ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಟ್ಟಲು ಅಂಟು ಸಾಕು

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸುಸ್ಥಿರ ಮತ್ತು ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿ ಉತ್ಪಾದನೆಯಲ್ಲಿ ಎರಡು ಶತಮಾನಗಳ ಇತಿಹಾಸ ಹೊಂದಿರುವ ವೀನೆರ್‌ಬರ್ಗರ್ ಕಂಪೆನಿ ಕಟ್ಟಡ ನಿರ್ಮಿಸಲು ಗಾರೆ ಬದಲು ಬಳಸಬಹುದಾದ ‘ನೊರೆ’ಯನ್ನು (ಫೋಮ್‌) ಕಂಡುಹಿಡಿದಿದೆ.

ಮುಖಕ್ಷೌರ ಮಾಡಿಕೊಳ್ಳಲು ಬಳಸುವ ಶೇವಿಂಗ್‌ ಫೋಮ್‌ನಂತೆ ಕಾಣುವ ‘ಪೋರೋಥರ್ಮ್ ಡ್ರೈ ಫಿಕ್ಸ್’ ಹೆಸರಿನ ರಾಸಾಯನಿಕ ಅಂಟಿನಿಂದ ಎಂಥ ದೊಡ್ಡ ಕಟ್ಟಡವನ್ನಾದರೂ ನಿರ್ಮಿಸಬಹುದು.

ಈ ನೊರೆ ಒಣ ಗಾರೆಯಂತೆ ಕೆಲಸ ಮಾಡುವುದರಿಂದ ಮರಳು, ಸಿಮೆಂಟ್‌, ಗಾರೆ ಮತ್ತು ನೀರು ಬೇಕಾಗಿಲ್ಲ. ನಿರ್ಮಾಣ ವೆಚ್ಚ, ಸಮಯ ಮತ್ತು ಶ್ರಮವನ್ನೂ ತಗ್ಗಿಸುವ ಇದನ್ನು ನಿರ್ಮಾಣ ಕ್ಷೇತ್ರದ ಕ್ರಾಂತಿಕಾರಿ ಸಂಶೋಧನೆ ಎಂದು ಬಣ್ಣಿಸಲಾಗಿದೆ.

ಬಿಡಿಸಲಾಗದ ಬಂಧ: ಎರಡು ಇಟ್ಟಿಗೆಗಳ ನಡುವೆ ಗಾರೆಯ ಬದಲು ಈ ಅಂಟು ಹಾಕಿ ಅರ್ಧ ಗಂಟೆ ಬಿಟ್ಟರೆ ಸಾಕು. ಸಿಮೆಂಟ್‌ಗಿಂತ ಹೆಚ್ಚು ಗಟ್ಟಿಯಾಗಿ ಇಟ್ಟಿಗೆಗಳನ್ನು ಜೋಡಿಸುತ್ತದೆ. ಇದು ಬಿಡಿಸಲಾಗದ ಬಂಧ. ಹೀಗೆ ಒಮ್ಮೆ ಜೋಡಿಸಿದ ಇಟ್ಟಿಗೆಗಳನ್ನು ಬಿಡಿಸುವುದು ಸವಾಲಿನ ಕೆಲಸ. ‘ಮರಳು, ನೀರು, ಕಾರ್ಮಿಕರ ಅಭಾವ ಎದುರಿಸುತ್ತಿರುವ ಮಹಾ ನಗರಗಳಿಗೆ ಈ ತಂತ್ರಜ್ಞಾನ ಹೇಳಿ ಮಾಡಿಸಿದಂತಿದೆ’ ಎನ್ನುತ್ತಾರೆ ವೀನೆರ್‌ಬರ್ಗರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊನ್ನಂದ ಅಪ್ಪಯ್ಯ.

