ಕೈತೋಟ

ಹೊಸವರ್ಷಕ್ಕೆ ಹಸಿರಿನ ಉಡುಗೊರೆ

ನಿಮ್ಮ ಹಂಬಲಕ್ಕೆ ಜೊತೆಯಾಗು‌ತ್ತವೆ ಸುಂದರ ಹಸಿರುಗಿಡಗಳು. ಈ ಗಿಡಗಳು ನಿಮ್ಮ ನೆಚ್ಚಿನವರಿಗಲ್ಲದೇ ಪರಿಸರಕ್ಕೂ ನೀವು ನೀಡುವ ಉಡುಗೊರೆ. ಅಲ್ಲದೇ ಈ ವರ್ಷದ ನಿಮ್ಮ ಉಡುಗೊರೆ ಅನೇಕ ವರ್ಷದವರೆಗೂ ನಿಮ್ಮ ಪ್ರೀತಿಪಾತ್ರರ ಮನೆ ಹಾಗೂ ಮನದಲ್ಲಿ ಹಸಿರಾಗಿರುತ್ತದೆ.

ಹೊಸವರ್ಷಕ್ಕೆ ಹಸಿರಿನ ಉಡುಗೊರೆ

ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೀರಾ? ಅವೇ ಗ್ರೀಟಿಂಗ್‌, ಗೊಂಬೆ, ಪುಸ್ತಕ ಇವುಗಳನ್ನು ನೀಡಿ ನಿಮಗೆ ಬೇಸರವಾಗಿದೆಯಾ? ಈ ಬಾರಿ ಹೊಸ ರೀತಿಯ ಉಡುಗೊರೆ ಏನಾದರೂ ನೀಡಬೇಕು ಎಂಬ ಹಂಬಲ ನಿಮ್ಮಲ್ಲಿದೆಯೇ?

ನಿಮ್ಮ ಹಂಬಲಕ್ಕೆ ಜೊತೆಯಾಗು‌ತ್ತವೆ ಸುಂದರ ಹಸಿರುಗಿಡಗಳು. ಈ ಗಿಡಗಳು ನಿಮ್ಮ ನೆಚ್ಚಿನವರಿಗಲ್ಲದೇ ಪರಿಸರಕ್ಕೂ ನೀವು ನೀಡುವ ಉಡುಗೊರೆ. ಅಲ್ಲದೇ ಈ ವರ್ಷದ ನಿಮ್ಮ ಉಡುಗೊರೆ ಅನೇಕ ವರ್ಷದವರೆಗೂ ನಿಮ್ಮ ಪ್ರೀತಿಪಾತ್ರರ ಮನೆ ಹಾಗೂ ಮನದಲ್ಲಿ ಹಸಿರಾಗಿರುತ್ತದೆ.

ಹಸಿರುಪ್ರಿಯರಿಗೆ ಆಯ್ಕೆ ಸುಲಭ ಮಾಡುವ ಟಿಪ್ಸ್ ಇಲ್ಲಿದೆ ನೋಡಿ...

ಗುಲಾಬಿ ಗಿಡ: ಗುಲಾಬಿ ಪ್ರೇಮದ ಸಂಕೇತ. ನಿಮ್ಮ ಹೊಸವರ್ಷಕ್ಕೆ ನಿಮ್ಮ ಇಷ್ಟದವರಿಗೆ ಹೃದಯಾಕಾರದ ಪಾಟ್‌ನಲ್ಲಿ ಗುಲಾಬಿ ಗಿಡವನ್ನು ನೆಟ್ಟು ನೀಡಬಹುದು

ಲ್ಯಾವೆಂಡರ್ ಗಿಡ: ಆಗಾಗಾ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣ ಮಾಡುವವರಾದರೆ ಹಗುರವಾದ ಪಾಟ್‌ನಲ್ಲಿ ಲ್ಯಾವೆಂಡರ್ ಗಿಡ ಇರಿಸಿ ಉಡುಗೊರೆ ನೀಡಬಹುದು

ಗೋಲ್ಡನ್‌ ಸೈಪ್ರೆಸ್‌: ಈ ಗಿಡವನ್ನು ಬಿಳಿಬಣ್ಣದ ಪಾಟ್‌ನಲ್ಲಿ ಇರಿಸಿ ನೀಡಬಹುದು. ಬಿಳಿ ಪಾಟ್ ಹಾಗೂ ಹಸಿರು ಗಿಡದ ಕಾಂಪಿನೇಶನ್ ಮನಸ್ಸಿಗೆ ಮುದ ನೀಡುತ್ತದೆ. ಈ ಗಿಡವನ್ನು ಮನೆಯ ಒಳಗೂ ಇರಿಸಿಕೊಳ್ಳಬಹುದು

