ಜನವರಿ 28ಕ್ಕೆ ಶತಮಾನೋತ್ಸವ ಸಮಾರಂಭ, ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಭಾಗಿ

ಶತಮಾನದ ಸಂಭ್ರಮದಲ್ಲಿ ಬೆಳಗೆರೆ ಶಾಲೆ

1918ರ ಜೂನ್‌ನಲ್ಲಿ ಸ್ಥಾಪನೆಯಾದ ಬೆಳಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬರುವ ಜನವರಿ ತಿಂಗಳಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

ಶತಮಾನದ ಸಂಭ್ರಮದಲ್ಲಿ ಬೆಳಗೆರೆ ಶಾಲೆ

ಬಸವಾಪಟ್ಟಣ: 1918ರ ಜೂನ್‌ನಲ್ಲಿ ಸ್ಥಾಪನೆಯಾದ ಬೆಳಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬರುವ ಜನವರಿ ತಿಂಗಳಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

ಆರಂಭದಲ್ಲಿ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇಗುಲದ ಆವರಣದ ವಿಶಾಲವಾದ ಒಂದೇ ಕೋಣೆಯಲ್ಲಿ 40 ಮಕ್ಕಳಿಂದ ಒಂದರಿಂದ ನಾಲ್ಕನೇ ತರಗತಿಯವರೆಗೆ ಆರಂಭವಾದ ಈ ಶಾಲೆಗೆ ಪ್ರಥಮವಾಗಿ ಕೃಷ್ಣಶಾಸ್ತ್ರಿ ಎಂಬುವವರು ಮುಖ್ಯ ಶಿಕ್ಷಕರಾಗಿ, ಅವರ ಪತ್ನಿ ರಾಧಮ್ಮ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ಅಭಿವೃದ್ಧಿ ಪಡಿಸಿದರು.

ಶಾಲೆಗೆ ಮಕ್ಕಳು ಹೆಚ್ಚಾಗುತ್ತಿದ್ದಂತೆ ಶಾಲೆಯ ಕಟ್ಟಡವನ್ನು ವಿಸ್ತರಿಸಲು, ಆಗ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ಚಿಕ್ಕಕುರುಬರಹಳ್ಳಿ ಪಟೇಲ್‌ ಬಸಪ್ಪ ನೆರವಾದರು.

ಮುಖ್ಯರಸ್ತೆಯ ಪಕ್ಕದ ವಿಶಾಲವಾದ ಆವರಣದಲ್ಲಿ ಹೆಂಚಿನ ಕೋಣೆಗಳನ್ನು ನಿರ್ಮಿಸಿ ಶಾಲೆ ಅಭಿವೃದ್ಧಿಗೆ ಅವರು ಸಹಕರಿಸಿದರು ಎಂದು ಗ್ರಾಮದ ಹಿರಿಯರಾದ ಸಂಕ್ಲಿಪುರದ ಸೋಮಶೇಖರಪ್ಪ ನೆನಪಿಸಿಕೊಂಡರು.

1969ರಲ್ಲಿ ಭಾರತಕ್ಕೆ ಬಂದಿದ್ದ ಅಮೆರಿಕಾದ ಸಮಾಜಸೇವಕ ಜಾನ್‌ ಕೆನಡಿ ಅವರು ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಜ್ಞಾಪಕಾರ್ಥ ಕ್ಯಾಲಿಫೋರ್ನಿಯಾದ ರೆಡ್‌ಲ್ಯಾಂಡ್‌ ಹೈಸ್ಕೂಲ್‌ ಮೂಲಕ ಈ ಶಾಲೆಗೆ ಸುಸಜ್ಜಿತವಾದ ನಾಲ್ಕು ಕೋಣೆಗಳನ್ನು ಕಟ್ಟಿಸಿಕೊಟ್ಟರು. ಈ ಶಾಲೆಯಲ್ಲಿ ಓದಿದ ಅನೇಕರು ವೈದ್ಯ, ಎಂಜಿನಿಯರ್‌, ಅಧ್ಯಾಪಕ, ಬ್ಯಾಂಕ್‌ ಅಧಿಕಾರಿಗಳಾಗಿ ಸರ್ಕಾರದ ವಿವಿಧ ಮೇಲ್ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ಪ್ರಸಿದ್ಧ ಅಧ್ಯಾತ್ಮಿ ಪಿ.ಗುಡುದಪ್ಪ ಮಾಸ್ತರ್‌, ಸ್ವಾತಂತ್ರ್ಯ ಹೋರಾಟಗಾರರಾದ ಸಂಗನಬಸಪ್ಪ, ಎ.ಪಾಪಣ್ಣಾಚಾರ್‌, ಎಸ್‌.ಎನ್‌.ಚನ್ನಬಸಪ್ಪ, ಎ.ಕೆ.ಗೂರ ದೊಡ್ಡಪ್ಪ ಮತ್ತು ಹುರಳಿಬಸಪ್ಪ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂದು ಹಿರಿಯರಾದ ಬಾತಿ ಹಾಲಸಿದ್ದಪ್ಪ ತಿಳಿಸಿದರು.