ಬೆಂಗಳೂರಿನಲ್ಲಿ ಈ ತಂತ್ರಜ್ಞಾನದಿಂದ ಈವರೆಗೆ 15 ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಫಲಿತಾಂಶ ಮತ್ತು ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆ. ಒಂದು ಕ್ಯಾನ್‌ ಅಂಟು ಬಳಸಿ ನೂರು ಚದರ ಅಡಿ ಗೋಡೆ ಕಟ್ಟಬಹುದು. 15 ಕ್ಯಾನ್‌ಗಳಲ್ಲಿ 1500 ಚದರ ಅಡಿ ಕಟ್ಟಡ ನಿರ್ಮಿಸಬಹುದು.

ರೆಫ್ರಿಜರೇಟರ್‌ (ಫ್ರಿಡ್ಜ್‌), ಸೋಲಾರ್‌ ವಾಟರ್‌ ಹೀಟರ್‌ಗಳಲ್ಲಿ ಬಳಸುವ ಪಾಲಿ ಯುರೇಥಿನ್‌ ಫೋಮ್‌ (ಪಿಯುಎಫ್‌–ಪಫ್‌) ನೊರೆಗೆ ಅಂಟಿನ ಗುಣವುಳ್ಳ ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಉಷ್ಣ ನಿರೋಧಕದಂತೆಯೂ ಕೆಲಸ ಮಾಡುವ ಅಂಟು ಸಣ್ಣ ಟ್ಯೂಬ್‌ನಿಂದ ಕ್ಯಾನ್‌ಗಳಲ್ಲಿ ಲಭ್ಯವಿದೆ. ಗ್ರಾಹಕರ ಬೇಡಿಕೆಗೆ ಅನುಸಾರ ವಿವಿಧ ಗಾತ್ರ ಮತ್ತು ತೂಕಗಳಲ್ಲಿ ದೊರೆಯುತ್ತದೆ.

ಈ ಇಟ್ಟಿಗೆ ಮತ್ತು ಅಂಟು ಬಳಸುವುದು ಅತ್ಯಂತ ಸುಲಭ. ನೊರೆ ಹಾಕಲು ವಿಶೇಷ ಸಾಧನ (ಗನ್‌) ನೀಡಲಾಗುತ್ತದೆ.  ಗ್ರಾಹಕರು ಬಯಸಿದರೆ ಸೂಕ್ತ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲು ಕಂಪನಿ ತಜ್ಞರ ನೆರವು ಒದಗಿಸುತ್ತದೆ.

ಆಕರ್ಷಕ ಕೆಂಬಣ್ಣದ ಇಟ್ಟಿಗೆ: ಈ ಅಂಟು ಪರಿಣಾಮಕಾರಿ ಕೆಲಸ ಮಾಡಲು ಸೂಕ್ತವಾದ ಪೋರೋಥರ್ಮ್ ಪರ್ಪೋರೇಟೆಡ್ ಕ್ಲೇ, ಪೋರೋಥರ್ಮ್ ಥರ್ಮೋ ಬ್ರಿಕ್ಸ್ ಎಂಬ ಎರಡು ಬಗೆಯ ವಿಶೇಷ ಬಗೆಯ ಇಟ್ಟಿಗೆಗಳನ್ನೂ ಕಂಪೆನಿ ಸ್ಥಳೀಯವಾಗಿ ಸಿದ್ಧಪಡಿಸಿ, ಪೂರೈಸುತ್ತದೆ.

ಕೆಂಬಣ್ಣದ ಈ ಇಟ್ಟಿಗೆಗಳು ನೋಡಲು ಆಕರ್ಷಕ ವಿನ್ಯಾಸ ಹೊಂದಿವೆ. ಸಾಮಾನ್ಯ ಇಟ್ಟಿಗೆಗಳಿಂತ ಶೇ 60ರಷ್ಟು ಹಗುರವಾಗಿದ್ದು ಹೆಚ್ಚು ಬಾಳಿಕೆ ಬರುತ್ತವೆ. ಜೊತೆಗೆ ಕೊಂಚ ದುಬಾರಿಯೂ ಹೌದು. ಒಂದು ಇಟ್ಟಿಗೆ ಬೆಲೆ ಸುಮಾರು ₹60. ಟೊಳ್ಳಾಗಿರುವ ಇಟ್ಟಿಗೆ ಒಳ ಭಾಗದಲ್ಲಿ ಸ್ಪಂಜ್‌ನಂತೆ ಕಾಣುವ ಉಷ್ಣ ನಿರೋಧಕ ವಸ್ತು ತುಂಬಲಾಗುತ್ತದೆ. ಬೇಸಿಗೆಯಲ್ಲಿ ತಂಪಾಗಿಯೂ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇಡಲು ಇದು ನೆರವಾಗುತ್ತದೆ.

