, 2018
ಕೈಗಾರಿಕಾ ವಲಯ ಸ್ಥಾಪನೆಗೆ ವಿಶೇಷ ಒತ್ತು

ಶಿಡ್ಲಘಟ್ಟ
ಕೈಗಾರಿಕಾ ವಲಯ ಸ್ಥಾಪನೆಗೆ ವಿಶೇಷ ಒತ್ತು

23 Jan, 2018

ಬಾಗೇಪಲ್ಲಿ
ಅರ್ಹರಿಗೆ ಸೌಲಭ್ಯ ಒದಗಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಈರುಳ್ಳಿ ದಾಸ್ತಾನು ಮಾಡಲು ರೈತರಿಗೆ ಶೆಡ್‌ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಅಧಿಕಾರಿಗಳು ರೈತರಿಗೆ ವಿತರಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ

23 Jan, 2018
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

ಚಿಕ್ಕಬಳ್ಳಾಪುರ
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

22 Jan, 2018
ಸರಳ ಮದುವೆ ಹೆಚ್ಚು ನಡೆಯಲಿ

ಚಿಕ್ಕಬಳ್ಳಾಪುರ
ಸರಳ ಮದುವೆ ಹೆಚ್ಚು ನಡೆಯಲಿ

22 Jan, 2018