ವೀಕ್ಲಿ ಪೋಸ್ಟ್‌

ಕಾಶ್ಮೀರಿ ಚಿಲ್ಲಿ ಚಿಕನ್‌ ಸಮೋಸಕ್ಕೆ ಬಹುಮಾನ

ಜೋಹಾನ್ಸ್‌ಬರ್ಗ್‌ನ ಭಾರತೀಯ ಸಮುದಾಯವದರಿಗೆ ಆಯೋಜಿಸಿದ್ದ ಸಮೋಸ ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಪ್ರಸಿದ್ಧ ಕಾಶ್ಮೀರಿ ಚಿಲ್ಲಿ ಚಿಕನ್‌ ಭರಿತ ಸಮೋಸ ಮೊದಲ ಬಹುಮಾನ ಪಡೆದಿದೆ.

ಕಾಶ್ಮೀರಿ ಚಿಲ್ಲಿ ಚಿಕನ್‌ ಸಮೋಸಕ್ಕೆ ಬಹುಮಾನ

ಜೋಹಾನ್ಸ್‌ಬರ್ಗ್‌: ಇಲ್ಲಿನ ಭಾರತೀಯ ಸಮುದಾಯವದರಿಗೆ ಆಯೋಜಿಸಿದ್ದ ಸಮೋಸ ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಪ್ರಸಿದ್ಧ ಕಾಶ್ಮೀರಿ ಚಿಲ್ಲಿ ಚಿಕನ್‌ ಭರಿತ ಸಮೋಸ ಮೊದಲ ಬಹುಮಾನ ಪಡೆದಿದೆ.

ಇಲ್ಲಿನ ‘ವೀಕ್ಲಿ ಪೋಸ್ಟ್‌’ ವಾರಪತ್ರಿಕೆ ಮೊದಲ ಸಲ ಈ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಚಾಕೊಲೇಟ್‌, ಗೋಡಂಬಿ, ಮತ್ತಿತರ ಪದಾರ್ಥಗಳನ್ನು ಬಳಸಿ ಸಮೋಸ ತಯಾರಿಸಲಾಗಿತ್ತು. ಅವುಗಳನ್ನು ಹಿಂದಿಕ್ಕಿ, ಕಾಶ್ಮೀರಿ ಚಿಲ್ಲಿ ಚಿಕನ್‌ ಸಮೋಸ ಪ್ರಶಸ್ತಿ ಗಳಿಸಿದೆ.

ಸಲ್ಮಾ ಅಗ್ಜೀ ಈ ಸ್ಪರ್ಧೆಯ ವಿಜೇತರು. ‘ಮಕ್ಕಳಿಗೆ ಚಿಕನ್‌ ಸ್ಯಾಂಡ್‌ವಿಚ್‌ ಮಾಡಿ ಕೊಡುತ್ತಿದ್ದೆ. ಆಗ ಚಿಕನ್‌ ಅನ್ನು ಕಾಶ್ಮೀರಿ ಮೆಣಸಿನ ಪುಡಿ ಬಳಸಿ ಸಿದ್ಧಪಡಿಸುತ್ತಿದ್ದೆ. ಈಗ ಅದೇ ಕಾಶ್ಮೀರಿ ಮೆಣಸಿನ ಪುಡಿ ಬಳಸಿ ಸಮೋಸ ಸಿದ್ಧಪಡಿಸಿದ್ದೆ’ ಎಂದು ಸಲ್ಮಾ ತಿಳಿಸಿದ್ದಾರೆ.

‘ಅಡುಗೆ ಮಾಡುವುದನ್ನು ಇಷ್ಟಪಡುತ್ತೇನೆ. ಯಾವುದೇ ಖಾದ್ಯ ತಯಾರಿಕೆ ವಿಧಾನದಲ್ಲಿ ಒಂದಷ್ಟು ಬದಲಾವಣೆ ಮಾಡಿ, ಅದನ್ನು ಇನ್ನಷ್ಟು ರುಚಿಕರವಾಗಿಸಲು ಬಯಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಭಾರತದ ರಾಯಭಾರ ಕಚೇರಿ ಮೇಲೆ ದಾಳಿ

ಕಾಬೂಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮೇಲೆ ರಾಕೆಟ್‌ ದಾಳಿ ನಡೆದಿದೆ. ‘ಭಾರತ–ಟಿಬೆಟ್‌ ಗಡಿ ಪೊಲೀಸ್‌’  ಕಟ್ಟಡಕ್ಕೆ ಸ್ವಲ್ಪ  ಹಾನಿಯಾಗಿದೆ.

16 Jan, 2018

ಲಂಡನ್
ಮಲ್ಯ ಗಡೀಪಾರು ಪ್ರಕರಣ ಮುಂದುವರಿಸಲು ನಿರ್ಧಾರ

ಉದ್ಯಮಿ ವಿಜಯ ಮಲ್ಯ ಗಡೀಪಾರು ಪ್ರಕರಣವನ್ನು ಮುಂದುವರಿಸಲು ಭಾರತ ಸರ್ಕಾರ ಸಿದ್ಧತೆ ನಡೆಸಿದೆ.

16 Jan, 2018

ವಿದೇಶ
‘ಅಣ್ವಸ್ತ್ರ ಯುದ್ಧಕ್ಕೆ ಒಂದೇ ಹೆಜ್ಜೆ’

ಅಣ್ವಸ್ತ್ರ ಯುದ್ಧದ ಬಗ್ಗೆ ನಿಜಕ್ಕೂ ಭೀತಿ ಇದೆ. ವಿಶ್ವವು ಅದರಿಂದ ಒಂದು ಹೆಜ್ಜೆಯಷ್ಟೇ ದೂರ ಇದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

16 Jan, 2018
ಭುಟ್ಟೊ ಹತ್ಯೆ: ಹೊಣೆ ಹೊತ್ತ ತಾಲಿಬಾನ್‌

ನಿಷೇಧಿತ ಉಗ್ರ ಸಂಘಟನೆಯ ಪುಸ್ತಕದಲ್ಲಿ ಉಲ್ಲೇಖ
ಭುಟ್ಟೊ ಹತ್ಯೆ: ಹೊಣೆ ಹೊತ್ತ ತಾಲಿಬಾನ್‌

16 Jan, 2018
ನಕಲಿ ಆಲ್ಕೊಹಾಲ್ ಪತ್ತೆಗೆ ಹೊಸ ಉಪಕರಣ

ವಾಷಿಂಗ್ಟನ್
ನಕಲಿ ಆಲ್ಕೊಹಾಲ್ ಪತ್ತೆಗೆ ಹೊಸ ಉಪಕರಣ

16 Jan, 2018