ಒಂದು ಇಟ್ಟಿಗೆಯ ತೂಕ  10 ರಿಂದ 11 ಕೆ.ಜಿ.ಯಷ್ಟಿರುತ್ತದೆ. ಬಹುಮಹಡಿ ಕಟ್ಟಡಗಳಲ್ಲಿ ಇವುಗಳ ಬಳಕೆ ಹೆಚ್ಚು ಸೂಕ್ತ. ಗಣನೀಯ ಪ್ರಮಾಣದಲ್ಲಿ ಭಾರ ಕಡಿಮೆಯಾಗುತ್ತದೆ. 

ಎರಡು ಶತಮಾನಗಳ ಇತಿಹಾಸ...!
1819ರಲ್ಲಿ ಆಸ್ಟ್ರೀಯಾದ ವಿಯೆನ್ನಾದಲ್ಲಿ ಸ್ಥಾಪನೆಯಾದ ವೀನರ್‌ಬರ್ಗರ್ ಕಂಪೆನಿ ಸದ್ಯ ವಿಶ್ವದ 30 ರಾಷ್ಟ್ರಗಳಲ್ಲಿ ಕಾರ್ಖಾನೆ ಹೊಂದಿದೆ.

ಸಾಂಪ್ರದಾಯಿಕ ಪದ್ಧತಿಗೆ ಜೋತು ಬೀಳದೆ, ಕಾಲಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಾವಿನ್ಯತೆ ಅಳವಡಿಸಿಕೊಂಡಿದೆ. ಆದರೆ, ‘ಪರಿಸರ ಸ್ನೇಹಿ’ ಬದ್ಧತೆಯನ್ನು ಬಿಟ್ಟುಕೊಟ್ಟಿಲ್ಲ.

2009ರಲ್ಲಿ ಭಾರತಕ್ಕೆ ಕಾಲಿಟ್ಟ ವೀನೆರ್ಬರ್ಗರ್‌ ತುಮಕೂರು ಜಿಲ್ಲೆಯ ಕುಣಿಗಲ್‌ ಬಳಿ ಇಟ್ಟಿಗೆ ತಯಾರಿಕಾ ಘಟಕ ನಿರ್ಮಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಮತ್ತು ಹುಬ್ಬಳ್ಳಿಯಲ್ಲಿ ಶಾಖೆ ಹೊಂದಿದೆ.

ಸಾಕ್ಷಿ ಮಲಿಕ್ – ಸತ್ಯವರ್ತ್ ಕಾದಿಯಾನ್

ಕುಸ್ತಿಪಟುಗಳಾದ ಸಾಕ್ಷಿ – ಸತ್ಯವರ್ತ್ ವಿವಾಹ

2017-04-02

,

ಅಮೂಲ್ಯ – ಜಗದೀಶ್

ಆದಿಚುಂಚನಗಿರಿಯಲ್ಲಿ ನಟಿ ಅಮೂಲ್ಯ – ಜಗದೀಶ್ ವಿವಾಹ

2017-05-12

,

ರಕ್ಷಿತ್‌ ಶೆಟ್ಟಿ – ರಶ್ಮಿಕಾ ಮಂದಣ್ಣ

ನಟ ರಕ್ಷಿತ್‌ ಶೆಟ್ಟಿ – ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ

2017-07-03

,

Mandela is diagnosed with tuberculosis.

Mandela is diagnosed with tuberculosis.

2017-08-27

,

The Loss of an Icon

Nelson Mandela passes away.

2013-12-05

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT