ಳೆಯ ಪಿಂಚಣಿ ಯೋಜನೆ ಜಾರಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ ವಿಳಂಬಕ್ಕೆ ಆಕ್ರೋಶ

ಕೆಎಂಎಫ್ ಧೋರಣೆ ಖಂಡಿಸಿ ಪ್ರತಿಭಟನೆ 29ಕ್ಕೆ

ಹಿರಿಯ ನೌಕರರಿಗೆ ಹಳೆಯ ಪಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕೆಎಂಎಫ್, ಡಿಎಂಯು ಅಧಿಕಾರಿಗಳ ಹಾಗೂ ನೌಕರರ ಜಂಟಿ ಸಮನ್ವಯ ಸಮಿತಿ ಪ್ರಸ್ತಾವ ಸಲ್ಲಿಸಿ 7–8 ತಿಂಗಳು ಕಳೆದಿದೆ. ಆದರೂ ಕೆಎಂಎಫ್ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಧಾರವಾಡ: ಹಳೆಯ ಪಿಂಚಣಿ ಯೋಜನೆ ಜಾರಿಯಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಆಡಳಿತ ಮಂಡಳಿ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ಬೆಂಗಳೂರಿನ ಕೇಂದ್ರ ಕಚೇರಿ ಎದುರಿಗೆ ಡಿ 29ರಂದು ಕೆಎಂಎಫ್ ಜಿಲ್ಲಾ ಹಾಲು ಒಕ್ಕೂಟಗಳ ನೌಕರರ ಫೆಡರೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ವಿ.ಎನ್. ಹಳಕಟ್ಟಿ ಹೇಳಿದರು.

ಹಿರಿಯ ನೌಕರರಿಗೆ ಹಳೆಯ ಪಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಕೆಎಂಎಫ್, ಡಿಎಂಯು ಅಧಿಕಾರಿಗಳ ಹಾಗೂ ನೌಕರರ ಜಂಟಿ ಸಮನ್ವಯ ಸಮಿತಿ ಪ್ರಸ್ತಾವ ಸಲ್ಲಿಸಿ 7–8 ತಿಂಗಳು ಕಳೆದಿದೆ. ಆದರೂ ಕೆಎಂಎಫ್ ಆಡಳಿತ ಮಂಡಳಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

’ಸರ್ಕಾರ ಸೆಪ್ಟೆಂಬರ್ 2016ಕ್ಕೂ ಮೊದಲು ನೇಮಕಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೊಜನೆಯಡಿ ನಿವೃತ್ತಿ ವೇತನ ನೀಡದೇ, ಹೊಸ ಪಿಂಚಣಿ ನೀಡಲು ಮುಂದಾಗಿದೆ. ಇದರಿಂದ ಸುಮಾರು 20–22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಅನ್ಯಾಯ ಆಗಲಿದೆ. ಇದನ್ನು ಸರಿಪಡಿಸಲು ಕೆಎಂಎಫ್‌ಗೆ ಮನವಿ ಮಾಡಿದ್ದರೂ, ಕೇವಲ ಆಶ್ವಾಸನೆ ನೀಡುತ್ತ ಬರಲಾಗುತ್ತಿದೆ’ ಎಂದು ಆರೋಪಿಸಿದರು.

‘2016ಕ್ಕೂ ಮೊದಲೇ ಸುಮಾರು 4917 ಹಿರಿಯ ನೌಕರರು ನೇಮಕವಾಗಿದ್ದು, ಕೆಲವರು ಸರ್ಕಾರಿ ಇಲಾಖೆಗಳಿಗೆ ನಿಯೋಜನೆಗೊಂಡು ನಂತರ ಪುನಃ ಕೆಎಂಎಫ್‌ಗೆ ಮರು ನಿಯೋಜನೆಗೊಂಡು ನಿವೃತ್ತಿಯಾಗಿದ್ದಾರೆ. ಅವರಿಗೆ ಹಳೆಯ ಪಿಂಚಣಿ ಯೋಜನೆಯಡಿ ನಿವೃತ್ತಿ ವೇತನ ಮಂಜೂರು ಮಾಡುವುದನ್ನು ಬಿಟ್ಟು ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ನೌಕರರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಹೇಳಿದರು.

