ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ

ಮತದಾರರ ಪಟ್ಟಿ: ಪರಿಶೀಲನಾ ಸಭೆ

ಇದೇ 29 ಮತದಾರರ ಯಾದಿಗೆ ಹೊಸ ಸೇರ್ಪಡೆ ಹಾಗೂ ಅವಶ್ಯಕ ಮಾಹಿತಿ ಸ್ವೀಕರಿಸಲು ಕೊನೆಯ ದಿನವಾಗಿದ್ದು ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಧಾರವಾಡ: ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಮೊದಲ ಹಂತದ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಬೆಳಗಾವಿ ವಿಭಾಗದ ಮತದಾರ ಯಾದಿ ವೀಕ್ಷಕರೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಪರಿಶೀಲನೆ ನಡೆಸಿದರು.

ಮತದಾರರ ಪಟ್ಟಿಗೆ ಹೊಸ ಹೆಸರುಗಳ ಸೇರ್ಪಡೆ, ಸ್ವೀಕೃತ ಅರ್ಜಿಗಳ ಸಂಖ್ಯೆ, ಬಿಟ್ಟು ಬಿಡತಕ್ಕ ವಿವರಗಳು, ಹೊಸ ಮತಗಟ್ಟೆ ಸ್ಥಾಪನೆ, ಮತಗಟ್ಟೆ ಮಟ್ಟದ ಅಧಿಕಾರಿಗಳ ನೇಮಕ ಹಾಗೂ ಅವರ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದ ಅವರು, ಇದೇ 29 ಮತದಾರರ ಯಾದಿಗೆ ಹೊಸ ಸೇರ್ಪಡೆ ಹಾಗೂ ಅವಶ್ಯಕ ಮಾಹಿತಿ ಸ್ವೀಕರಿಸಲು ಕೊನೆಯ ದಿನವಾಗಿದ್ದು ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ‘ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ಜರುಗಿಸಿ, ಪ್ರತಿ ಮತಗಟ್ಟೆಗಳಿಗೆ ತಮ್ಮ ಪಕ್ಷದ ಏಜೆಂಟರನ್ನು ನೇಮಿಸಿ ಮಾಹಿತಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷ ಈ ಮಾಹಿತಿಯನ್ನು ಚುನಾವಣಾ ವಿಭಾಗಕ್ಕೆ ಸಲ್ಲಿಸಿಲ್ಲ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ತಕ್ಷಣ ಈ ಕುರಿತು ಪತ್ರ ಬರೆದು ಏಜೆಂಟರ ನೇಮಕಾತಿ ಕುರಿತು ಮಾಹಿತಿ ಪಡೆಯಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂತಿಮ ಹಂತದ ಮತದಾರರ ಪಟ್ಟಿ ಪರಿಷ್ಕರಣೆಗೆ ಡಿ.29 ಕೊನೆ ದಿನವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಂಡು ಎಲ್ಲ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕು ಎಂದು ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಚುನಾವಣಾ ತಹಶೀಲ್ದಾರ್ ಬಿ.ವಿ.ಲಕ್ಷ್ಮೇಶ್ವರ, ಧಾರವಾಡ ತಹಶೀಲ್ದಾರ್‌ ಪ್ರಕಾಶ ಕುದರಿ, ಪಾಲಿಕೆ ಅಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ವಿನಯ ಕುಲಕರ್ಣಿ ವಿರುದ್ಧ ಬಂಡಾಯ

ಧಾರವಾಡ
ವಿನಯ ಕುಲಕರ್ಣಿ ವಿರುದ್ಧ ಬಂಡಾಯ

18 Apr, 2018
ಮಾಜಿ ಸಚಿವ ಕೆ.ಎನ್.ಗಡ್ಡಿ ರಾಜೀನಾಮೆ ಘೋಷಣೆ

ನವಲಗುಂದ
ಮಾಜಿ ಸಚಿವ ಕೆ.ಎನ್.ಗಡ್ಡಿ ರಾಜೀನಾಮೆ ಘೋಷಣೆ

17 Apr, 2018

ನವಲಗುಂದ
‘ಕರ್ನಾಟಕಕ್ಕೆ ಕುಮಾರಣ್ಣ, ನವಲಗುಂದಕ್ಕೆ ಕೋನರಡ್ಡಿ’

‘ಕರ್ನಾಟಕದ ಯಾವ ಮೂಲೆಗೆ ಹೋದರೂ ಕುಮಾರಣ್ಣ ಎನ್ನುತ್ತಾರೆ. ಅದೇರೀತಿ ಕ್ಷೇತ್ರದ ಯಾವ ಗ್ರಾಮಕ್ಕೆ ಹೋದರೂ ಕೋನರಡ್ಡಿ ಎನ್ನುತ್ತಾರೆ. ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿ ಆಗುವುದು...

17 Apr, 2018
ರಾಜಕಾರಣಿಗಳ ‘ಆಟ’; ಕ್ರೀಡಾಪಟುಗಳ ಸಂಕಟ

ಹುಬ್ಬಳ್ಳಿ
ರಾಜಕಾರಣಿಗಳ ‘ಆಟ’; ಕ್ರೀಡಾಪಟುಗಳ ಸಂಕಟ

17 Apr, 2018

ಧಾರವಾಡ
ಅಪರೂಪದ ಸಂಪಾದಕ ಮೊಹರೆ

‘ಸರಳತೆ, ಸಜ್ಜನಿಕೆ ಮತ್ತು ಪ್ರಾಮಾಣಿಕತೆಗೆ ಪರ್ಯಾಯ ಎನ್ನುವಂತಿದ್ದ ಮೊಹರೆ ಹಣಮಂತರಾಯರು ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ಸಂಪಾದಕ’ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ...

17 Apr, 2018