ಬೇಬಿ ಆಲೀವ್ ಗಿಡ: ಪರಿಸ ಪ್ರೇಮಿಗಳಿಗೆ ಬೇಬಿ ಆಲೀವ್ ಗಿಡ ಹೆಚ್ಚು ಇಷ್ಟವಾಗುತ್ತದೆ. ಬೆಣಚು ಕಲ್ಲುಗಳಿಂದ ಶೃಂಗಾರ ಮಾಡಿದ ಪಾಟ್‌ನೊಂದಿಗೆ ಈ ಗಿಡವನ್ನು ನೆಟ್ಟುಕೊಡಬಹುದು

ಲಿಲ್ಲಿ ಗಿಡ: ಲಿಲ್ಲಿ ಗಿಡ ಸುಂದರ ಹೂಗಳನ್ನು ನೀಡುತ್ತದೆ. ಇದು ಸಪೂರವಾದ ಗಿಡವಾದ ಕಾರಣ ಅಗಲವಾದ ಪಾಟ್‌ನ ಅಗತ್ಯವಿರುವುದಿಲ್ಲ. ಲಿಲ್ಲಿ ಗಿಡವನ್ನು ಚಿಕ್ಕ ಪಾಟ್‌ನಲ್ಲಿ ನೀಡಬಹುದು. ಅದನ್ನೇ ಪೇಪರ್ ವೈಟ್ ಆಗಿಯೂ ಬಳಸಬಹುದು

ವಿಂಟರ್ ಆರ್ಕಿಡ್‌: ಚಿತ್ತಾಕರ್ಷಕ ನೋಟ ಮತ್ತು ಛಾಪಿನಿಂದ ವಿಂಟರ್ ಆರ್ಕಿಡ್‌ ಗಿಡ ಉಡುಗೊರೆ ಹೆಚ್ಚು ಇಷ್ಟವಾಗುತ್ತದೆ. ಇದರ ಸುಂದರ ಹೂಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ

ಲೋಳೆಸರ: ಸೌಂದರ್ಯದ ಮೇಲೆ ಅತಿ ಕಾಳಜಿ ಸ್ನೇಹಿತ ಅಥವಾ ಸ್ನೇಹಿತೆಗೆ ಲೋಳೆಸರವನ್ನು ಪಾಟ್‌ನಲ್ಲಿರಿಸಿಕೊಡಬಹುದು. ಅದು ಖಂಡಿತಾ ಅವರ ಉಪಯೋಗಕ್ಕೆ ಬರುತ್ತದೆ. ಆ ಕಾರಣಕ್ಕೆ ಅವರು ಅದನ್ನು ಜತನ ಮಾಡುತ್ತಾರೆ

ತುಳಸಿಗಿಡ: ನಿಮ್ಮ ಉಡುಗೊರೆ ನೀಡುವವರು ದೈವಭಕ್ತರೇ, ಹಾಗಾದರೆ ಅವರಿಗೆ ತುಳಸಿಗಿಡ ತುಂಬಾ ಸೂಕ್ತ. ನೀವು ನೀಡದ ಉಡುಗೊರೆಯನ್ನು ಖಂಡಿತಾ ಅವರು ಕಾಪಾಡಿಕೊಳ್ಳುತ್ತಾರೆ

ಲಕ್ಕಿ ಬ್ಯಾಂಬೋ: ಲಕ್ಕಿ ಬ್ಯಾಂಬೋ ಗಿಡ ಇತ್ತೀಚೆಗೆ ಅನೇಕರ ನೆಚ್ಚಿನ ಗಿಡ. ಮನೆಯ ಒಳಗೆ ಸೂರ್ಯನ ಶಾಖವಿಲ್ಲದೇ ಬೆಳೆಯುವ ಈ ಗಿಡ ಅದೃಷ್ಟ ತರುತ್ತದೆ ಎಂಬ ನಂಬಿಕೆ ಇದೆ

Comments
ಈ ವಿಭಾಗದಿಂದ ಇನ್ನಷ್ಟು
ಭೂಮಿಯೂ ಇಲ್ಲಿ ಠೇವಣಿ

ಸೂರು ಸ್ವತ್ತು
ಭೂಮಿಯೂ ಇಲ್ಲಿ ಠೇವಣಿ

9 Mar, 2018
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

ಸೂರು ಸ್ವತ್ತು
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

9 Mar, 2018
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

ಸೂರು ಸ್ವತ್ತು
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

9 Mar, 2018
ಬಗೆಬಗೆ ವಿನ್ಯಾಸ

ಸೂರು ಸ್ವತ್ತು
ಬಗೆಬಗೆ ವಿನ್ಯಾಸ

9 Mar, 2018
ತಾರಸಿ ಮೇಲೆ ಕೈತೋಟ ಮಾಡಿ...

ಸೂರು ಸ್ವತ್ತು
ತಾರಸಿ ಮೇಲೆ ಕೈತೋಟ ಮಾಡಿ...

9 Mar, 2018