ಈಗ ಶಾಲೆಯಲ್ಲಿ ಒಟ್ಟು 11 ಕೊಠಡಿಗಳಿವೆ. 150 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಶಾಲೆಯ ಮುಂಭಾಗದಲ್ಲಿರುವ ನಿವೇಶನವನ್ನು ಆಟದ ಮೈದಾನವನ್ನಾಗಿ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬ ಶಿಕ್ಷಕರೂ ತರಬೇತಿ ಪಡೆದಿದ್ದು, ಕಂಪ್ಯೂಟರ್‌ ಶಿಕ್ಷಣ ನೀಡುತ್ತಿದ್ದಾರೆ.

ಶಾಲೆಯಲ್ಲಿ 3000ಕ್ಕೂ ಹೆಚ್ಚು ಉಪಯುಕ್ತ ಪುಸ್ತಕಗಳನ್ನು ಗ್ರಂಥಾಲಯವು ಹೊಂದಿದೆ. ಮಕ್ಕಳಲ್ಲಿ ಕಡ್ಡಾಯವಾಗಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಲಾಗಿದೆ. ಶಾಲೆಯ ರಂಗಮಂದಿರದಲ್ಲಿ ಪ್ರತಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮ ಪಂಚಾಯ್ತಿಯಿಂದ ಮಕ್ಕಳ ಬಿಸಿ ಊಟಕ್ಕೆ ತಟ್ಟೆಗಳನ್ನು ನೀಡಲಾಗಿದ್ದು, ಪ್ರತಿದಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸುತ್ತಿದೆ ಎಂದು ಮುಖ್ಯ ಶಿಕ್ಷಕ ಶೇಖ್‌ ಮೊಹ್ಮದ್‌ ನೂರುಲ್ಲಾ ತಿಳಿಸಿದರು.

ಶಾಲೆಯ ಶತಮಾನೋತ್ಸವವನ್ನು ಜನವರಿ 28ರಂದು ನಡೆಸಲು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ, ಆಹಾರ ಸಮಿತಿ, ವೇದಿಕೆ ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ‘ಬೆಳಲಗೆರೆಯ ಬೆಳಕು’ ಎಂಬ ಸ್ಮರಣ ಸಂಚಿಕೆ ಹೊರತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಸೆಂಬರ್‌ 31ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎನ್ನುತ್ತಾರೆ ಶಿಕ್ಷಣ ಸಂಯೋಜಕ ಎಂ.ಎಸ್‌.ಬಿರಾದಾರ್‌, ಗ್ರಾಮದ ಮುಖಂಡ ಪಿ.ಜಿ.ಜಯಪ್ಪ, ಶಿಕ್ಷಕ ಕೆ.ಜಿ.ಹನುಮಂತಪ್ಪ.

ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಕೆ.ಶಿವಮೂರ್ತಿ, ತೇಜಸ್ವಿ ಪಟೇಲ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಹನುಮಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಶಾ ರಂಗಸ್ವಾಮಿ, ಗ್ರಾಮ ಪಂಚಾಯ್ತಿಯ ಎಲ್ಲಾ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಡಿ.ಜಯಪ್ಪ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಟೊಮೆಟೊ ಸುರಿದು ರೈತರ ಪ್ರತಿಭಟನೆ

ದಾವಣಗೆರೆ
ಟೊಮೆಟೊ ಸುರಿದು ರೈತರ ಪ್ರತಿಭಟನೆ

19 Jan, 2018
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

ಸಂತೇಬೆನ್ನೂರು
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

19 Jan, 2018

ನ್ಯಾಮತಿ
ಹೆದ್ದಾರಿ ಪಕ್ಕದಲ್ಲಿ ವಿದ್ಯಾರ್ಥಿಗಳ ಆಟ

‘ಪ್ರತಿದಿನ ಬೆಳಿಗ್ಗೆ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಮುಖ್ಯದ್ವಾರದ ಗೇಟಿನ ಬೀಗ ತೆಗೆಯುವ ತನಕ ರಸ್ತೆಯ ಅಕ್ಕಪಕ್ಕ ಆಟವಾಡುವುದು, ಓಡುವುದು ಹಾಗೂ ರಸ್ತೆ ಬದಿಯ...

19 Jan, 2018
ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

ಹರಿಹರ ತಾಲ್ಲೂಕು
ಬುಳ್ಳಾಪುರ: ಗೋಮಾಳ ಜಮೀನಿನಲ್ಲಿ ಮನೆ ತೆರವಿಗೆ ತಾಲ್ಲೂಕು ಆಡಳಿತ ಯತ್ನ; ಗ್ರಾಮಸ್ಥರ ವಿರೋಧ

18 Jan, 2018

ಹರಿಹರ
ಬುಳ್ಳಾಪುರ: ಮನೆ ತೆರವಿಗೆ ಗ್ರಾಮಸ್ಥರ ವಿರೋಧ

ಗ್ರಾಮದಲ್ಲಿರುವ ಗೋಮಾಳ ಜಮೀನನ್ನು ಕೆಲವರು ಅಕ್ರಮಿಸಿಕೊ ಳ್ಳುತ್ತಿದ್ದಾರೆ. ಅಂಥವರಿಗೆ ಅಧಿಕಾರಿಗಳು, ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ನೀಡುತ್ತಾರೆ ಎಂದು ಗ್ರಾಮಸ್ಥ ಪ್ರದೀಪ್‌ ದೂರಿದರು.

18 Jan, 2018