2016ರ ನಂತರ ನೇಮಕಗೊಂಡ ನೌಕರರಿಗೆ ಸದ್ಯ ಜಾರಿಗೆ ತಂದಿರುವ ನಿವೃತ್ತಿ ವೇತನ ಯೋಜನೆಯಡಿ ಎನ್‌ಪಿಎಸ್‌ ಪರಿಷ್ಕರಿಸಿ ಆಡಳಿತ ವರ್ಗ ಪ್ರತಿಶತ ಶೇ 20ರಷ್ಟು ಹಾಗೂ ನೌಕರರು ಶೇ 10ರಷ್ಟು ಕ್ರೋಡೀಕರಿಸುವ ಬದಲು(ಇಪಿಎಫ್ ಮತ್ತು ಎನ್‌ಡಿಎಸ್) ಒಂದನ್ನೇ ಪರಿಷ್ಕರಿಸಿ ಎನ್‌ಪಿಎಸ್ ಜಾರಿಗೆ ತರಬೇಕು. ಹಿರಿಯರಿಗೆ ಹಳೆಯ ಯೋಜನೆಯನ್ವಯ, ಹೊಸಬರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಲ್ಲಿ ಅನುಸರಿಸಿದ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, 14 ಹಾಲು ಒಕ್ಕೂಟಗಳು ಹಾಗೂ ಅಂಗ ಸಂಸ್ಥೆಗಳ ಸುಮಾರು 300 ಕ್ಕೂ ಅಧಿಕ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಫೆಡರೇಷನ್ ಕಾರ್ಯಾಧ್ಯಕ್ಷ ಎನ್.ಎಸ್.ಅರವಳದ, ಎಂ.ಎಸ್.ಹಿರೇಮಠ, ಬಿ.ಜಗನ್ನಾಥ, ಬಿ.ಎಸ್.ಹಿಂಬಗೇರಿ, ಕೆ.ಎಸ್.ಪಾಟೀಲ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಉದ್ಯೋಗ ಸೃಷ್ಟಿ – ಅಕ್ರಮ ಸಕ್ರಮಕ್ಕೆ ಆದ್ಯತೆ

ಹುಬ್ಬಳ್ಳಿ
ಉದ್ಯೋಗ ಸೃಷ್ಟಿ – ಅಕ್ರಮ ಸಕ್ರಮಕ್ಕೆ ಆದ್ಯತೆ

22 Apr, 2018
ಮನೆಯೊಳಕ್ಕೆ ಚರಂಡಿ ನೀರು: ನಿವಾಸಿಗಳ ಪರದಾಟ

ಹುಬ್ಬಳ್ಳಿ
ಮನೆಯೊಳಕ್ಕೆ ಚರಂಡಿ ನೀರು: ನಿವಾಸಿಗಳ ಪರದಾಟ

22 Apr, 2018

ಹುಬ್ಬಳ್ಳಿ/ಧಾರವಾಡ
ಅಬ್ಬಯ್ಯ ಸೇರಿ 15 ಜನರಿಂದ ಉಮೇದುವಾರಿಕೆ

ಜಿಲ್ಲೆಯಲ್ಲಿ ಶನಿವಾರ ಒಟ್ಟು 15 ಜನರು ನಾಮಪತ್ರ ಸಲ್ಲಿಸಿದ್ದಾರೆ. ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಪ್ರಸಾದ ಅಬ್ಬಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದರು.

22 Apr, 2018

ಹುಬ್ಬಳ್ಳಿ
ಪರಿಸರ ಸ್ನೇಹಿ ಡೈಪರ್‌ ಬಳಕೆಗೆ ಸಲಹೆ

ಚಿಕ್ಕ ಮಕ್ಕಳ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಬಳಸಿ ಬಿಸಾಕುವ ಡೈಪರ್‌ಗಳ ಬದಲು, ಮರುಬಳಕೆಗೆ ಯೋಗ್ಯವಾದ ಬಟ್ಟೆಯಿಂದ ತಯಾರಿಸುವ ಆರೋಗ್ಯ ಮತ್ತು...

22 Apr, 2018

ಧಾರವಾಡ
ಬೆಲ್ಲದ ಟೀಕೆ ನೋವು ತಂದಿದೆ: ತಮಟಗಾರ

‘ಈ ಬಾರಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಆಯ್ಕೆಯಲ್ಲಿ ಬಸವ ತತ್ವ ಹಾಗೂ ಸಾಮಾಜಿಕ ಸಮಾನತೆ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಇದೇ ಆಧಾರದ...

22 Apr, 2018